Triplets Babies: ತ್ರಿವಳಿ ಮಕ್ಕಳು ಜನಿಸಲು ಕಾರಣವೇನು? ಅಧ್ಯಯನ ಏನು ಹೇಳುತ್ತೆ?

Triplets Babies: ಹೆಚ್ಚಾಗಿ ಮಹಿಳೆಯರಿಗೆ (women) ಒಂದು ಬಾರಿ ಒಂದೇ ಮಗು (child) ಜನಿಸುತ್ತದೆ. ಬೆರಳೆಣಿಕೆಯಷ್ಟು ಅವಳಿ ಮಕ್ಕಳು ಜನಿಸುತ್ತಾರೆ. ಹಾಗೇ ಅಪರೂಪವೆಂಬಂತೆ ತ್ರಿವಳಿಗಳೂ ಜನಿಸುತ್ತಾರೆ. ಅಲ್ಲದೆ, ಈ ಹಿಂದೆ ಮಹಿಳೆಯೊಬ್ಬರಿಗೆ ಒಂದೇ ಬಾರಿಗೆ ಬರೋಬ್ಬರಿ ಒಂಬತ್ತು ಮಕ್ಕಳು ಜನಿಸಿದ್ದು, ಗಿನ್ನೆಸ್ ದಾಖಲೆಯೂ (Guinness World Records) ಆಗಿತ್ತು. ಆದರೆ, ನಿಮಗೆ ಗೊತ್ತಾ? ತ್ರಿವಳಿ ಮಕ್ಕಳು (Triplets Babies) ಏಕೆ ಜನಿಸುತ್ತವೆ? ಎಂದು. ಇಲ್ಲಿದೆ ನೋಡಿ ಕಾರಣ.

 

ತ್ರಿವಳಿ ಮಕ್ಕಳು ಜನಿಸಿದರೆ ಆ ಮೂರು ಮಕ್ಕಳು ನೋಡೋದಕ್ಕೆ ಒಂದೇ ತರ ಇರುವುದಿಲ್ಲ. ಅಲ್ಲದೆ, ಒಂದೇ ರೀತಿಯ ತ್ರಿವಳಿ ಮಕ್ಕಳು ಜನಿಸುವುದು ವಿರಳ. ಇನ್ನು ತ್ರಿವಳಿ ಮಕ್ಕಳು ಏಕೆ ಜನಿಸುತ್ತವೆ? ಎಂಬುದರ ಬಗ್ಗೆ ವಿಜ್ಞಾನಿಗಳು ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದು, ಇದೀಗ ಇದರ ರಹಸ್ಯ ಬಹಿರಂಗವಾಗಿದೆ.

ಅಧ್ಯಯನದ ಪ್ರಕಾರ, ಮುಟ್ಟು ಸಮೀಪವಿರುವ ಮಹಿಳೆಯರು ಹಾರ್ಮೋನುಗಳ ಬದಲಾವಣೆಗಳನ್ನು ಅನುಭವಿಸುತ್ತಾರೆ, ಇದು ಅಂಡೋತ್ಪತ್ತಿ ಸಮಯದಲ್ಲಿ ತಮ್ಮ ದೇಹವನ್ನು ಒಂದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಇಡಲು ಪ್ರೋತ್ಸಾಹಿಸಬಹುದು. ಈ ಸಮಯದಲ್ಲಿ ಮಹಿಳೆಗೆ ತ್ರಿವಳಿ ಮಕ್ಕಳಾಗುವ ಸಾಧ್ಯತೆ ಇರುತ್ತದೆ. ವಯಸ್ಸಾದಂತೆ ಅವಳಿ ಮಕ್ಕಳಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 10 ಸಾವಿರ ತ್ರಿವಳಿ ಮಕ್ಕಳು ಜನಿಸುತ್ತವೆ. ಇನ್ ವಿಟ್ರೊ ಫಲೀಕರಣ (ಐವಿಎಫ್), ಅಂಡಾಶಯದ ಸಿಮ್ಯುಲೇಶನ್ ಮತ್ತು ಕೃತಕ ಗರ್ಭಧಾರಣೆ ಸೇರಿದಂತೆ ಎಂಎಆರ್ ಹೆಚ್ಚಳ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಇದಲ್ಲದೆ, ತಾಯಿಯ ಮನೆತನದಲ್ಲಿ ಯಾರಿಗಾದರೂ ಅವಳಿ ಮಕ್ಕಳು ಅಥವಾ ತ್ರಿವಳಿ ಮಕ್ಕಳಿದ್ದರೆ, ಆಗ ನಿಮಗೂ ಕೂಡ ತ್ರಿವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವರದಿ ತಿಳಿಸಿದೆ.

 

ಇದನ್ನು ಓದಿ : Girl Saved Her Brother:ಬಾವಿಗೆ ಬಿದ್ದ ತನ್ನ ತಮ್ಮನನ್ನು ರಕ್ಷಿಸಿದ 3 ನೇ ತರಗತಿಯ ವಿದ್ಯಾರ್ಥಿನಿ! ಬಾಲಕಿಯ ಧೈರ್ಯಕ್ಕೆ ವ್ಯಾಪಕ ಪ್ರಶಂಸೆ 

Leave A Reply

Your email address will not be published.