Aathur Sri Sadashiva Mahaganapati Temple : ಕಡಬ: ಆತೂರು ಶ್ರೀ ಸದಾಶಿವ ಮಹಾಗಣಪತಿ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದ ಗಂಧದ ಕಡ್ಡಿಯ ಹೊಗೆ

Sri Sadashiva Mahaganapati Temple : ಮಂಗಳೂರು : ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ (Sri Sadashiva Mahaganapati Temple ) ದೇವಸ್ಥಾನದಲ್ಲಿ ವರುಣ ದೇವರ ಕೃಪೆಗಾಗಿ ಸೀಯಾಳಭಿಷೇಕ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ಗುಡಿಯಲ್ಲಿ ಹಚ್ಚಿದ ಗಂಧದ ಕಡ್ಡಿಯಿಂದ ಎರಡು ಎಳೆಯಾಗಿ ಹೊರ ಬಂದ ಹೊಗೆಯನ್ನು ಕಂಡು ಭಕ್ತಾದಿಗಳು ಆಶ್ಚರ್ಯ ಚಕಿತರಾಗಿದ್ದಾರೆ.

ಗುಡಿಯೊಳಗಡೆ ಬೇರೆ ಯಾವುದೇ ಬಾಗಿಲು, ಕಿಟಕಿ ಇಲ್ಲದೇ ಇದ್ದರೂ, ಗುಡಿಗೆ ಇರುವ ಏಕೈಕ ಬಾಗಿಲಿನ ಮೂಲಕ ಹೊರ ಮುಖವಾಗಿ ಹೊಗೆ ಬಂದಿರುವುದು ನಿಜಕ್ಕೂ ಅಚ್ಚರಿಯೆನಿಸಿದೆ.

Leave A Reply

Your email address will not be published.