KPMTCC: ಶಾಲೆಗಳು 10- 15% ಕ್ಕಿಂತ ಹೆಚ್ಚಿನ ಶುಲ್ಕ ಕೇಳಿದರೆ ನಮಗೆ ವರದಿ ಮಾಡಿ – KPMTCC
KPMTCC: ಇಂದಿನ ಕಾಲದಲ್ಲಿ ಶಿಕ್ಷಣ(Education) ಅತ್ಯಗತ್ಯವಾಗಿದ್ದು,ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಭವಿಷ್ಯದ ಏಳಿಗೆಗೆ ಪೂರಕವಾಗಿ ವಿದ್ಯಾರ್ಹತೆ ಮಕ್ಕಳ ಏಳಿಗೆಗೆ ಮಹತ್ತರ ಪಾತ್ರ ವಹಿಸುತ್ತದೆ. ಇವತ್ತು ಶಿಕ್ಷಣ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಇಂದು ಅನೇಕ ವಿದ್ಯಾಸಂಸ್ಥೆಗಳು ತಲೆ ಎತ್ತಿದ್ದು, ಇಂತಹ ಸಂಸ್ಥೆಗಳ ವಿರುದ್ಧ ಸಂಘ ಸಂಸ್ಥೆಗಳು ಧ್ವನಿ ಏರಿಸುತ್ತಿದೆ. ಇದೀಗ, ಶಾಲೆಗಳು 10-15% ಕ್ಕಿಂತ ಹೆಚ್ಚು ಶುಲ್ಕವನ್ನು ಹೆಚ್ಚಿಸಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ ಎಂದು ಕರ್ನಾಟಕದ ಸಂಘಗಳು (KPMTCC)ಕರೆ ನೀಡಿವೆ.
ಈಗಾಗಲೇ 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಿದ್ದು ಖಾಸಗಿ ಶಾಲೆಗಳು ಶೇಕಡಾ 30 ರಿಂದ 40ರಷ್ಟು ಶುಲ್ಕವನ್ನು ಹೆಚ್ಚಿಸಿರುವುದರಿಂದ ಪೋಷಕರು ಚಿಂತಿತರಾಗಿದ್ದಾರೆ. ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ(KARNATAKA SCHOOL EXAMINATION AND ASSESSMENT BOARD)ಶುಲ್ಕ ಹೆಚ್ಚಳದ ನಡೆಯನ್ನು ಖಂಡಿಸಿರುವ ಬೋಧಕ-ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ಮತ್ತು ಖಾಸಗಿ ಶಾಲೆಗಳ ಸಂಘಟನೆಗಳು ಶೇಕಡಾ 15ಕ್ಕಿಂತ ಹೆಚ್ಚು ಶುಲ್ಕ ವಿಧಿಸುವ ಖಾಸಗಿ ಶಾಲೆಗಳ ವಿರುದ್ಧ ದೂರು ನೀಡಲು ಕರೆ ನೀಡಿದೆ. ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿಯ ಬ್ಯಾನರ್‌ನಡಿಯಲ್ಲಿ ಕನಿಷ್ಠ ಐದು ಖಾಸಗಿ ಶಾಲೆಗಳ ಸಂಘಗಳು ಗುರುವಾರ ಒಗ್ಗೂಡಿದೆ. ಕೆಲವು ಶಾಲೆಗಳು ತಮ್ಮ ಶುಲ್ಕವನ್ನು 10-15% ಕ್ಕಿಂತ ಹೆಚ್ಚು ಹೆಚ್ಚಿಸಿರುವ ಬಗ್ಗೆ ಅಸಮಾಧಾನ ಹೊರ ಹಾಕಿದೆ. ಶುಲ್ಕ ಏರಿಕೆಗೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಅವರನ್ನು ಸಂಪರ್ಕಿಸಲು ಸಂಘ ಪೋಷಕರನ್ನು ಕೇಳಿಕೊಂಡಿದೆ.
ಖಾಸಗಿ ಶಾಲೆಗಳ ಮೇಲೆ ಸರ್ಕಾರದ ನಿಯಮಗಳ ಅನುಪಸ್ಥಿತಿಯಲ್ಲಿ ಸಂಘಗಳು ಸ್ವಯಂ ನಿಯಂತ್ರಣ ಚೌಕಟ್ಟನ್ನು ರೂಪಿಸುತ್ತಿವೆ ಎಂದು ಶ್ರೀನಿವಾಸನ್ ಹೇಳಿದ್ದಾರೆ. ಸರ್ಕಾರವು ಅನುದಾನರಹಿತ ಶಾಲೆಗಳಲ್ಲಿ ಶುಲ್ಕವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಜನವರಿಯಲ್ಲಿ ಹೈಕೋರ್ಟ್ ಆದೇಶಿಸಿದ ಬಳಿಕ TOI ಅನೇಕ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳದ ಬಗ್ಗೆ ವರದಿ ನೀಡಿದೆ. “ಶುಲ್ಕ ಹೆಚ್ಚಳದ ಮೇಲೆ 10-15% ಮಿತಿಯನ್ನು ನಾವು ಒಪ್ಪುತ್ತೇವೆ. ಆದರೆ ನಾವು ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸಬೇಕಾದ ಇತರ ಹಲವು ಕ್ಷೇತ್ರಗಳಲ್ಲಿ ಸರ್ಕಾರವು ಸ್ಪಷ್ಟವಾದ ಮಿತಿಗಳನ್ನು ವಿಧಿಸಿದೆ. ಇದು ಒಪ್ಪತಕ್ಕದ್ದಲ್ಲ. ನಾವು ಸರ್ಕಾರದೊಂದಿಗೆ ಮಾತನಾಡಲು ಸಿದ್ಧರಿದ್ದೇವೆ” ಎಂದು ಕುಮಾರ್ ಅವರು ಹೇಳಿದ್ದು, ಆದರೂ, ವಾರ್ಷಿಕ 10% ಹೆಚ್ಚಳ ಅಗತ್ಯ ಎಂದು ಸಂಘವು ಸಮರ್ಥನೆ ನೀಡಿದೆ.
“10-15% ಕ್ಕಿಂತ ಹೆಚ್ಚಿನ ಶುಲ್ಕವನ್ನು ನಾವು ಅನುಮೋದಿಸುವುದಿಲ್ಲ. ಹೊಸ ಪ್ರವೇಶಗಳ ಹೊರತಾಗಿ, ಶಾಲೆಗಳು ಅಸ್ತಿತ್ವದಲ್ಲಿರುವ ವಿದ್ಯಾರ್ಥಿಗಳ ವಾರ್ಷಿಕ ಬೋಧನಾ ಶುಲ್ಕವನ್ನು 10-15% ಕ್ಕಿಂತ ಹೆಚ್ಚು ಹೆಚ್ಚಿಸುವುದು ಸರಿಯಲ್ಲ. ಹೀಗೆ ಕಂಡು ಬಂದಲ್ಲಿ ಪೋಷಕರು ದಾಖಲೆಗಳೊಂದಿಗೆ ನಮ್ಮನ್ನು ಸಂಪರ್ಕಿಸಿದರೆ, ನಾವು ಅದನ್ನು ಶಾಲೆಯೊಂದಿಗೆ ಅಥವಾ ಶಿಕ್ಷಣ ಇಲಾಖೆ ಮಾತನಾಡಿ ಬಗೆಹರಿಸುತ್ತೇವೆ” ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕರ್ನಾಟಕ ಕಾರ್ಯದರ್ಶಿ ಡಿ ಶಶಿ ಕುಮಾರ್ ಮಾಹಿತಿ ನೀಡಿದ್ದಾರೆ. ಕುಂದುಕೊರತೆಗಳೊಂದಿಗೆ ಪೋಷಕರು ತಮ್ಮ ಬಳಿಗೆ ಬಂದರೂ ಕೂಡ ಪರಿಹಾರ ಒದಗಿಸುವ ಪ್ರಯತ್ನ ಮಾಡಬಹುದು. ಶಾಲೆಯಲ್ಲಿ ತಮ್ಮ ಮಗುವಿನ ಭವಿಷ್ಯದ ಬಗ್ಗೆ ಆತಂಕದಿಂದ ಸಾಕ್ಷಿಗಳನ್ನು ನೀಡಲು ಹಿಂದೇಟು ಹಾಕಲು ಮುಂದಾಗುತ್ತಿದ್ದಾರೆ.
ಇದನ್ನು ಓದಿ : IPL 2023 : ಟಿವಿಯಲ್ಲಿ ಐಪಿಎಲ್ ವೀಕ್ಷಣೆಗಿಂತ ಡಿಜಿಟಲ್ ನಲ್ಲಿ ಹೆಚ್ಚಿದ ವೀಕ್ಷಣೆ!!!
I don’t think the title of your article matches the content lol. Just kidding, mainly because I had some doubts after reading the article.
Can you be more specific about the content of your article? After reading it, I still have some doubts. Hope you can help me.
Your point of view caught my eye and was very interesting. Thanks. I have a question for you.