CRPF GD Constable Job : CRPF ನಲ್ಲಿ 1,29,929 ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕ! ಹೆಚ್ಚಿನ ಮಾಹಿತಿ ಇಲ್ಲಿದೆ!

CRPF GD Constable Job: ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಮೀಸಲು ಪೊಲೀಸ್‌ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳ (CRPF GD Constable Job) ಮಾಹಿತಿಯನ್ನು ತಿಳಿಸಿದ್ದು, ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆಯ ಕರಡುಪ್ರತಿಯನ್ನು ಪ್ರಕಟಿಸಿದೆ. ಸದ್ಯದಲ್ಲೇ ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ, ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ಹೆಸರು : ಕಾನ್ಸ್‌ಟೇಬಲ್ (ಜೆನೆರಲ್ ಡ್ಯೂಟಿ)
ಹುದ್ದೆಗಳ ಸಂಖ್ಯೆ : 1,29,929 (1,25,262 ಪುರುಷ ಮೀಸಲಾತಿ ಹುದ್ದೆಗಳು, 4667 ಮಹಿಳಾ ಮೀಸಲಾತಿ ಹುದ್ದೆಗಳು.)
ಹುದ್ದೆಯ ಶ್ರೇಣಿ : ಜೆನೆರಲ್ ಸೆಂಟ್ರಲ್ ಸರ್ವೀಸ್, ಗ್ರೂಪ್‌ ಸಿ ಹುದ್ದೆ (ನಾನ್‌ ಗೆಜೆಟೆಡ್, ನಾನ್‌ ಮಿನಿಸ್ಟ್ರೇರಿಯಲ್)

ವಿದ್ಯಾರ್ಹತೆ : ಮೆಟ್ರಿಕ್ಯೂಲೇಷನ್‌ (ಎಸ್‌ಎಸ್‌ಎಲ್‌ಸಿ / 10ನೇ ತರಗತಿ)
ವೇತನ : ಲೆವೆಲ್ 3 ಪೇ ಮೆಟ್ರಿಕ್ಸ್‌, Rs.21,700-69,100.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಮಾಜಿ ಅಗ್ನಿವೀರ್ ಅಭ್ಯರ್ಥಿಗಳಿಗೆ ಇಟಿ, ಪಿಎಸ್‌ಟಿ ಪರೀಕ್ಷೆ ವಿನಾಯಿತಿ ಇರುತ್ತದೆ.

ವಯೋಮಿತಿ:
• ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು.
• ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ
• ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ ಗರಿಷ್ಟ 23 ವರ್ಷ.
• ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 26 ವರ್ಷ.

ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಪ್ರೊಬೇಷನ್‌ ಅವಧಿ 2 ವರ್ಷ ಇರುತ್ತದೆ. ಇನ್ನು ಅಭ್ಯರ್ಥಿಗಳು ನೋಟಿಫಿಕೇಶನ್‌ಗಾಗಿ ವೆಬ್ ಸೈಟ್ https://ssc.nic.in/ ಗೆ ಭೇಟಿ ನೀಡಿ.

ಇದನ್ನೂ ಓದಿ: Budget cars: ಭಾರೀ ಅಗ್ಗದ ಬೆಲೆಯಲ್ಲಿ ಲಭ್ಯ ಮಾರುತಿ, ಟಾಟಾದ ಈ ಕಾರುಗಳು!!

 

1 Comment
  1. ^Inregistrare pe Binance says

    Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?

Leave A Reply

Your email address will not be published.