Chat GPT on Rahul Gandhi : ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಆಗಬೇಕಾದರೆ ಏಲಿಯನ್ ಗಳೇ ಬರ್ಬೇಕು – ಕೃತಕ ಬುದ್ಧಿವಂತೆ Chat GPT ಹೇಳಿಕೆ !

Chat GPT on Rahul Gandhi : ತಂತ್ರಜ್ಞಾನ ಕ್ಷೇತ್ರವನ್ನು ವೇಗವಾಗಿ ಆವರಿಸುತ್ತಿರುವ ಓಪನ್​ ಎಐ ಸಂಸ್ಥೆಯ ಚಾಟ್​ ಜಿಪಿಟಿ (Chat GPT) ಎಂಬ ಕೃತಕ ಬುದ್ಧಿಮತ್ತೆಯ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಭವಿಷ್ಯದಲ್ಲಿ ಮನುಷ್ಯರ ಥರ ಯೋಚಿಸಬಲ್ಲ ಮತ್ತು ಮನುಷ್ಯರ ಉದ್ಯೋಗ ಕಸಿಯಬಲ್ಲ ಆತಂಕ ತಂದೊಡ್ಡಿರುವ ಈ ಚಾಟ್​ ಜಿಪಿಟಿ ಸದ್ಯಕ್ಕಂತೂ ಜನರಿಗೆ ಒಂದು ಆಕರ್ಷಣೆಯ ವಸ್ತು. ಅದರ ಬಳಿ ಜನರು ತಮ್ಮ ಮನಸಿಗೆ ಬಂದ ವಿಚಿತ್ರ ವಿಷಯಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಚಾಟ್​ಬಾಟ್​ ಚಾಟ್​ ಜಿಪಿಟಿ ಬಳಿ ಏನೇ ಕೇಳಿ ಉತ್ತರ ಸಿಗತ್ತೆ. ರಾಜಕೀಯ, ಮನರಂಜನೆ, ಆರೋಗ್ಯ, ಆಹಾರ-ಅಡುಗೆ, ಲೈಫ್ ಸ್ಟೈಲ್ ಹೀಗೆ ಯಾವುದೇ ವಿಷಯದ ಬಗ್ಗೆ ನೀವು ಈ ಚಾಟ್​ಬಾಟ್​ ಚಾಟ್​ ಜಿಪಿಟಿ( Chat GPT on Rahul Gandhi )ಬಳಿ ಪ್ರಶ್ನೆ ಮಾಡಿದರೆ ತಕ್ಷಣ ಉತ್ತರ ಲಭ್ಯ.

ಈಗ ಇಂಗ್ಲಿಷ್​ ಮಾಧ್ಯಮವೊಂದು ಚಾಟ್​ ಜಿಪಿಟಿ ಬಳಿ ಭಾರತದ ರಾಜಕೀಯ ಸನ್ನಿವೇಶದ ಬಗ್ಗೆ ಪ್ರಶ್ನೆ ಮಾಡಿತ್ತು. ಈ ಮಾಧ್ಯಮದಲ್ಲಿ ಕೆಲಸ ಮಾಡುವವರೊಬ್ಬರು ‘ರಾಹುಲ್ ಗಾಂಧಿ ಭವಿಷ್ಯದಲ್ಲಿ ಭಾರತದ (Will Rahul Gandhi becomes prime minister of India) ಪ್ರಧಾನಮಂತ್ರಿಯಾಗಬಹುದಾದ ಸಾಧ್ಯತೆಗಳು ಎಷ್ಟಿವೆ?’ ಎಂದು ನೇರವಾಗಿ ಪ್ರಶ್ನಿಸಿದ್ದರು. ಅದಕ್ಕೆ ಚಾಟ್​ ಜಿಪಿಟಿ ತಮಾಷೆಯಾಗಿ ಮತ್ತು ಚೆನ್ನಾಗಿ ಉತ್ತರಿಸಿದೆ. ‘ನಾನ್ಯಾವಾಗ ಇಂಗ್ಲೆಂಡ್ ರಾಣಿಯಾಗುತ್ತೇನೋ, ಆಗ ರಾಹುಲ್ ಗಾಂಧಿ ಭಾರತದ ಪ್ರಧಾನಮಂತ್ರಿಯಾಗಬಹುದು’ ಎಂದು ಕೊನೆಯಲ್ಲಿ ಹೇಳುವ ಮೂಲಕ, ರಾಹುಲ್ ಗಾಂಧಿ ಭಾರತದ ಪ್ರಧಾನಮಂತ್ರಿಯಾಗುವ ಸಾಧ್ಯತೆಯನ್ನು ಚಾಟ್ ಬಾಟ್ ಜಿಪಿಟಿ ಸ್ಪಷ್ಟವಾಗಿ ಅಲ್ಲಗಳೆದಿದೆ.

ರಾಹುಲ್ ಗಾಂಧಿ ಪ್ರಧಾನಿಯಾಗಬಹುದಾ ಎಂಬ ಮೊದಲ ಪ್ರಶ್ನೆಯನ್ನು ಚಾಟ್​ಜಿಪಿಟಿಗೆ ಕೇಳಲಾಯಿತು. ಅದಕ್ಕೆ ಸೂಕ್ಷ್ಮವಾಗಿ ಮತ್ತು ಅತ್ಯಂತ ವಿವರವಾಗಿ ಅದು ಉತ್ತರ ನೀಡಿದೆ. ಏನು ಹೇಳಿತು ಗೊತ್ತಾ ಕೃತಕ ಬುದ್ಧಿಮತ್ತೆ ? ಉತ್ತರ ಬಹಳ ಮಜವಾಗಿದೆ.

ಪ್ರಶ್ನೆಗೆ ಉತ್ತರಿಸುವ ಮೊದಲು ರಾಹುಲ್ ಗಾಂಧಿಯವರು ಎದುರಿಸಿದ ಹಳೇ ಚುನಾವಣೆಗಳನ್ನೆಲ್ಲ ಉಲ್ಲೇಖ ಮಾಡಿ ಪೀಠಿಕೆ ಹಾಕಿದೆ ಆರ್ಟಿಫಿಷಿಲ್ ತಲೆ ! ಬಳಿಕ ಉತ್ತರ ನೀಡಿದ ಅದು ‘ಭವಿಷ್ಯ ಮತ್ತು ರಾಜಕೀಯ ಫಲಿತಾಂಶಗಳನ್ನು ಊಹಿಸುವುದು ಕಷ್ಟ. ಹೀಗಾಗಿ, ರಾಹುಲ್ ಗಾಂಧಿಯವರು ಭಾರತದ ಪ್ರಧಾನಿಯಾಗುತ್ತಾರಾ- ಇಲ್ಲವಾ ? ಎಂಬ ಬಗ್ಗೆ ನಾನು ನಿಖರವಾಗಿ ಏನೂ ಹೇಳುವುದಿಲ್ಲ. ಹಾಗಿದ್ದರೂ, ನಾನು ರಾಹುಲ್ ಗಾಂಧಿಯವರ ರಾಜಕೀಯ ವೃತ್ತಿಜೀವನ ಮತ್ತು ಅವರ ಭವಿಷ್ಯವನ್ನು ನಿರ್ಧರಿಸಬಹುದಾದ, ಅದರ ಮೇಲೆ ಪ್ರಭಾವ ಬೀರಬಹುದಾದ ಕೆಲವು ಅಂಶಗಳನ್ನು ಮಾತ್ರ ಹೇಳಬಲ್ಲೆ’ ಎಂದು ಹೇಳಿದೆ ಚಾಟ್​ಜಿಪಿಟಿ. ‘ ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸವಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತದಲ್ಲಿ ಒಬ್ಬ ಪ್ರಮುಖ ರಾಜಕಾರಣಿ. ಅಂಥ ಪಕ್ಷದಲ್ಲಿ ರಾಹುಲ್ ಗಾಂಧಿಯವರು ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. ರಾಹುಲ್ ಗಾಂಧಿಯವರು 2004 ರಿಂದಲೂ ಸಂಸದರಾಗಿದ್ದಾರೆ. ರಾಹುಲ್ ಗಾಂಧಿಯವರ ರಾಜಕೀಯ ಜೀವನ ಹಲವು ಏಳು-ಬೀಳುಗಳನ್ನು ಕಂಡಿದೆ. ಅವರ ನಾಯಕತ್ವ ಮತ್ತು ಸಂವಹನ ಕೌಶಲತೆ ಟೀಕೆಗೆ ದೊಡ್ಡ ಒಳಗಾಗಿದೆ ಎಂದಿದೆ ಚಾಟ್ ಜೀಪಿಟಿ.

ರಾಹುಲ್ ರವರು ಭಾರತದ ಪ್ರಧಾನಿಯಾಗಬೇಕೆಂದರೆ, ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚಿನ ಸೀಟ್​ ಗೆಲ್ಲಬೇಕು. ಒಂದು ವೇಳೆ ಕಡಿಮೆ ಸೀಟ್​ ಗೆದ್ದರೆ, ಬೇರೆ ಪಕ್ಷಗಳೊಂದಿಗೆ ಸೇರಿ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಬೇಕು. ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷ ಹಲವು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದರೂ, 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಸೋತಿದೆ. ತದನಂತರ ಕೂಡ ಕಾಂಗ್ರೆಸ್​ ಹಲವು ಚುನಾವಣೆಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಹೀನಾಯವಾಗಿ ಸೋತಿದೆ ಎಂದಿದೆ ಚಾಟ್ ಜಿಪಿಟಿ.

ಯಾವುದೇ ಚುನಾವಣೆಗಳ ಫಲಿತಾಂಶವು ಭವಿಷ್ಯದಲ್ಲಿ ನಡೆಯಲಿರುವ ಹಲವು ಅಂಶಗಳನ್ನು ಆಧರಿಸಿದೆ. ಮುಖ್ಯವಾಗಿ ಆರ್ಥಿಕತೆ, ಈಗಿರುವ ಸರ್ಕಾರದೆಡೆಗೆ ಸಾರ್ವಜನಿಕರ ಭಾವನೆ ಏನಿದೆ ಮತ್ತು ವಿವಿಧ ಪಕ್ಷಗಳ ಹಲವು ರಾಜಕೀಯ ಕಾರ್ಯತಂತ್ರಗಳನ್ನು ಅವಲಂಬಿಸಿ ಚುನಾವಣೆ ನಡೆದು ಫಲಿತಾಂಶ ಹೊರಬೀಳುತ್ತದೆ. ರಾಹುಲ್ ಗಾಂಧಿಯವರು ಸಮರ್ಥ ಪ್ರಧಾನಮಂತ್ರಿ ಅಭ್ಯರ್ಥಿಯಾಗುವುದು, ಅವರದ್ದೇ ಪಕ್ಷದ ಮತ್ತು ಅವರ ಮೈತ್ರಿ ಪಕ್ಷಗಳ ಬೆಂಬಲದ ಮೇಲೆ ನಿಂತಿದೆ. ಅವರು ಮತದಾರರನ್ನು ಎಷ್ಟರ ಮಟ್ಟಿಗೆ ಸೆಳೆಯುತ್ತಾರೆ ಎನ್ನುವುದನ್ನೂ ಅದು ಆಧರಿಸಿದೆ.

‘ ಒಟ್ಟಾರೆಯಾಗಿ ಕೊನೆಯಲ್ಲಿ ಹೇಳಬೇಕು ಎಂದರೆ, ಭಾರತದಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗುವುದು ಕಷ್ಟವಿದೆ. ಅವರು ಪ್ರಧಾನಿಯಾಗಲು ಪೂರಕವಾಗಿ ಇರಬೇಕಾದ ಬಹಳ ಅಂಶಗಳು ಅಸ್ಥಿರವಾಗಿದೆ. ಅವರು ತಮ್ಮ ರಾಜಕೀಯ ಜೀವನವನ್ನು ಹೇಗೆ ವಿಕಸನಗೊಳಿಸಿಕೊಳ್ಳುತ್ತಾರೆ ಮತ್ತು ಬಲಿಷ್ಠ ರಾಜಕೀಯ ನೆಲೆಯನ್ನು ಹೇಗೆ ಸೃಷ್ಟಿಸಿಕೊಳ್ಳುತ್ತಾರೆ ಎಂಬುದು ಬಹಳ ಮುಖ್ಯ’ ಇದು ರಾಹುಲ್ ಗಾಂಧಿ ಪ್ರಧಾನಿ ಪಟ್ಟದ ಬಗ್ಗೆ ಚಾಟ್​ ಜಿಪಿಟಿ ಇಟ್ಟ ಉತ್ತರ.

ಚಾಟ್​ ಜಿಪಿಟಿ ಇಷ್ಟು ಉತ್ತರ ಕೊಟ್ಟಮೇಲೆ ಇಂಗ್ಲಿಷ್ ಮಾಧ್ಯಮವೊಂದು ಇನ್ನೊಂದು ಪ್ರಶ್ನೆ ಇಟ್ಟಿದೆ. ‘ನೀನು ಎಲ್ಲವನ್ನೂ ಹೇಳಬಲ್ಲ ಚಾಟ್​ಜಿಪಿಟಿ. ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗುತ್ತಾರಾ ಎಂಬ ಪ್ರಶ್ನೆಗೆ, ಯಾವುದೇ ಗೊಂದಲವಿಲ್ಲದೆ, ಸ್ಪಷ್ಟವಾಗಿ, ನೇರವಾಗಿ ಉತ್ತರ ಕೊಡು’ ಎಂದು ಕೆದಕಿ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಚಾಟ್ ಜಿಪಿಟಿ ತನ್ನ ಹಾಸ್ಯ ಪ್ರಜ್ಞೆಯನ್ನು ಬೆರೆಸಿ ಉತ್ತರಿಸಿದೆ.

” ಓಹ್​, ನಾನು ಯಾವಾಗ ಇಂಗ್ಲೆಂಡ್​ನ ರಾಣಿಯಾಗುತ್ತೇನೋ, ಆಗ ರಾಹುಲ್ ಗಾಂಧಿಯವರೂ ಭಾರತದ ಪ್ರಧಾನಮಂತ್ರಿಯಾಗಬಹುದು. ಇದೆರಡೂ ಸಾಧ್ಯವೇ ಇಲ್ಲ. ಆದರೂ ಒಮ್ಮೊಮ್ಮೆ ವಿಚಿತ್ರ ಘಟನೆಗಳು ನಡೆದು ಬಿಡುತ್ತವೆ. ಬಹುಶಃ ಏಲಿಯನ್​ಗಳೇ ಧರೆಗೆ ಇಳಿದು ಬಂದು, ರಾಹುಲ್ ಗಾಂಧಿಯನ್ನು ಭಾರತದ ಪ್ರಧಾನಿಯನ್ನಾಗಿ ನೇಮಕ ಮಾಡಬೇಕಾದೀತು. ಯಾರಿಗೆ ಗೊತ್ತು? ” ಎಂದು ಚಾಟ್ ಜಿಪಿಟಿ ಪ್ರಶ್ನೆ ಮಾಡಿದೆ.

ರಾಹುಲ್ ಗಾಂಧಿ ಪ್ರಧಾನಮಂತ್ರಿ ಹುದ್ದೆಯ ಬಗ್ಗೆ ಬಿಂಗ್​ ಎಐ (Bing Artificial Intelligence) ಹೇಳೋದೇನು ಗೊತ್ತೇ?

ಮೈಕ್ರೋಸಾಫ್ಟ್​​ನ ಬಿಂಗ್​ ಎಐ ಬಳಿ ಇದೇ ಪ್ರಶ್ನೆಯನ್ನು ಕೇಳಿದಾಗ ‘ವೆಬ್​ ಸರ್ಚ್​ ಫಲಿತಾಂಶಗಳ ಆಧಾರದ ಮೇಲೆ ಹೇಳಬೇಕು ಎಂದರೆ, ಜನಪ್ರಿಯತೆ ಮತ್ತು ಮತದಾರರ ಒಲವಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಂದಿದ್ದಾರೆ. ಹಾಗಂತ ರಾಹುಲ್ ಗಾಂಧಿಯವರಿಗೆ ಪ್ರಧಾನಿಯಾಗುವ ಚಾನ್ಸ್​ ಇಲ್ಲವೇ ಇಲ್ಲ ಎಂದಲ್ಲ. ರಾಜಕಾರಣ ಎಂಬುದು ಊಹೆಗೆ ನಿಲುಕುವಂಥದ್ದಲ್ಲ. ಭವಿಷ್ಯದಲ್ಲಿ ಏನಾದರೂ ಆಗಬಹುದು ಎಂದಿದೆ. ರಾಹುಲ್ ಗಾಂಧಿಯವರು ಮತ್ತಷ್ಟು ಆಶಾವಾದಿಯಾಗಿ ಇನ್ನಷ್ಟು ಪ್ರಯತ್ನಿಸುವುದು ಒಳ್ಳೆಯದು.

ಇದನ್ನು ಓದಿ : Sudeep Vs Prakash Raj : ದರ್ಶನ್ ಪ್ರಚಾರ ಮಾಡಿದಾಗ ಯಾಕೆ ಸುಮ್ನಿದ್ರಿ? ಕಿಚ್ಚನ ಫ್ಯಾನ್ಸ್ ನಟ ಪ್ರಕಾಶ್ ರಾಜ್ ವಿರುದ್ಧ ಕೆಂಡಾಮಂಡಲ!

1 Comment
  1. indicac~ao binance says

    I don’t think the title of your article matches the content lol. Just kidding, mainly because I had some doubts after reading the article.

Leave A Reply

Your email address will not be published.