Safest cars India : ಗ್ಲೋಬಲ್ NCAP ಪಟ್ಟಿಯಲ್ಲಿ ಭಾರತದ ಉತ್ತಮ ಸುರಕ್ಷಿತ ಕಾರುಗಳ ಪಟ್ಟಿ ಇಲ್ಲಿದೆ
Safest cars India : : ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಅತ್ಯಂತ ಜನಪ್ರಿಯ ಎಸ್‌ಯುವಿಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೊ ಎನ್ ಒಂದಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮ ಕಾರೆಂದು ಹೆಸರುವಾಸಿಯಾಗಿದೆ.
ಭಾರತದ ಟಾಟಾ ಹಾಗೂ ಮಹೀಂದ್ರಾ ಕಂಪನಿಯ ಹೆಚ್ಚಿನ ಕಾರುಗಳು ಈ ಪಟ್ಟಿಯಲ್ಲಿ ಸ್ಥಾನ ಗಳಿಸಿ, 5 ಸ್ಟಾರ್ ರೇಟಿಂಗ್ (Safest cars India ) ಪಡೆದ ಹೆಮ್ಮೆಗೆ ಕೂಡ ಪಾತ್ರವಾಗಿದೆ.
ಇನ್ನು ಮಹೀಂದ್ರಾ ಸ್ಕಾರ್ಪಿಯೊ ವಯಸ್ಕರ ರಕ್ಷಣೆಯಲ್ಲಿ 34ಕ್ಕೆ 29.25 ಅಂಕಗಳನ್ನು ಗಳಿಸಿ, ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದ್ದು, ಮಕ್ಕಳ ರಕ್ಷಣೆಯಲ್ಲಿ 49ಕ್ಕೆ 28.93 ಅಂಕಗಳ ಮೂಲಕ 3 ಸ್ಟಾರ್ ರೇಟಿಂಗ್ ಗಳಿಸಿದೆ. ಸ್ಕಾರ್ಪಿಯೊ ಎನ್ ರೂ.12.74 ಲಕ್ಷದಿಂದ 24.05 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ.
ವರ್ಟಸ್ ಮಿಡ್-ಸೈಜ್ ಸೆಡಾನ್ ಗಳು 5 ಸ್ಟಾರ್ ರೇಟಿಂಗ್ ಪಡೆದಿದ್ದು, ದೇಶದ ಬೆಸ್ಟ್ ಸೇಫ್ಟಿ ಕಾರುಗಳ ಪಟ್ಟಿಯಲ್ಲಿ ಸ್ಥಾನಪಡೆದಿವೆ. ಇವೆರಡು ಸೆಡಾನ್ ಗಳು ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 29.71 ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 42 ಅಂಕಗಳನ್ನು ಪಡೆಯುವ ಮೂಲಕ 5 ಸ್ಟಾರ್ ರೇಟಿಂಗ್ ಗಳಿಸಿವೆ.
ಟಾಟಾದ ಬಹುನೀರಿಕ್ಷಿತ ‘ಪಂಚ್’ ರೂ.10ದೊಳಗೆ ಸಿಗುವ ಉತ್ತಮ ಸುರಕ್ಷಿತ ಕಾರಾಗಿದೆ. ಗ್ಲೋಬಲ್ ಎನ್‌ಸಿಎಪಿ ಕ್ಯಾಶ್ ಟೆಸ್ಟ್ ನಲ್ಲಿ ವಯಸ್ಕರ ರಕ್ಷಣೆಯಲ್ಲಿ 17ಕ್ಕೆ 16.45 ಅಂಕ ಪಡೆದು 5 ಸ್ಟಾರ್ ರೇಟಿಂಗ್ ತನ್ನದಾಗಿಸಿಕೊಂಡಿದೆ. ಮಕ್ಕಳ ರಕ್ಷಣೆಯಲ್ಲಿ 49ಕ್ಕೆ 40.89 ಸ್ಕೋರ್ ಮಾಡುವ ಮೂಲಕ 4 ಸ್ಟಾರ್ ರೇಟಿಂಗ್ ಗಳಿಸಿದೆ. ಟಾಟಾ ಪಂಚ್ ಕಾರು, 18 – 20 kmpl ಮೈಲೇಜ್ ನೀಡಲಿದ್ದು, 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.
ಟಾಟಾ ಆಲ್ಟ್ಜ್, ಹ್ಯಾಚ್‌ಲ್ಯಾಕ್ ಆಗಿದ್ದರೂ ಗ್ಲೋಬಲ್ ಎನ್‌ಸಿಎಪಿ ಅತ್ಯುತ್ತಮ ಸುರಕ್ಷಿತ ಕಾರೆಂದು ಗುರುತಿಸಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 17ಕ್ಕೆ 16.13 ಅಂಕಗಳನ್ನು ಗಳಿಸುವ ಮೂಲಕ 5 ಸ್ಟಾರ್ ರೇಟಿಂಗ್ ಪಡೆದಿದೆ. ಅಲ್ಲದೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 29 ಅಂಕಗಳನ್ನು ಗಳಿಸುವ ಮೂಲಕ 3 ಸ್ಟಾರ್ ರೇಟಿಂಗ್ ತನ್ನಾಗಿಸಿಕೊಂಡಿದೆ. ಈ ಕಾರು, ರೂ.6.45 ಲಕ್ಷದಿಂದ ರೂ.10.40 ಲಕ್ಷ ಬೆಲೆಯನ್ನು ಹೊಂದಿದೆ.
ಮೊದಲ ಮೆಡ್ ಇನ್ ಕಾರಾಗಿರುವ ‘ಟಾಟಾ ನಿಕ್ಸನ್’ 2018ರಲ್ಲಿಯೇ ಗ್ಲೋಬಲ್ ಎನ್‌ಸಿಎಪಿ ಕ್ಯಾಶ್ ಟೆಸ್ಟ್ ನಲ್ಲಿ ವಯಸ್ಕರ ರಕ್ಷಣೆಯಲ್ಲಿ 17ಕ್ಕೆ 16.06 ಅಂಕಗಳನ್ನು ಪಡೆದುಕೊಳ್ಳುವ 5 ಸ್ಟಾರ್ ರೇಟಿಂಗ್ ಗಳಿಸಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 25ಕ್ಕೆ 17 ಅಂಕ ಗಳಿಸುವ ಮೂಲಕ 3 ಸ್ಟಾರ್ ಪಡೆದಿದೆ. ಈ ಕಾರು, ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್, ABS(ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಹೊಂದಿದೆ.
ಮಹೀಂದ್ರಾ XUV300, ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯ ವಯಸ್ಕ ರಕ್ಷಣೆಯಲ್ಲಿ 17ಕ್ಕೆ 16.42 ಸ್ಕೋರ್ ಮಾಡಿ, 5 ಸ್ಟಾರ್ ರೇಟಿಂಗ್ ಪಡೆದಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 37.44 ಅಂಕ ಗಳಿಸಿ, 3 ಸ್ಟಾರ್ ರೇಟಿಂಗ್ ಗಳಿಸಿದೆ. ಇನ್ನು XUV700 ಕೂಡ ವಯಸ್ಕ ರಕ್ಷಣೆ ವಿಭಾಗದಲ್ಲಿ 5 ಸ್ಟಾರ್, ಮಕ್ಕಳ ರಕ್ಷಣೆಯಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ.
ಸ್ಲಾವಿಯಾ ಹಾಗೂ ವರ್ಟಸ್ ಕಾರುಗಳು ಮಾತ್ರವಲ್ಲದೆ, ಸ್ಕೋಡಾ ಕುಶಾಕ್ ಹಾಗೂ ಪೋಕ್ಸ್ವ್ಯಾಗನ್ ಟೈಗನ್ ಕಾರುಗಳು ಕೂಡ
ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿವೆ. ವಯಸ್ಕರ ರಕ್ಷಣೆಯಲ್ಲಿ 34ಕ್ಕೆ 29.64 ಅಂಕ ಹಾಗೂ ಮಕ್ಕಳ ಸುರಕ್ಷತೆ ವಿಭಾಗದಲ್ಲಿ 49ಕ್ಕೆ 42 ಅಂಕಗಳನ್ನು ಗಳಿಸಿವೆ. ಸ್ಕೋಡಾ ಕುಶಾಕ್ ರೂ.11.59 – 19.69 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದರೆ, ಪೋಕ್ಸ್ವ್ಯಾಗನ್ ಟೈಗನ್ ರೂ.11.62- 19.06 ಲಕ್ಷ ದರವನ್ನು ಪಡೆದಿದೆ.
ಈ ಮೇಲಿನ ಕಾರುಗಳಿಗೆ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಕಾರುಗಳಿಗೆ ಕ್ರಾಶ್ ಒಳಗೊಂಡಂತೆ ವಿವಿಧ ಸುರಕ್ಷಿತ ಪರೀಕ್ಷೆ ನಡೆಸಿ, ಈ ರೀತಿ ರೇಟಿಂಗ್ ನೀಡಿರುವುದಾಗಿದೆ.
ಇದನ್ನು ಓದಿ: ಕೇವಲ 47 ಸೆಕುಂಡುಗಳಲ್ಲಿ ದೂರದ ಸ್ಥಳಕ್ಕೆ ತಲುಪಿಸುವ ವಿಮಾನ! ವಿಚಿತ್ರ ಆದರೂ ಸತ್ಯ!