Girl Saved Her Brother:ಬಾವಿಗೆ ಬಿದ್ದ ತನ್ನ ತಮ್ಮನನ್ನು ರಕ್ಷಿಸಿದ 3 ನೇ ತರಗತಿಯ ವಿದ್ಯಾರ್ಥಿನಿ! ಬಾಲಕಿಯ ಧೈರ್ಯಕ್ಕೆ ವ್ಯಾಪಕ ಪ್ರಶಂಸೆ

Girl Saved Her Brother: ತನ್ನ ತಮ್ಮ ಅಪಾಯದ ಸುಳಿಯಲ್ಲಿ ಸಿಲುಕಿದ್ದನ್ನು ಕಂಡು ಮೂರನೇ ತರಗತಿ ವಿದ್ಯಾರ್ಥಿನಿ ದಿಯಾ ಜೀವದ ಹಂಗು ತೊರೆದು ತಮ್ಮನ ರಕ್ಷಣೆ (Girl Saved Her Brother)ಮಾಡಿದ ಘಟನೆ ಬೆಳಕಿಗೆ ಬಂದಿದೆ.

 

ಸುಮಾರು 20 ಅಡಿ ಆಳದ ಬಾವಿಗೆ (Well) ಬಿದ್ದಿದ್ದ ಸಹೋದರ ಇವಾನ್​ನನ್ನು 8 ವರ್ಷದ ದಿಯಾ ರಕ್ಷಣೆ ಮಾಡಿದ್ದು, ಕಳೆದ ಮಂಗಳವಾರ ಸಂಜೆ 5 ಗಂಟೆಗೆ ನಡೆದಿದೆ ಎಂದು ತಿಳಿದುಬಂದಿದೆ. ದಿಯಾ ಅವರ ಕುಟುಂಬ (Family) ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಈ ಘಟನೆ ನಡೆದ ಸಂದರ್ಭದಲ್ಲಿ ಕುಟುಂಬದವರು ಎಂದಿನಂತೆ ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿದ್ದರು ಎನ್ನಲಾಗಿದೆ. ದಿಯಾ ತಾಯಿ ಪಾತ್ರೆ ತೊಳೆಯುತ್ತಿದ್ದು, ದಿಯಾ ಮತ್ತು ಆಕೆಯ ತಂಗಿ ದುನಿಯಾ ತಮ್ಮ ತಾಯಿಗೆ ನೆರವಾಗುತ್ತಿದ್ದರು. ಯಾರೂ ಗಮನಿಸದ ಸಂದರ್ಭದಲ್ಲಿ ಇವಾನ್​ ಬಾವಿಯ ಸುತ್ತು ಅಳವಡಿಸಿದ್ದ ಕಬ್ಬಿಣದ ಗ್ರಿಲ್‌ ಮೇಲೆ ಹತ್ತಿದ್ದಾನೆ. ಆದರೆ, ಕಬ್ಬಿಣ ತುಕ್ಕು ಹಿಡಿದಿದ್ದ ಪರಿಣಾಮ ಮಧ್ಯದ ಭಾಗ ಒಡೆದು 20 ಅಡಿ ಆಳದ ಬಾವಿಗೆ ಇವಾನ್​ ಬಿದ್ದ ಘಟನೆ (Fell Down To well)ನಡೆದಿದೆ.

ಈ ಸಂದರ್ಭ ಬಿದ್ದ ಬಾಲಕ ಜೋರಾಗಿ ಕೂಗಿದ್ದು, ಇದನ್ನು ಕೇಳಿಸಿಕೊಂಡ ದಿಯಾ ಬಾವಿಯ ಸಮೀಪ ಧಾವಿಸಿದ ಸಂದರ್ಭ ಸಹೋದರ ತೇಲುತ್ತಾ ಒದ್ದಾಡುತ್ತಿರುವುದನ್ನು ಗಮನಿಸಿ ತಕ್ಷಣವೇ, ಪಿವಿಸಿ ಪೈಪ್ (PVC Pipe)ಮೂಲಕ ಬಾವಿಗೆ ಇಳಿದು, ಇವಾನ್ ಅನ್ನು ತನ್ನ ಹತ್ತಿರಕ್ಕೆ ಹಿಡಿದು(Girl Saved Her Brother) ಎಳೆದುಕೊಂಡಿದ್ದಾಳೆ. ಜೊತೆಗೆ ತನ್ನ ಮತ್ತೊಂದು ಕೈಯಿಂದ ಪೈಪ್ ಅನ್ನು ಹಿಡಿದಿದ್ದು, ಇದನ್ನು ಗಮಿನಿಸಿದ ತಾಯಿ ಶಾಜಿಲ ಜೋರಾಗಿ ಕೂಗಿಕೊಂಡಿದ್ದಾರೆ. ಅದನ್ನು ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ದೌಡಾಯಿಸಿದ್ದು, ಆ ಬಳಿಕ ಮಕ್ಕಳಿಬ್ಬರನ್ನು ಬಾವಿಯಿಂದ ರಕ್ಷಣೆ ಮಾಡಿದ್ದಾರೆ.

ಸದ್ಯ, ದಿಯಾ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ, ಇವಾನ್ ತಲೆಗೆ ಸಣ್ಣ ಗಾಯವಾಗಿದ್ದು, ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದಲ್ಲಿ (ICU)ಚಿಕಿತ್ಸೆ(Treatment) ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಆದರೆ, ವೈದ್ಯರು(Doctors) ಯಾವುದೇ ರೀತಿ ಹೆದರುವ ಅವಶ್ಯಕತೆಯಿಲ್ಲ ಎಂಬ ಭರವಸೆ ನೀಡಿದ್ದಾರೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ವೈದ್ಯರ ಫೋನ್‌ಗೆ ವಿಡಿಯೋ ಕರೆ ಮಾಡಿ ಮಗುವಿನೊಂದಿಗೆ ಮಾತನಾಡಿ, ಮಗುವಿಗೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ, ಸಚಿವೆ ವೀಣಾ ಜಾರ್ಜ್ ಸೂಚನೆಯ ಅನುಸಾರ, ಮಾವೇಲಿಕ್ಕರ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಕೆ.ಎ.ಜಿತೇಶ್ ಅವರು ಮಗುವಿನ ಮನೆಗೆ ಭೇಟಿ ನೀಡಿ ಸಿಹಿತಿಂಡಿ ನೀಡಿ ದಿಯಾಳನ್ನು ಅಭಿನಂದಿಸಿದ್ದಾರೆ ಎಂದು ತಿಳಿದು ಬಂದಿದೆ. ತನ್ನ ಜೀವದ ಹಂಗು ತೊರೆದು ತಮ್ಮನ ರಕ್ಷಣೆ ಮಾಡಿದ 3ನೇ ತರಗತಿ ವಿದ್ಯಾರ್ಥಿನಿ ದಿಯಾಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ದೈರ್ಯ, ಸಾಹಸ ಪ್ರವೃತ್ತಿಗೆ ಮೆಚ್ಚುಗೆ ಸೂಚಿಸಿದ್ದಾರೆ.

 

ಇದನ್ನು ಓದಿ : Court Low Rules : ಮಹಿಳೆ ಸ್ನಾನ ಮಾಡೋದನ್ನು ಇಣುಕಿ ನೋಡುವುದು ಅಪರಾಧ- ಹೈಕೋರ್ಟ್ 

2 Comments
  1. binance anm"alan says

    Your point of view caught my eye and was very interesting. Thanks. I have a question for you.

  2. registro na binance says

    Thanks for sharing. I read many of your blog posts, cool, your blog is very good.

Leave A Reply

Your email address will not be published.