Optical illusion game : ಬೆಕ್ಕು ಅಡಗಿ ಕುಳಿತಿದೆ! 10ಸೆಕೆಂಡ್ ನಲ್ಲಿ ಪತ್ತೆ ಹಚ್ಚ ಬಲ್ಲಿರಾ!!

Share the Article

Optical illusion games : ಆಪ್ಟಿಕಲ್ ಇಲ್ಯೂಷನ್‌ ಫೋಟೋಗಳು ನಮ್ಮ ಮೆದುಳಿಗೆ ಕೆಲಸ ನೀಡುತ್ತವೆ. ಕೆಲವೊಮ್ಮೆ ಗೊಂದಲವನ್ನುಂಟು ಮಾಡುತ್ತವೆ. ಆದರೂ, ಅವುಗಳಲ್ಲಿ ಅಡಗಿರುವ ವಸ್ತು, ಅಕ್ಷರ, ಪ್ರಾಣಿ ಪಕ್ಷಿಗಳನ್ನು ಕಂಡುಹಿಡಿಯುವ ಚಾಲೆಂಜ್ (Optical illusion games)ಬಹಳ ಕುತೂಹಲವಾಗಿರುತ್ತದೆ.

ನಮ್ಮ ಮೆದುಳು ಕೆಲವು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಮತ್ತು ನಾವು ನೋಡುವುದಕ್ಕೂ, ಗ್ರಹಿಸಿವುದಕ್ಕೂ ವ್ಯತ್ಯಾಸ ಇರುತ್ತವೆ ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಹೇಳಬಹುದು.

ಇದೀಗ ಇಂಟರ್‌ನೆಟ್‌ನಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸಖತ್‌ ವೈರಲ್‌ ಆಗಿದ್ದು, ಈ ಫೋಟೋದಲ್ಲಿ ಬೆಕ್ಕೊಂದು ಅಡಗಿ ಕುಳಿತುಕೊಂಡಿದೆ. ಅದನ್ನು ನೀವು ಪತ್ತೆ ಹಚ್ಚಲು ಒಂದು ಚಾಲೆಂಜ್ ನೀಡಲಾಗಿದೆ.

ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಮನೆಯೊಂದರ ಹೊರಾಂಗಣದಲ್ಲಿ ಗಾರ್ಡನ್ ಏರಿಯಾವನ್ನು ಕಾಣಬಹುದು. ಫೋಟೋದ ಒಂದು ಭಾಗದಲ್ಲಿ ಗಿಡಗಳು ಬೆಳದಿರುವ ಹಳ್ಳದ ಜಾಗವಿದೆ. ಅಲ್ಲಿ ಬೆಕ್ಕೊಂದು ಅಡಗಿ ಕುಳಿತಿದೆ. ಆದರೆ, ಅದನ್ನು ಪತ್ತೆಹಚ್ಚುವುದು ಸುಲಭದ ಮಾತಲ್ಲ. ಏಕೆಂದರೆ, ತಕ್ಷಣಕ್ಕೆ ಬೆಕ್ಕು ಎಲ್ಲಿದೆ ಎಂದು ಗೊತ್ತಾಗುವುದಿಲ್ಲ. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ, ಬೆಕ್ಕು ಕಾಣಿಸುತ್ತದೆ. ನಿಮಗೆ 10 ಸೆಕೆಂಡ್ ಸಮಯ
ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ಬೆಕ್ಕು ಎಲ್ಲಿದೆ ಎಂದು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು.

10 ಸೆಕೆಂಡ್ ಸಮಯದಲ್ಲಿ ನೀವು ಫೋಟೋದಲ್ಲಿ ಬೆಕ್ಕನ್ನು ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್ ಮಾರ್ಕ್ಸ್ ಕೊಟ್ಟುಬಿಡಿ. ಒಂದು ವೇಳೆ ಬೆಕ್ಕನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.

ಒಟ್ಟಿನಲ್ಲಿ ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದರಿಂದ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್‌ಗಳು ಪ್ರಯೋಜನಕಾರಿ ಆಗಿದ್ದು, ಬಿಸಿ ಶೆಡ್ಯೂಲ್ ಸಮಯದಲ್ಲಿ ಮನಸಿಗೆ ರಿಲ್ಯಾಕ್ಸ್ ನೀಡುವ ಒಂದು ಉಪಾಯವಾಗಿದೆ.

ಇದನ್ನು ಓದಿ : Aathur Sri Sadashiva Mahaganapati Temple : ಕಡಬ: ಆತೂರು ಶ್ರೀ ಸದಾಶಿವ ಮಹಾಗಣಪತಿ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದ ಗಂಧದ ಕಡ್ಡಿಯ ಹೊಗೆ 

Leave A Reply