Kichcha Sudeep: ಕಿಚ್ಚ ಸುದೀಪ್‌ ಬೆದರಿಕೆ ಪತ್ರ ಪ್ರಕರಣಕ್ಕೆ ಹೊಸ ಟ್ವಿಸ್ಟ್! ಇದರ ಹಿಂದಿದ್ಯಾ ಮಾಜಿ ಕಾರ್ ಡ್ರೈವರ್ ಹಾಗೂ ಈ ನಿರ್ಮಾಪಕನ ಕೈವಾಡ?

Share the Article

Sudeep Private Video threat : ಇಷ್ಟು ದಿನ ಸಿನಿಮಾಗಳ ಮೂಲಕವೇ ಸುದ್ದಿಯಾಗುತ್ತಿದ್ದ ಕನ್ನಡದ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್(Kiccha Sudeep) ಇದೀಗ ರಾಜಕೀಯವಾಗಿಯೂ ಸುದ್ಧಿಯಲ್ಲಿದ್ದಾರೆ. ಬಿಜೆಪಿ(BJP) ಬೆಂಬಲಿಸುವುದರೊಂದಿಗೆ ಬಸವರಾಜ ಬೊಮ್ಮಾಯಿ(CM Bommai) ಪರ ಪ್ರಚಾರ ನೀಡುವುದಾಗಿ ಕಿಚ್ಚ ಬಹಿರಂಗವಾಗಿ ಘೋಷಿಸಿದ್ದಾರೆ. ಆದರೆ ಇದಕ್ಕೂ ಮುನ್ನ ಸುದೀಪ್ ಬಿಜೆಪಿ ಸೇರುತ್ತಾರೆ ಅನ್ನೋ ವಿಚಾರ ಎಲ್ಲೆಡೆ ಸಾಕಷ್ಟು ಪ್ರಚಾರವಾದುದರಿಂದ ಈ ವೇಳೆ ಅವರಿಗೆ ಬೆದರಿಕೆ ಪತ್ರಗಳು (Sudeep Private Video threat )ಬಂದಿದ್ದವು. ಈ ಕುರಿತು ದೂರು ಕೂಡ ದಾಖಲಾಗಿದೆ. ಸದ್ಯ ಈ ಪತ್ರಗಳ ಹಿಂದಿರೋ ಕೈಗಳು ಯಾರವು ಅನ್ನೋ ಬಗ್ಗೆ ಸುಳಿವು ಸಿಕ್ಕಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ನಟ ಕಿಚ್ಚ ಸುದೀಪ್ (Sudeep) ಅವರ ಖಾಸಗಿ ವಿಡಿಯೋ (Private Video) ಬಹಿರಂಗ ಪಡಿಸುವುದಾಗಿ ಬರೆದ ಬೆದರಿಕೆ ಪತ್ರದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸುದೀಪ್ ಮನೆಗೆ ಬಂದಿದ್ದ ಆ ಎರಡೂ ಬೆದರಿಕೆ ಪತ್ರಗಳು ದೊಮ್ಮಲೂರಿನಿಂದ ಪೋಸ್ಟ್ ಆಗಿವೆ ಎಂದು ಹೇಳಲಾಗುತ್ತಿದೆ. ಆ ಬೆದರಿಕೆ ಪತ್ರಗಳ ಸಂಬಂಧ ಸಿಸಿಬಿಯಿಂದ (CCB)ತನಿಖೆ ಶುರುವಾಗಿದ್ದು, ಶಂಕೀತ ಜಾಡು ಹಿಡಿದು ಹೊರಟಿದ್ದಾರಂತೆ ಸಿಸಿಬಿ ಅಧಿಕಾರಿಗಳು.

ಬೆದರಿಕೆ ಪತ್ರದಲ್ಲಿ ‘’ನಿಮ್ಮ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುತ್ತೇವೆ’’ ಎಂದು ಉಲ್ಲೇಖಿಸಲಾಗಿತ್ತು. ಅಲ್ಲದೆ, ಕಿಚ್ಚ ಸುದೀಪ್ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿತ್ತು. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಸಲಿಗೆ, ಇದು ಕಿಚ್ಚ ಸುದೀಪ್ ಅವರಿಗೆ ಬಂದ ಎರಡನೇ ಬೆದರಿಕೆ ಪತ್ರ. ಮೊದಲ ಬೆದರಿಕೆ ಪತ್ರ ಮಾರ್ಚ್ 10 ರಂದು ಕಿಚ್ಚ ಸುದೀಪ್ ಅವರ ಮನೆ ತಲುಪಿತ್ತಂತೆ. ಅಂದು ಬೆದರಿಕೆ ಪತ್ರದ ಬಗ್ಗೆ ಕಿಚ್ಚ ಸುದೀಪ್ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಎರಡನೇ ಬಾರಿ ಬೆದರಿಕೆ ಪತ್ರ ಬಂದಾಗ ಕಾನೂನು ಕ್ರಮ ಕೈಗೊಳ್ಳಲು ಕಿಚ್ಚ ಸುದೀಪ್ ನಿರ್ಧರಿಸಿದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸುಳಿವು ಸಿಕ್ಕಿದೆ.

ಮಾರ್ಚ್ 10ನೇ ತಾರೀಕು ಸುದೀಪ್ ಮನೆಗೆ ಮೊದಲ ಪತ್ರ ತಲುಪಿದೆ. ಆ ಪತ್ರದ ಬಗ್ಗೆ ಅಷ್ಟಾಗಿ ಸುದೀಪ್ ತಲೆ ಕೆಡಿಸಿಕೊಂಡಿರಲಿಲ್ಲ‌. ಆದರೂ ಇಂಟರ್ ನಲ್ ಎನ್ಕೈರಿಯಂತೆ ಮಾಹಿತಿಯನ್ನು ಕಲೆ ಹಾಕುವುದಕ್ಕೆ ಯತ್ನಿಸಿದ್ದರಂತೆ. ಅದರ ಬೆನ್ನಲ್ಲೆ ಮತ್ತೊಂದು ಪತ್ರ ಬಂದಿದ್ದರಿಂದ ಸಹಜವಾಗಿಯೇ ಇದು ಗಂಭೀರ ಪ್ರಕರಣ ಅನಿಸಿ ದೂರು ನೀಡಲಾಗಿತ್ತು. ಇನ್ನು ಆ ಪತ್ರದ ಮೂಲ ಹುಡುಕುತ್ತಾ ಹೋದಾಗ ಸಿಕ್ಕಿದ್ದು ದೊಮ್ಮಲೂರು ಪೋಸ್ಟ್ ಬಾಕ್ಸ್. ಸುದೀಪ್ ಮನೆಗೆ ಬಂದ ಎರಡೂ ಪತ್ರಗಳು ದೊಮ್ಮಲೂರಿನಿಂದ ಬಂದಿದ್ದವು. ಹೀಗಾಗಿ ಆ ಪತ್ರವನ್ನು ಯಾರು ಪೋಸ್ಟ್ ಮಾಡಿದ್ದು ಎಂಬುದರ ಬಗ್ಗೆ ಅಲ್ಲಿನ ಸಿಸಿಟಿವಿ ಪರಿಶೀಲನೆಗೆ ಸಿಸಿಬಿ ಮುಂದಾಗಿದೆ.

ಇನ್ನು ಈ ಎರಡು ಬೆದರಿಕೆ ಪತ್ರಗಳ ಹಿಂದೆ ಸುದೀಪ್ ಅವರ ಮಾಜಿ ಕಾರು ಚಾಲಕನ ಕೈವಾಡ ಇರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ. ಸುದೀಪ್ ಅವರ ಮಾಜಿ ಕಾರು ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಸುದೀಪ್‌ ಅವರಿಗೆ ಲಭಿಸಿದ ಎರಡು ಬೆದರಿಕೆ ಪತ್ರಗಳು ದೊಮ್ಮಲೂರಿನಿಂದ ಪೋಸ್ಟ್ ಆಗಿವೆ. ಬೆದರಿಕೆ ಪತ್ರದಲ್ಲಿ ಕೈಬರಹವಿಲ್ಲ, ಸಿಸ್ಟಂ ಟೈಪಿಂಗ್ ಇದೆ.

ಇದರೊಂದಿಗೆ ಬೆದರಿಕೆ ಪತ್ರದ ಹಿಂದೆ ನಿರ್ಮಾಪಕರೊಬ್ಬರ ಕೈವಾಡ ಇದ್ಯಾ ಎಂಬ ಅನುಮಾನ ಕೂಡ ಗಾಂಧಿನಗರದ ಗಲ್ಲಿಗಳಲ್ಲಿ ಚರ್ಚೆ ಆಗುತ್ತಿದೆ. ಕಿಚ್ಚ ಸುದೀಪ್ ಅವರ ಕಾಲ್ ಶೀಟ್ ಸಿಗಲಿಲ್ಲ ಎಂಬ ಸಿಟ್ಟಿಗೆ ನಿರ್ಮಾಪಕರೊಬ್ಬರು ಹೀಗೆ ಮಾಡಿರಬಹುದಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕಾಗಿ ಸ್ಪಷ್ಟ ಉತ್ತರ ಸಿಗಬೇಕು ಅಂದ್ರೆ ತನಿಖೆ ಪೂರ್ಣಗೊಳ್ಳಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯ ಸೈಬರ್ ವಿಂಗ್ ಕೂಡ ಕೆಲಸ ಮಾಡುತ್ತಿದ್ದು ಮುಂದಿನ ದಿನದಲ್ಲಿ ನಟ ಸುದೀಪ್ ಗೂ ನೊಟೀಸ್ ನೀಡಿ ಹೇಳಿಕೆಗಳನ್ನು ಪಡೆಯಲು ಸಿದ್ಧತೆಯನ್ನ ನಡೆಸುತ್ತಿದ್ದಾರೆ. ಸದ್ಯ ಆ ಕಾರು ಚಾಲಕ ಸಿಕ್ಕ ಬಳಿಕವಷ್ಟೇ ಅಸಲಿ ಸಂಗತಿ ಹೊರ ಬರಬೇಕಿದೆ.

ಅಂದಹಾಗೆ ತಮಗೆ ಬಂದ ಬೆದರಿಕೆಯ ಪತ್ರಗಳ ಕುರಿತು ಮಾತನಾಡಿದ್ದ ಸುದೀಪ್ ಅವರು, ಈ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ನಿನ್ನೆಯಷ್ಟೇ ಸುದೀಪ್‍ ಹೇಳಿದ್ದರು. ಸಿನಿಮಾ ರಂಗದವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾನೂನು ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದರು.

ಇದನ್ನೂ ಓದಿ: Prakash raj: ಟ್ವೀಟ್ ಮಾಡಿ ಕಿಚ್ಚನನ್ನು ಕಿಚಾಯಿಸ್ತಿರೋ ಪ್ರಕಾಶ್ ರಾಜ್! ನಿಮ್ ‘ಮಾಮ’ ಸಹಾಯ ಮಾಡಿದ್ರೆ ನೀವು ದುಡಿದಿದ್ರಲ್ಲಿ 30% ಕೊಡಿ, ಜನರಿಗೆ ಉತ್ತರಿಸಲು ರೆಡಿಯಾಗಿ!

Leave A Reply