2023 HAYABUSA : ಹಯಾಬುಸಾಗಾಗಿ ಸುಜುಕಿ ಬಿಡುಗಡೆ ಮಾಡಿದೆ ಹೊಸ ರೋಮಾಂಚಕ ಬಣ್ಣ!!

HAYABUSA Bike in New Color : ಐಕಾನಿಕ್ ಹಯಾಬುಸಾ ತನ್ನ ಪ್ರಾರಂಭದಿಂದಲೂ ಸುಜುಕಿಯ (suzuki) ಪ್ರಮುಖ ಮೋಟಾರ್‌ಸೈಕಲ್ ಆಗಿದೆ. ಮೂರನೇ ತಲೆಮಾರಿನ ಮಾದರಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ವಿಶ್ವದಾದ್ಯಂತ ಹಯಾಬುಸಾ ಜನಪ್ರಿಯತೆ ಪಡೆದಿದೆ. ಸದ್ಯ ಸುಜುಕಿಯು ತನ್ನ ಮೂರನೇ ತಲೆಮಾರಿನ 2023 HAYABUSA ಮಾದರಿಗಾಗಿ ಅತ್ಯಾಕರ್ಷಕ ಹೊಸ (HAYABUSA Bike in New Color) ಬಣ್ಣಗಳನ್ನು ಪರಿಚಯಿಸಿದೆ. Suzuki Hayabusa ಹೊಸ ಬಣ್ಣಗಳ ಶ್ರೇಣಿಯನ್ನು ರೂ. 16,41,000 (ಎಕ್ಸ್ ಶೋ ರೂಂ, ದೆಹಲಿ) ರೂ. ಬೆಲೆಯಲ್ಲಿ ಮಾರಾಟ ಮಾಡಲಿದೆ.

ಭಾರತದಲ್ಲಿ (India) ಈ ಮಾದರಿಗಳು 7ನೇ ಏಪ್ರಿಲ್ 2023 ರಿಂದ ಲಭ್ಯವಿರುತ್ತವೆ. ಮೋಟಾರ್‌ಸೈಕಲ್ (motor cycle) ಅನ್ನು ದೇಶದಾದ್ಯಂತ ಕಂಪನಿಯ ಯಾವುದೇ ದೊಡ್ಡ ಬೈಕ್ ಶೋರೂಮ್‌ಗಳಿಂದ ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸುಜುಕಿ ಮೋಟಾರ್‌ಸೈಕಲ್ ಅಧಿಕೃತ ವೆಬ್‌ ತಾಣಕ್ಕೆ ಭೇಡಿ ನೀಡಿ ಮಾಹಿತಿ ಪಡೆಯಬಹುದು ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಹಯಬುಸಾ ಡ್ಯುಯಲ್-ಟೋನ್ ಬಣ್ಣಗಳೊಂದಿಗೆ ಬಾಡಿ, ಏರ್‌ ಇಂಟೇಕ್‌ಗಳ ಸುತ್ತಲಿನ ಸಣ್ಣ ಭಾಗಗಳು, ಬದಿಯ ಕೌಲಿಂಗ್‌ಗಳು ಮತ್ತು ಹಿಂಭಾಗದಲ್ಲಿ ವಿವಿಧ ಬಣ್ಣಗಳನ್ನು ಅಳವಡಿಸಿಕೊಂಡಿದೆ. ಆಧುನಿಕ ಸವಾರರ ಡೈನಾಮಿಕ್ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಮೂರನೇ ತಲೆಮಾರಿನ ಮಾದರಿಯು ಈಗ ಮೆಟಾಲಿಕ್ ಥಂಡರ್ ಗ್ರೇ/ ಕ್ಯಾಂಡಿ ಡೇರಿಂಗ್ ರೆಡ್, ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ನಂ.2/ ಗ್ಲಾಸ್ ಸ್ಪಾರ್ಕಲ್ ಬ್ಲಾಕ್ ಮತ್ತು ಪರ್ಲ್ ಬ್ಲೂ/ ಪರ್ಲ್ ಬ್ರಿಲಿಯಂಟ್ ವೈಟ್ ಎಂಬ 3 ಬಣ್ಣಗಳಲ್ಲಿ ಬರಲಿದೆ.

ಬೈಕಿನಲ್ಲಿ 1340 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 187.7 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ ಜೋಡಿಸಲಾಗಿದೆ. ಈ ಹೊಸ ಹಯಾಬುಸಾ ಸೂಪರ್‌ಬೈಕ್ ಕೇವಲ 3.2 ಸೆಕೆಂಡುಗಳಲ್ಲಿ 100 ಕಿಲೋ ಮೀಟರ್ ನ ವೇಗವನ್ನು ಪಡೆದುಕೊಳ್ಳುತ್ತದೆ.

ಹೊಸ ಹಯಾಬುಸಾದಲ್ಲಿ ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಏಡ್ಸ್, ಲಾಂಚ್ ಕಂಟ್ರೋಲ್, ಮೂರು ಪವರ್ ಮೋಡ್‌ಗಳು ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿವೆ. ಜತೆಗೆ ಆಕ್ಟಿವ್ ಸ್ಪೀಡ್ ಲಿಮಿಟರ್, ಕಾರ್ನರಿಂಗ್ ಎಬಿಎಸ್, ಹಿಲ್-ಹೋಲ್ಡ್ ಕಂಟ್ರೋಲ್, ಲೋ ಆರ್ಪಿಎಂ ಅಸಿಸ್ಟ್, ಹೊಸ ಸಿಕ್ಸ್-ಆಕ್ಸಿಸ್ ಐಎಂಯು, ಕಂಬೈನ್ಡ್ ಬ್ರೇಕ್ ಸಿಸ್ಟಂ, ಸ್ವಿಚ್ ಮಾಡಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ನಂತಹಾ ಹಲವು ವಿವಿಧ ಫೀಚರ್ಸ್ಗಳನ್ನು ಒಳಗೊಂಡಿದೆ.

 

ಇದನ್ನು ಓದಿ : Heat Rash : ಬೇಸಿಗೆಯಲ್ಲಿ ಬೆವರುಸಾಲೆಯ ತೊಂದರೆಯೇ? ಈ ಕಿರಿಕಿರಿಯಿಂದ ತಪ್ಪಿಸಲು ಇಲ್ಲಿದೆ ಸುಲಭ ಉಪಾಯ 

Leave A Reply

Your email address will not be published.