Xiaomi smartphones: Redmi 12C ಮತ್ತು Redmi Note 12 4G ಸೇಲ್ ಆರಂಭ; ಸಂಪೂರ್ಣ ವಿವರ ಇಲ್ಲಿದೆ

Features of Xiaomi Smartphones : ಜನಪ್ರಿಯ ಮೊಬೈಲ್ ಕಂಪನಿ Xiaomi ಇತ್ತೀಚಿಗಷ್ಟೇ Redmi 12C ಮತ್ತು Redmi Note 12 4G ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು, ಈ ಸ್ಮಾರ್ಟ್ ಫೋನ್ ಗಳು ದೇಶದಲ್ಲಿ ಏಪ್ರಿಲ್ 6 ರಂದು ಮೊದಲ ಬಾರಿಗೆ ಮಾರಾಟಕ್ಕೆ ಬಂದಿದ್ದು, Amazon, mi.com ವೆಬ್‌ಸೈಟ್‌ಗಳಲ್ಲಿ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಈ ಎರಡೂ ಸ್ಮಾರ್ಟ್‌ಫೋನ್‌ಗಳು (Features of Xiaomi Smartphones)  ಗ್ರಾಹಕರಿಗೆ ಲಭ್ಯವಾಗಲಿದೆ.

Redmi 12C smartphone: Redmi 12C ಸ್ಮಾರ್ಟ್‌ಫೋನ್ ಎರಡು ಮಾದರಿಗಳಲ್ಲಿ ಲಭ್ಯವಿದ್ದು, 4GB RAM ಮತ್ತು 64GB ಮಾದರಿಯ ಬೆಲೆ 8,999 ರೂ. ಆಗಿದ್ದು, 6GB ಮತ್ತು 128GB ಸ್ಟೋರೇಜ್ ಮಾದರಿಯ ಬೆಲೆ 10,999 ರೂ. ಆಗಿದೆ. ಈ ಸ್ಮಾರ್ಟ್ ಫೋನ್ ಬ್ಲೂ, ಬ್ಲ್ಯಾಕ್‌, ನೇರಳೆ ಮತ್ತು ಹಸಿರು ಬಣ್ಣಗಳಲ್ಲಿ ಲಭ್ಯವಾಗಲಿದೆ.

ವೈಶಿಷ್ಟ್ಯತೆ: ಈ ಫೋನ್ 6GB RAM ಮತ್ತು 128GB ಯ eMMC5.1 ಸ್ಟೋರೇಜ್ ಜೊತೆಗೆ ಸಂಯೋಜಿಸಲಾದ MediaTek Helio G85 ಪ್ರೊಸೆಸರ್ ಹೊಂದಿದೆ. ಜೊತೆಗೆ ಆಂಡ್ರಾಯ್ಡ್ 12 ಆಧರಿಸಿದ MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನಿನ ಹಿಂಭಾಗದ ಫಲಕವು ಸ್ಲಿಪ್-ರೆಸಿಸ್ಟೆಂಟ್ ಗ್ರಿಪ್ ಜೊತೆಗೆ ಟೆಕ್ಸ್ಚರ್ಡ್ ವಿನ್ಯಾಸ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದ್ದು, ಮುಂಭಾಗದಲ್ಲಿ ವಾಟರ್‌ಡ್ರಾಪ್-ಸ್ಟೈಲ್ ನಾಚ್ ಡಿಸ್‌ಪ್ಲೇಯನ್ನು ಹೊಂದಿದೆ. 6.71-ಇಂಚಿನಷ್ಟು ದೊಡ್ಡ ಡಿಸ್‌ಪ್ಲೇ ಹೊಂದಿರುವ ಈ ಫೋನ್ 720p ಪಿಕ್ಸೆಲ್ಸ್ ಮತ್ತು 500nits ವರೆಗೂ ಬ್ರೈಟ್‌ನೆಸ್ ಹೊಂದಿದೆ.

ಕ್ಯಾಮೆರಾ: 50MP ಮುಖ್ಯ ಸಂವೇದಕದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 5MP ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. 10W ಮೈಕ್ರೋ-USB ಚಾರ್ಜಿಂಗ್‌ನೊಂದಿಗೆ 5,000mAh ಸಾಮರ್ಥ್ಯದ ಬೃಹತ್ ಬ್ಯಾಟರಿ, IP52 ರೇಟಿಂಗ್ , 4G, ಡ್ಯುಯಲ್-ಸಿಮ್ ಕಾರ್ಡ್ ಬೆಂಬಲ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಈ ಫೋನ್ ಒಳಗೊಂಡಿದೆ.

Redmi Note12 4G: Redmi Note 12 4G ಸ್ಮಾರ್ಟ್‌ಫೋನ್ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. 6GB RAM + 64GB ಸ್ಟೋರೇಜ್ ರೂಪಾಂತರದ ಬೆಲೆ ರೂ 14,999 ಆಗಿದ್ದರೆ, 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ ರೂ 16,999 ಆಗಿದೆ. ಈ ಸ್ಮಾರ್ಟ್ಫೋನ್ ಲೂನಾರ್ ಬ್ಲ್ಯಾಕ್, ಫ್ರಾಸ್ಟೆಡ್ ಐಸ್ ಬ್ಲೂ ಮತ್ತು ಸನ್‌ರೈಸ್ ಗೋಲ್ಡ್ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ನೀವು ಐಸಿಐಸಿಐ ಬ್ಯಾಂಕ್ (ICICI Bank) ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ನೊಂದಿಗೆ Redmi Note 12 4G ಸ್ಮಾರ್ಟ್‌ಫೋನ್ ಖರೀದಿಸಿದರೆ, ನಿಮಗೆ ರೂ.1,000 ರಿಯಾಯಿತಿ ಸಿಗುತ್ತದೆ. ಅಥವಾ ಹಳೆಯ ಸ್ಮಾರ್ಟ್ ಫೋನ್ (smartphone) ವಿನಿಮಯ ಮಾಡಿಕೊಳ್ಳುವವರಿಗೆ ರೂ.1,500 ವರೆಗೆ ಹೆಚ್ಚುವರಿ ಎಕ್ಸ್ ಚೇಂಜ್ ರಿಯಾಯಿತಿ ಸಿಗಲಿದೆ. ಈ ಮೊಬೈಲ್‌ನಲ್ಲಿ ನೀವು ರೂ.13,300 ವರೆಗೆ ವಿನಿಮಯ ರಿಯಾಯಿತಿಯನ್ನು ಪಡೆಯಬಹುದು.

ವೈಶಿಷ್ಟ್ಯತೆ: Redmi Note 12 4G ಸ್ಮಾರ್ಟ್‌ಫೋನ್‌, 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಪಡೆದಿದೆ. ಸ್ನಾಪ್‌ಡ್ರಾಗನ್ 685 ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಮತ್ತು Adreno 610 GPU ಹೊಂದಿರುವ ಈ ಫೋನ್ ಆಂಡ್ರಾಯ್ಡ್ 13-ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸಲಿದೆ. ಮತ್ತು ಮೈಕ್ರೋ ಎಸ್‌ಡಿ ಕಾರ್ಡ್ ಸಹಾಯದಿಂದ ಮೆಮೊರಿಯನ್ನು 1TB ವರೆಗೆ ವಿಸ್ತರಿಸಬಹುದು.

Redmi Note 12 4G ಮೊಬೈಲ್ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 13-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದ ಕ್ಯಾಮೆರಾವು ಪೋರ್ಟ್ರೇಟ್, ಎಚ್‌ಡಿಆರ್, ಟೈಮ್ ಬರ್ಸ್ಟ್, ಮೂವಿ ಫ್ರೇಮ್, ವಾಯ್ಸ್ ಶಟರ್, ಪಾಮ್ ಶಟರ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಚಾರ್ಜರ್ ಬಾಕ್ಸ್ ನಲ್ಲಿಯೇ ಲಭ್ಯವಿದೆ. 3.5 ಎಂಎಂ ಜ್ಯಾಕ್ ಮತ್ತು ಬ್ಲೂಟೂತ್ 5.0 ನಂತಹ ವೈಶಿಷ್ಟ್ಯಗಳಿವೆ.

ಕ್ಯಾಮೆರಾ: 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ + 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ + 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸಂವೇದಕಗಳೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಪೋರ್ಟ್ರೇಟ್, ಪನೋರಮಾ, ಪ್ರೊ ಮೋಡ್, ನೈಟ್ ಮೋಡ್, ಕಸ್ಟಮ್ ವಾಟರ್‌ಮಾರ್ಕ್, ಡಾಕ್ಯುಮೆಂಟ್ ಮೋಡ್, ಎಚ್‌ಡಿಆರ್, ಎಐ ಸೀನ್ ಡಿಟೆಕ್ಷನ್, ಟೈಮ್ ಬರ್ಸ್ಟ್, ಗೂಗಲ್ ಲೆನ್ಸ್, ಮೂವೀ ಫ್ರೇಮ್, ವಾಯ್ಸ್ ಶಟರ್ ಮುಂತಾದ ವೈಶಿಷ್ಟ್ಯಗಳು ಹಿಂಭಾಗದ ಕ್ಯಾಮೆರಾಗಳಲ್ಲಿ ಲಭ್ಯವಿದೆ.

 

ಇದನ್ನು ಓದಿ : Retirement Planning : ನಿವೃತ್ತಿ ಜೀವನವನ್ನು ಖುಷಿಯಾಗಿ ಕಳೆಯಲು ಈ ರೀತಿ ಯೋಜನೆ ರೂಪಿಸಿ! 

Leave A Reply

Your email address will not be published.