Ration Card : ಪಡಿತರ ಚೀಟಿದಾರರೇ ನಿಮಗಿದೋ ಸಿಗಲಿದೆ ಹೊಸ ಸೌಲಭ್ಯ – ಸರಕಾರ ನೀಡಿದೆ ಸೂಚನೆ

Ration Card Update : ರೇಷನ್ ಕಾರ್ಡ್ (Ration Card)ಅಥವಾ ಪಡಿತರ ಚೀಟಿಯನ್ನು ಹೊಂದಿರುವ ಬಳಕೆದಾದರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದೆ. ಪಡಿತರ ಚೀಟಿ ಹೊಂದಿರುವವರಿಗೆ(Ration Card Update)ಬಹು ಮುಖ್ಯ ಮಾಹಿತಿ ಇಲ್ಲಿದೆ.

ಕೇಂದ್ರ ಸರ್ಕಾರದ ವಿಶಿಷ್ಟ ಮತ್ತು ಯಶಸ್ವಿ ಉಪಕ್ರಮವಾದ ಸಾರವರ್ಧಿತ ಅಕ್ಕಿ ವಿತರಣೆಯನ್ನು ಕಳೆದ ಎರಡು ಹಂತಗಳಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಮಾಹಿತಿ ನೀಡಿದ್ದಾರೆ. 269 ​​ಜಿಲ್ಲೆಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಫೋರ್ಟಿಫೈಡ್ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ.

ಮಕ್ಕಳು ಮತ್ತು ಮಹಿಳೆಯರಲ್ಲಿ ರಕ್ತಹೀನತೆಯ ಸಮಸ್ಯೆಯನ್ನು ತೊಡೆದು ಹಾಕಲು ಮೈಕ್ರೋನ್ಯೂಟ್ರಿಯಂಟ್‌ಗಳನ್ನು ಒಳಗೊಂಡಿರುವ ಸಾರವರ್ಧಿತ ಅಕ್ಕಿ ವಿತರಣೆಯ ಯೋಜನೆಯನ್ನು ಹಂತ ಹಂತವಾಗಿ ಅಕ್ಟೋಬರ್ 2021 ರಲ್ಲಿ ಆರಂಭಿಸಲಾಗಿದೆ. ‘ಕೇಂದ್ರ ಸರ್ಕಾರದ ವಿಶಿಷ್ಟ ಹಾಗೂ ಅತ್ಯಂತ ಯಶಸ್ವಿ ಉಪಕ್ರಮ ಇದಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಉತ್ತಮ ಫಲಿತಾಂಶವನ್ನು ಒದಗಿಸಿದೆ. ಸಾರ್ವಜನಿಕರಿಂದಲೂ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರ್ಚ್, 2024 ರ ಗಡುವಿನ ಮೊದಲು ದೇಶದ ಉಳಿದ ಜಿಲ್ಲೆಗಳಿಗೂ ಈ ಸೌಲಭ್ಯವನ್ನು ವಿತರಣೆ ಮಾಡಲಾಗುತ್ತದೆ. ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

2021 ರಲ್ಲಿ ಪ್ರಧಾನಿ ಮೋದಿ (Modi)2024 ರ ವೇಳೆಗೆ ಸರ್ಕಾರದ ಯೋಜನೆಗಳ ಮೂಲಕ ದೇಶದಾದ್ಯಂತ ಸರ್ಕಾರ ಸಾರವರ್ಧಿತ ಅಕ್ಕಿಯನ್ನು ವಿತರಿಸುವ ಗುರಿಯನ್ನು ಹೊಂದಿದೆ. ಈಗಾಗಲೇ, ‘ನಾವು ಇದುವರೆಗೆ 269 ಜಿಲ್ಲೆಗಳಲ್ಲಿ ಪಿಡಿಎಸ್(PDS) ಮೂಲಕ ಸಾರವರ್ಧಿತ ಅಕ್ಕಿ ವಿತರಣೆಯನ್ನು ಆರಂಭಿಸಲಾಗಿದ್ದು, ಇದೀಗ ಉಳಿದ ಜಿಲ್ಲೆಗಳಿಗೂ ಯೋಜನೆಯ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಯೋಜನೆ ರೂಪಿಸಲಾಗಿದೆ. ದೇಶದಲ್ಲಿ ಸುಮಾರು 735 ಜಿಲ್ಲೆಗಳಿದ್ದು, ಈ ಪೈಕಿ ಶೇ.80ಕ್ಕೂ ಹೆಚ್ಚಿನ ಮಂದಿ ಈ ಅನ್ನವನ್ನೇ ಅವಲಂಬಿತರಾಗಿದ್ದಾರೆ. ಸದ್ಯಕ್ಕೆ ಈ ಅಕ್ಕಿಯ ಉತ್ಪಾದನಾ ಸಾಮರ್ಥ್ಯ ಸುಮಾರು 17 ಲಕ್ಷ ಟನ್‌ಗಳಷ್ಟಿರುವುದರಿಂದ ದೇಶದಲ್ಲಿ ಸಾಕಷ್ಟು ಸಾರವರ್ಧಿತ ಅಕ್ಕಿ ಇದೆ ಎಂದು ಚೋಪ್ರಾ ಅವರು ಮಾಹಿತಿ ನೀಡಿದ್ದಾರೆ.

 

ಇದನ್ನು ಓದಿ : Thick Eyebrows: ಹೆಣ್ಮಕ್ಕಳೇ ನಿಮಗೆ ದಪ್ಪ ಹುಬ್ಬು ಬೇಕೇ? ಈ ಮನೆ ಮದ್ದು ನಿಮಗೆ ಬಹಳ ಸಹಾಯ ಮಾಡುತ್ತೆ! 

1 Comment
  1. Рестраця на Binance says

    Your point of view caught my eye and was very interesting. Thanks. I have a question for you.

Leave A Reply

Your email address will not be published.