NEP: ವಿದ್ಯಾರ್ಥಿಗಳೇ ಗಮನಿಸಿ, 12ನೇ ತರಗತಿಗೆ ಇನ್ಮುಂದೆ ಎರಡು ಬೋರ್ಡ್ ಪರೀಕ್ಷೆಗಳು!!

NEP: ವಿದ್ಯಾರ್ಥಿಗಳಿಗೆ (students) ಮಹತ್ವದ ಮಾಹಿತಿ ಇಲ್ಲಿದೆ. ಇನ್ನುಮುಂದೆ 12ನೇ ತರಗತಿಗೆ ಎರಡು ಬೋರ್ಡ್ ಪರೀಕ್ಷೆಗಳು (second puc board exam) ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCF) ಶಿಕ್ಷಣ ಕ್ಷೇತ್ರದ ಪ್ರಖ್ಯಾತ ತಜ್ಞರ ಸಮಿತಿಯು, ಕೇಂದ್ರ ಸರಕಾರಕ್ಕೆ (Central Government) NEP ಅಡಿಯಲ್ಲಿ ಪರೀಕ್ಷೆಗಳನ್ನು ನಡೆಸುವ ಹೊಸ ವಿಧಾನಗಳು ಹಾಗೂ ವಿದ್ಯಾರ್ಥಿಗಳು ಆಯ್ಕೆ ಮಾಡಬಹುದಾದ ವಿಷಯಗಳ ಬಗ್ಗೆ ಶಿಫಾರಸುಗಳನ್ನು ಮಾಡಿದೆ.

ಪರೀಕ್ಷೆಗಳನ್ನು (Exams) ನಡೆಸುವ ಹೊಸ ವಿಧಾನವೆಂದರೆ, ದ್ವಿತೀಯ ಪಿಯುಸಿ ತರಗತಿಯ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬೋರ್ಡ್ ಪರೀಕ್ಷೆಗಳು, ಯಾವುದಾದರೂ ಒಂದು ಅಥವಾ ಎರಡೂ ಪರೀಕ್ಷೆಗೆ ಹಾಜರಾಗುವುದಾಗಿದೆ‌. ಎರಡೂ ಪರೀಕ್ಷೆಗಳಲ್ಲಿ ಉತ್ತಮವಾದ ಶೇಕಡಾವಾರು ಪ್ರಮಾಣವನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ.

ಹಾಗೆಯೇ 9 ನೇ ತರಗತಿಯ ವಿದ್ಯಾರ್ಥಿಯು ಕ್ಲಿಯರ್ ಮಾಡಬೇಕಾದ ಉತ್ತರ ಪತ್ರಿಕೆಗಳ ಸಂಖ್ಯೆಯನ್ನು ಹೆಚ್ಚಿಸುವ ಶಿಫಾರಸನ್ನು ಸಮಿತಿ ಮಾಡಿದೆ. ಮೊದಲಿನ ಐದು ವಿಷಯಗಳ ಪತ್ರಿಕೆಗಳ ಬದಲಿಗೆ, ಐದು ಅತ್ಯುತ್ತಮ ಯಾವುದೋ ಅದನ್ನು ಆಯ್ಕೆಮಾಡುವುದು. ಸಮಿತಿ ಶಿಫಾರಸು ಮಾಡಲಾದ ಅಂಶಗಳಿಗೆ ಅನ್ವಯವಾದಂತೆ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಕಲಾ ವಿಭಾಗ ಇವೆರಡನ್ನೂ ಮಿಶ್ರಣ ಮಾಡಿಕೊಳ್ಳಬಹುದು.

ಅಲ್ಲದೆ, 9 ಹಾಗೂ 10 ನೇ ತರಗತಿಗಳಿಗೆ ವಿಷಯ ಪತ್ರಿಕೆಗಳ ಸಂಖ್ಯೆ ಕೂಡ ಹೆಚ್ಚಲಿದೆ ಎಂದು ಹೇಳಲಾಗಿದೆ. ವಿದ್ಯಾರ್ಥಿಗಳು ತಮಗಿಷ್ಟದ ವಿಷಯಗಳನ್ನು ಆಯ್ಕೆ ಮಾಡಲು ಹೆಚ್ಚಿನ ಆಯ್ಕೆಗಳನ್ನು ಮತ್ತು ಅಧಿಕಾರವನ್ನು ನೀಡಬೇಕೆಂದು NFC ಸೂಚಿಸಿದೆ.

ಈ ಶಿಫಾರಸುಗಳನ್ನು ಶಿಕ್ಷಣ ಸಚಿವಾಲಯ ಇನ್ನೂ ಅಂಗೀಕರಿಸಿಲ್ಲ. NFC ಕರಡು ಪ್ರತಿಯನ್ನು ಮಾತ್ರವೇ ಸಚಿವಾಲಯದ ಮುಂದಿರಿಸಿದೆ ಎಂಬುದು ವರದಿಯಾಗಿದೆ. ಇವುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು NCERT ಹಾಗೂ ಶಿಕ್ಷಣ ಸಚಿವಾಲಯಕ್ಕೆ ಬಿಟ್ಟದ್ದು ಎಂದು ವಿಷಯ ನಿರ್ವಾಹಕ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಸಮಿತಿಯು ಮುಂದಿರಿಸಿರುವ ಈ ಸೂಚನೆ ಹಾಗೂ ಶಿಫಾರಸುಗಳಿಗೆ ಜನರು ಸಲಹೆಗಳನ್ನು ನೀಡಬಹುದು ಎಂದು NFC ತಿಳಿಸಿದೆ. ಸಲಹೆಗಳಿಗಾಗಿ ಡ್ರಾಫ್ಟ್ ಅನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ. ಇದು ಹೊಸ ಪಠ್ಯಕ್ರಮದ ಡ್ರಾಫ್ಟ್ ಆಗಿದ್ದು ಇನ್ನೂ ಅಂತಿಮ ನಿರ್ಧಾರ ಹಾಗೂ ಪ್ರಕಟಣೆಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು NFC ತಿಳಿಸಿದೆ.

 

ಇದನ್ನು ಓದಿ : Ginger Price Hike In Karnataka : ಬೆಳೆಗಾರರ ಮುಖದಲ್ಲಿ ಮಂದಹಾಸ, ಶುಂಠಿ ದರದಲ್ಲಿ ಏರಿಕೆ! 

Leave A Reply

Your email address will not be published.