Women Commits Suicide : ಪತಿ ಚಾಕಲೇಟ್ ತಂದಿಲ್ಲವೆಂದು ನೊಂದು ಆತ್ಮಹತ್ಯೆ ಮಾಡಿಕೊಂಡ ಪತ್ನಿ!
Women Commits Suicide: ಮನೆಯಲ್ಲಿ ಪತಿ ಪತ್ನಿಯ ನಡುವೆ ಜಗಳ, ಮನಸ್ತಾಪ ಎಲ್ಲ ಉಂಟಾಗಿ ಆತ್ಮಹತ್ಯೆಗೆ ಶರಣಾಗುವ ಘಟನೆಗಳನ್ನು ನಾವು ಕೇಳಿರುತ್ತೇವೆ. ಆದರೆ, ಇಲ್ಲೊಬ್ಬ ವಿವಾಹಿತ ಮಹಿಳೆ ಆತ್ಮಹತ್ಯೆ( Women Commits Suicide) ಮಾಡಿಕೊಂಡಿದ್ದು, ಸದ್ಯ ಕಾರಣ ಕೇಳಿದಾಗ ನಿಜಕ್ಕೂ ಅಚ್ಚರಿಯಾಗುತ್ತದೆ.
ಸಾಮಾನ್ಯವಾಗಿ ಚಿಕ್ಕ ಮಕ್ಕಳು ಚಾಕೋಲೆಟ್(chocolate), ಚಿಪ್ಸ್ ಸೇರಿದಂತೆ ತಿಂಡಿ ತಿನಿಸುಗಳು ಬೇಕೆಂದು ರಚ್ಚೆ ಹಿಡಿದು ರಂಪಾಟ ಮಾಡುವುದು ಸಾಮಾನ್ಯ. ಆದರೆ, ಬೆಂಗಳೂರಿನ(Bengaluru) ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಮಕ್ಕಳ ತಾಯಿ ನಂದಿನಿ(30) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು,(30 Year Old Woman Commits Suicide)ಪತಿ(Husband) ಚಾಕೊಲೇಟ್ ತಂದು ಕೊಡಲಿಲ್ಲ ಎಂಬ ಬೇಸರದಿಂದ ವಿವಾಹಿತ ಮಹಿಳೆ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ನಂದಿನಿ ಪತಿ ಸಲೂಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಅದರಂತೆ ನಿನ್ನೆ(ಏಪ್ರಿಲ್ 06) ಬೆಳಗ್ಗೆ ಪತಿ ಕೆಲಸಕ್ಕೆ ಹೋಗುವ ಸಂದರ್ಭ ಚಾಕೋಲೆಟ್ ತೆಗೆದುಕೊಂಡು ಬರುವಂತೆ ಹೇಳಿದ್ದು, ಆದರೆ ಮಧ್ಯಾಹ್ನವಾದರೂ ಪತಿ ಚಾಕೋಲೆಟ್ ತಂದುಕೊಟ್ಟಿಲ್ಲ. ಇದಲ್ಲದೆ, ಮಹಿಳೆ ಕರೆ ಮಾಡಿದಾಗ ಪತಿ ಫೋನ್ ರಿಸೀವ್ ಮಾಡಿಲ್ಲ ಎನ್ನಲಾಗಿದ್ದು, ಇದರಿಂದ ಮನನೊಂದು ಮಹಿಳೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.6 ವರ್ಷದ ಹಿಂದೆ ಮದುವೆಯಾಗಿದ್ದ ಮೃತ ನಂದಿನಿಗೆ ಇಬ್ಬರು ಮಕ್ಕಳಿದ್ದಾರೆ.
ಪತಿ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ನಂದಿನಿ ನೇಣು ಹಾಕಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ಒಯ್ದಿದ್ದಾರೆ. ಆದರೆ, ನಂದಿನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಾಗಲೇ ನಂದಿನಿ ಪ್ರಾಣ ಪಕ್ಷಿ ಹಾರಿ ಹೋಗಿದೆ ಎನ್ನಲಾಗಿದೆ. ಸದ್ಯ, ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ, ಮೇಲ್ನೋಟಕ್ಕೆ ನಂದಿನಿ ಆತ್ಮಹತ್ಯೆಗೆ ಕಾರಣ ಚಾಕೊಲೇಟ್ ತಂದಿಲ್ಲ ಎಂದು ಹೇಳಲಾಗುತ್ತಿದ್ದರು ಕೂಡ ಸಾವಿಗೆ ನೈಜ ಕಾರಣವೇನು ಎಂಬ ಸತ್ಯ ತನಿಖೆಯ ವೇಳೆ ಬಹಿರಂಗವಾಗಬೇಕಾಗಿದೆ.
Your article helped me a lot, is there any more related content? Thanks! https://accounts.binance.com/id/register-person?ref=GJY4VW8W
Thanks for sharing. I read many of your blog posts, cool, your blog is very good.
Your article helped me a lot, is there any more related content? Thanks! https://www.binance.com/ru-UA/register?ref=OMM3XK51