Shortest Actress of Bollywood: ಬಾಲಿವುಡ್ ನಲ್ಲಿ ಅತೀ ಕುಳ್ಳಗಿರುವ ಸ್ಟಾರ್ ನಟಿಯರಿವರು!!

Shortest Actress of Bollywood: ಬಾಲಿವುಡ್ ನಟಿಯರನ್ನು (Bollywood actress) ನೋಡುವಾಗ ಎಲ್ಲರೂ ಹೈಟ್ ಇರುವಂತೆ ಕಾಣುತ್ತಾರೆ. ಕಾರಣ, ಹೈ ಹಿಲ್ಸ್. ಇವರೆಲ್ಲರ ವಿದ್ಯಾಭ್ಯಾಸದ ಬಗ್ಗೆ ನಿಮಗೆ ತಿಳಿದಿರುತ್ತದೆ. ಆದರೆ, ಬಾಲಿವುಡ್ ನಲ್ಲಿ ಅತೀ ಕುಳ್ಳಗಿರುವ ಸ್ಟಾರ್ ನಟಿಯರು (Shortest Actress of Bollywood) ಯಾರು ಅಂತ ನಿಮಗೆ ಗೊತ್ತಾ? ಇಲ್ಲಿದೆ ನೋಡಿ ನಟನೆಯಲ್ಲಿ ಸೈ ಎನಿಸಿಕೊಂಡಿರುವ ಕುಳ್ಳಗಿನ ನಟಿಯರ ಮಾಹಿತಿ.

 

Alia Bhatt : ಅತ್ಯಂತ ಪ್ರತಿಭಾವಂತ ಮತ್ತು ಯುವ ಬಾಲಿವುಡ್ ನಟಿ ಅಲಿಯಾ ಭಟ್ ಬಾಲಿವುಡ್ ನಲ್ಲಿ ಅತೀ ಕುಳ್ಳಗಿರುವ ನಟಿಯರಲ್ಲಿ ಒಬ್ಬರು. ಅಲಿಯಾ ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಂಘರ್ಷ್ (1999) ನಲ್ಲಿ ಬಾಲ ನಟಿಯಾಗಿ ಪಾದಾರ್ಪಣೆ ಮಾಡಿದ ಅಲಿಯಾ ಸದ್ಯ ಹೈವೇ, ಡಿಯರ್ ಜಿಂದಗಿ, ರಾಝಿ ಮತ್ತು ಉಡ್ತಾ ಪಂಜಾಬ್‌, RRR, ಬ್ರಹ್ಮಾಸ್ರ ಸೇರಿದಂತೆ ಹಲವು ಹಿಟ್ ಸಿನಿಮಾಗಳ ಮೂಲಕ ಜನಮನಗೆದ್ದಿದ್ದಾರೆ.

Parineeti Chopra: ಪರಿಣಿತಿ ಚೋಪ್ರಾ ಕೂಡ ಕಡಿಮೆ ಎತ್ತರದ ನಟಿ. ಪರಿಣಿತಿ ಇಶಕ್ ಜಾದೆ, ಲೇಡೀಸ್ ವರ್ಸಸ್ ರಿಕಿ ಬಹ್ಲ್, ಶುದ್ಧ್ ದೇಸಿ ರೊಮ್ಯಾನ್ಸ್, ಕೇಸರಿ ಓರ್ ಮೇರಿ ಪ್ಯಾರಿ ಬಿಂದು ಮುಂತಾದ ಯಶಸ್ವಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Konkona Sen Sharma: ಕೊಂಕಣ ಸೇನ್ ಶರ್ಮಾ ಪ್ರತಿಭಾವಂತ ಬಂಗಾಳಿ ನಟಿ, ಒಬ್ಬ ನಿಪುಣ ಪ್ರದರ್ಶಕಿ ಮಾತ್ರವಲ್ಲದೆ ನಿರ್ಮಾಪಕಿ ಮತ್ತು ನಿರ್ದೇಶಕಿಯೂ ಹೌದು. ಬಾಲಿವುಡ್ ನಲ್ಲಿ ಪೇಜ್ 3 ಮತ್ತು ‘ವೇಕ್ ಅಪ್ ಸಿಡ್’ (Wake Up Sid) ಅಂತಹ ಚಲನಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಹಿಂದಿ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಅಲ್ಲದೆ, ತಮ್ಮ ಸರಳವಾದ ಮತ್ತು ನೈಜವಾದ ನಟನೆಯ ಮೂಲಕ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಆದರೆ, ಕೊಂಕಣ ಸೇನ್ ಶರ್ಮಾ ಕೂಡ ಬಾಲಿವುಡ್ ನಲ್ಲಿರುವ ಕುಳ್ಳಗೆಯ ನಟಿ.

Sunny Leone: ಸನ್ನಿ ಲಿಯೋನ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. ಬಾಲಿವುಡ್’ನಲ್ಲಿ ಟಾಪ್ ಗ್ಲಾಮರಸ್ ನಟಿ ಸನ್ನಿ ಲಿಯೋನ್ ಕೂಡ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.

Rani Mukerji: ರಾಣಿ ಮುಖರ್ಜಿ ತಮ್ಮ ಮೊದಲ ಚಿತ್ರ ‘ರಾಜಾ ಕಿ ಆಯೇಗಿ ಬಾರಾತ್’ ಮೂಲಕ ಪ್ರೇಕ್ಷಕರ ಮನ ಗೆದ್ದರು. ಅಂದಿನಿಂದ ಇಂದಿನವರೆಗೂ ಈ ನಟಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸದ್ಯ ಬಾಲಿವುಡ್‌ ನ ಅತ್ಯಂತ ಕುಳ್ಳಗಿರುವ ನಟಿಯರಲ್ಲಿ ಇವರೂ ಒಬ್ಬರು. 90 ದಶಕದ ಐಕಾನಿಕ್ ರೋಮ್ಯಾಂಟಿಕ್ ನಾಯಕಿಯರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಈ ನಟಿ ಹಲವು ಹಿಟ್ ಸಿನಿಮಾಗಳನ್ನು ನೀಡಿ ಜನಪ್ರಿಯತೆ ಗಳಿಸಿದ್ದಾರೆ.

Madhuri Dixit Nene: ಮಾಧುರಿ ದೀಕ್ಷಿತ್ ಬಾಲಿವುಡ್ ಕಂಡ ಅತ್ಯಂತ ಮೆಚ್ಚುಗೆ ಪಡೆದ ನಟರಲ್ಲಿ ಒಬ್ಬರು ಮತ್ತು ಕಥಕ್ ನೃತ್ಯಗಾರರು. ಹಲವು ಚಿತ್ರಗಳಲ್ಲಿ ನಟಿಸಿರುವ ಮಾಧುರಿ ದೀಕ್ಷಿತ್

5 ಅಡಿ 4 ಇಂಚುಗಳಷ್ಟು ಉದ್ದವಿದ್ದು, ಬಾಲಿವುಡ್ ನಟಿಯರ ಕುಳ್ಳಗಿನ ಪಟ್ಟಿಯಲ್ಲಿದ್ದಾರೆ.

Vidya Balan: ವಿದ್ಯಾ ಬಾಲನ್​ ಅವರಿಗೆ ಬಾಲಿವುಡ್​ನಲ್ಲಿ ಬಹಳ ಬೇಡಿಕೆ ಇದೆ. ಈವರೆಗೂ ಸಖತ್ ಹಿಟ್ ಸಿನಿಮಾಗಳನ್ನು ನೀಡಿದ್ದು, ಸದ್ಯ ನಟಿ ಸ್ತ್ರೀ ಪ್ರಧಾನ ಸಿನಿಮಾಗಳ ಕಡೆಗೆ ಅವರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ವಿದ್ಯಾ ಬಾಲನ್ ಕೂಡ ಬಾಲಿವುಡ್’ನ ಅತ್ಯಂತ ಕುಳ್ಳಗಿರುವ ನಟಿಯರಲ್ಲಿ ಒಬ್ಬರು.

Kajol : ಕಾಜೋಲ್ ದೇವಗನ್ ಹಿಂದಿ ಚಿತ್ರರಂಗದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಕಾಜೋಲ್ 90 ರ ದಶಕದಿಂದಲೂ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರಾಗಿದ್ದು, ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಕಭಿ ಖುಷಿ ಕಭಿ ಗಮ್, ಬಾಜಿಗರ್, ಯು, ಮಿ ಔರ್ ಹಮ್, ಹೆಲಿಕಾಪ್ಟರ್ ಈಲಾ, ವಿ ಆರ್ ಫ್ಯಾಮಿಲಿ ಹೀಗೆ ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Shraddha Kapoor: ಶ್ರದ್ಧಾ ಕಪೂರ್ ಬಾಲಿವುಡ್ ನ ಕುಳ್ಳಗಿನ ನಟಿಯರಲ್ಲಿ ಒಬ್ಬರು. ಏಕ್ ವಿಲನ್, ಹೈದರ್, ಸ್ತ್ರೀ, ಸಾಹೋ, ಬಾಘಿ ಮತ್ತು ಎಬಿಸಿಡಿ ಸಿನಿಮಾಗಳಂತ ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

Leave A Reply

Your email address will not be published.