Pension Scheme : ನಿಮಗೇನಾದರೂ ತಿಂಗಳಿಗೆ 75 ಸಾವಿರ ಪಿಂಚಣಿ ಬೇಕಾದರೆ ಜಸ್ಟ್ ಈ ರೀತಿ ಮಾಡಿ!

Pension : ಪ್ರತಿಯೊಬ್ಬರೂ ಹಣವನ್ನು ಉಳಿಸಲು ಬಯಸುತ್ತಾರೆ. ಆದರೆ ಉಳಿತಾಯವನ್ನು (savings ) ಯಾವಾಗ ಪ್ರಾರಂಭಿಸಬೇಕು ಮತ್ತು ಹೇಗೆ ಪ್ರಾರಂಭಿಸಬೇಕು ಎಂದು ಯೋಚಿಸುತ್ತಾ ಅರ್ಧದಷ್ಟು ಜೀವನವನ್ನು ವ್ಯರ್ಥ ಮಾಡುತ್ತಾರೆ. ಸದ್ಯ ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಹೌದು, ನಮ್ಮ ವೃದ್ಧಾಪ್ಯ ಜೀವನದಲ್ಲಿ ಯಾವುದೇ ಹಣಕಾಸು ತೊಂದರೆ ಉಂಟಾಗಬಾರದಂತೆ ನೋಡಲು ನಾವು ಈಗಲೇ ಉಳಿತಾಯ ಮಾಡುವುದು ಉತ್ತಮ.

ಸದ್ಯ ತಿಂಗಳಿಗೆ 75 ಸಾವಿರ ಪಿಂಚಣಿ (Pension ) ಪಡೆಯಲು ನೀವು ಎಷ್ಟು ಹಣ ಯಾವ ರೀತಿ ಎಲ್ಲಿ ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿ ತಿಳಿಸಲಾಗಿದೆ.
ನೀವು ರಾಷ್ಟ್ರೀಯ ಪಿಂಚನೆ ಯೋಜನೆ (NPS ) ಖಾತೆಯ ಮೂಲಕ ತಿಂಗಳಿಗೆ 75 ಸಾವಿರ ಪಿಂಚಣಿ ಪಡೆಯಬಹುದು. ಅಂದರೆ ಅವಧಿ ಮುಗಿದ ನಂತರ ಖಾತೆದಾರರು ಒಂದೇ ಮೊತ್ತವನ್ನು ಹಿಂಪಡೆಯಬಹುದು ಮತ್ತು ಪಿಂಚಣಿಯನ್ನು ಪಡೆಯಬಹುದಾಗಿದೆ.
ಎನ್‌ಪಿಎಸ್ ಹೂಡಿಕೆಯಿಂದ ತಿಂಗಳಿಗೆ 75 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಪಡೆಯಲು ಬಯಸಿದರೆ, ಎಷ್ಟು ಹಣವನ್ನು ಠೇವಣಿ ಮಾಡಬೇಕು ಗೊತ್ತಾ? ಇದಕ್ಕಾಗಿ (60ನೇ ವಯಸ್ಸಿನಲ್ಲಿ) ಎನ್‌ಪಿಎಸ್‌ನಲ್ಲಿನ ಒಟ್ಟು ಠೇವಣಿ ರೂ.3.83 ಕೋಟಿಗಳಾಗಿರಬೇಕು.
NPS ಹೂಡಿಕೆದಾರರಿಗೆ ಮಾಸಿಕ ಪಿಂಚಣಿ ಬರುತ್ತದೆ. ಮಾಸಿಕ ಪಿಂಚಣಿ ಪಡೆಯಲು ಈಕ್ವಿಟಿ, ಕಾರ್ಪೊರೇಟ್ ಸಾಲ, ಸರ್ಕಾರಿ ಬಾಂಡ್‌ಗಳು ಮತ್ತು ಪರ್ಯಾಯ ಹೂಡಿಕೆ ನಿಧಿಗಳಲ್ಲಿ ಹಣ ಹೂಡಿಕೆ ಮಾಡಬೇಕು.
ಇತರ ದೀರ್ಘಾವಧಿಯ ಹೂಡಿಕೆ ಯೋಜನೆಗಳಂತೆ ಎನ್‌ಪಿಎಸ್‌ನಿಂದ ಬರುವ ಆದಾಯವು ವ್ಯಕ್ತಿಯು ಯಾವಾಗ ಹೂಡಿಕೆಯನ್ನು ಪ್ರಾರಂಭಿಸುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಬೇಗ ನಿಮ್ಮ ಹೂಡಿಕೆ ಪ್ರಾರಂಭಿಸಿ ಮತ್ತು ನಿಯಮಿತವಾಗಿ ಉಳಿತಾಯ ಮಾಡುವುದರಿಂದ ನಿವೃತ್ತಿ ವೇಳೆಗೆ ದೊಡ್ಡ ಮೊತ್ತ ನಿಮ್ಮದಾಗಿಸಿಕೊಳ್ಳಬಹುದು.
ಉದಾಹರಣೆಗೆ, 25 ವರ್ಷ ವಯಸ್ಸಿನವರು ಮುಂದಿನ 35 ವರ್ಷಗಳವರೆಗೆ (ಅಂದರೆ 60 ವರ್ಷ ವಯಸ್ಸಿನವರೆಗೆ) NPS ನಲ್ಲಿ ತಿಂಗಳಿಗೆ ರೂ. 10,000 ಹೂಡಿಕೆ ಮಾಡುತ್ತಿದ್ದಾರೆ ಎಂದಿಟ್ಟುಕೊಳ್ಳಿ. 10 ಪ್ರತಿಶತದ ವಾರ್ಷಿಕ ಆದಾಯವನ್ನು ಊಹಿಸಿದರೆ, ಮುಕ್ತಾಯದ ವೇಳೆ ನಿಮ್ಮ 3,82,82,768 ರೂಪಾಯಿ ಆಗಿರುತ್ತದೆ.
ನಿಮ್ಮ ಹೂಡಿಕೆ ಮೂರು ಕೋಟಿ ರೂಪಾಯಿಗೆ ತಲುಪಿದಾಗ ನಿವೃತ್ತಿಯ ನಂತರ ಅವರು ತಿಂಗಳಿಗೆ 76,566 ರೂ ಪಿಂಚಣಿ ಪಡೆಯಬಹುದಾಗಿದೆ.
ಈ ರೀತಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಪಿಂಚಣಿ ಯನ್ನು ನೀವು ಭವಿಷ್ಯದಲ್ಲಿ ಪಡೆಯಬಹುದು.
ಇದನ್ನು ಓದಿ : Belthangady: ಇಬ್ಬರು ಯುವತಿಯರು ನಿಗೂಢ ಸಾವು ; ಸಾವಿನ ಸುತ್ತ ಅನುಮಾನ ವ್ಯಕ್ತ!!!