After SSLC Diploma Courses : SSLC ನಂತರ ಮಾಡಬಹುದಾದ ಬೆಸ್ಟ್ ಡಿಪ್ಲೊಮ ಕೋರ್ಸ್‌ಗಳ ಪಟ್ಟಿ ಇಲ್ಲಿದೆ!

After SSLC Diploma Courses : ಇಂದಿನ ಕಾಲದಲ್ಲಿ ಶಿಕ್ಷಣ(education) ಅತ್ಯಗತ್ಯವಾಗಿದ್ದು,ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಭವಿಷ್ಯದ ಏಳಿಗೆಗೆ ಪೂರಕವಾಗಿ ವಿದ್ಯಾರ್ಹತೆ ಮಕ್ಕಳ ಏಳಿಗೆಗೆ ಮಹತ್ತರ ಪಾತ್ರ ವಹಿಸುತ್ತದೆ. ಎಸ್ಎಸ್ಎಲ್ಸಿ (SSLC) ಬಳಿಕ ಮುಂದೇನು? ಎಂಬ ಪ್ರಶ್ನೆ ಸಹಜವಾಗಿ ವಿದ್ಯಾರ್ಥಿಗೂ ಪೋಷಕರಿಗೂ ಮೂಡುವುದು ಸಹಜ. ವಿಜ್ಞಾನ (Science), ವಾಣಿಜ್ಯ (Commerce), ಕಲಾ (Arts) ವಿಭಾಗಗಳಲ್ಲಿ ಯಾವುದನ್ನು ಆರಿಸಿಕೊಂಡರೆ ಒಳ್ಳೆಯದು ಎಂಬ ಗೊಂದಲ ಇರುವುದು ಸಾಮಾನ್ಯ. ಕೆಲವೊಮ್ಮೆ ಪೋಷಕರ ಒತ್ತಡಕ್ಕೆ ವಿದ್ಯಾರ್ಥಿಗಳು ತಮಗಿಷ್ಟಲ್ಲದ ವಿಷಯ ಆರಿಸಿಕೊಂಡು ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಕೂಡ ಇದ್ದು, ಇಲ್ಲಿ ವಿದ್ಯಾರ್ಥಿ ತೆಗೆದುಕೊಳ್ಳುವ ನಿರ್ಧಾರ ಅವರ ಭವಿಷ್ಯವನ್ನು(Future) ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

ಎಸ್‌ಎಸ್‌ಎಲ್‌ಸಿ ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಎಸ್‌ಎಸ್‌ಎಲ್‌ಸಿ (SSLC) ನಂತರ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ ವಿಷಯ, ಕಲಾ ಮತ್ತು ವಾಣಿಜ್ಯ ವಿಭಾಗಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಡಿಪ್ಲೊಮ ಕೋರ್ಸ್‌ಗಳನ್ನು (Best Courses After SSLC)ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲು ಅವಕಾಶವಿದೆ. ಈ ಡಿಪ್ಲೊಮ (After SSLC Diploma Courses)ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಉದ್ಯೋಗವನ್ನು ಕೂಡ ಗಿಟ್ಟಿಸಿಕೊಳ್ಳಬಹುದು.

ಈಗಾಗಲೇ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ (SSLC)ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗಿದ್ದು, ಏಪ್ರಿಲ್ 15ಕ್ಕೆ ಪರೀಕ್ಷೆಗಳು ಕೊನೆಗೊಳ್ಳಲಿದೆ. ಎಸ್‌ಎಸ್‌ಎಲ್‌ಸಿ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ದೊಡ್ದ ಅಭಿಲಾಷೆಯಾಗಿದ್ದು, ಎಸ್‌ಎಸ್‌ಎಲ್‌ಸಿ ಪಾಸಾದ ಪ್ರತಿಯೊಬ್ಬ ವಿದ್ಯಾರ್ಥಿಗೂ, ಪೋಷಕರಿಗೂ ಮುಂದೇ ಯಾವ ಕೋರ್ಸ್‌ ಆಯ್ಕೆ ಮಾಡಿಕೊಂಡರೆ ಉತ್ತಮ ಎನ್ನುವ ಪ್ರಶ್ನೆ ಕಾಡುವುದು ಸಹಜ.

ಸಾಮಾನ್ಯವಾಗಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು (Science)ಆಯ್ಕೆ ಮಾಡಿಕೊಂಡರೆ, ಕಡಿಮೆ ಅಂಕ ಬಂದವರು ಕಲಾ (Arts)ಮತ್ತು ವಾಣಿಜ್ಯ (Commerce)ವಿಭಾಗವನ್ನು ಆಯ್ಕೆ ಮಾಡುವುದು ಸಹಜ. ಈ ವಿಭಾಗಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಡಿಪ್ಲೊಮ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದಾಗಿದೆ. ಹಾಗಿದ್ದರೆ, ಯಾವುದೆಲ್ಲ ಡಿಪ್ಲೋಮಾ ಕೋರ್ಸ್ಗಳಿವೆ ?

ಎಸ್‌ಎಸ್‌ಎಲ್‌ಸಿ ನಂತರ ಆಯ್ಕೆ ಮಾಡಬಹುದಾದ ಬೆಸ್ಟ್ ಕೋರ್ಸ್‌ಗಳ ಪಟ್ಟಿ ಇಲ್ಲಿದೆ.

ಡಿಪ್ಲೊಮ ಇನ್‌ ಇಂಜಿನಿಯರಿಂಗ್ (Diploma in Engineering)

ಹೆಚ್ಚಿನ ವಿದ್ಯಾರ್ಥಿಗಳು ಇಂಜಿನಿಯರ್‌ ಆಗಬೇಕು ಎಂದು ಬಯಸುವುದು ಸಾಮಾನ್ಯ. ಇದಕ್ಕಾಗಿ ನೀವು ಪಿಯುಸಿಯಲ್ಲಿ ವಿಜ್ಞಾನ ವಿಷಯ ಅಭ್ಯಾಸ ಮಾಡಿ ಬಳಿಕ ಇಂಜಿನಿಯರಿಂಗ್‌ ಓದುವ ಅಗತ್ಯವಿಲ್ಲ. ಎಸ್‌ಎಸ್‌ಎಲ್‌ಸಿ ಬಳಿಕ ಡಿಪ್ಲೊಮ ಇನ್‌ಇಂಜಿನಿಯರಿಂಗ್(diploma-in-engineering) ಕೋರ್ಸ್ ಓದಬಹುದು. ಈ ಡಿಪ್ಲೊಮ ಕೋರ್ಸ್‌ನಲ್ಲಿ ಡಿಪ್ಲೊಮ ಇನ್‌ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌, ಡಿಪ್ಲೊಮ ಇನ್‌ ಇಲೆಕ್ಟ್ರಿಕಲ್‌ ಇಂಜಿನಿಯರಿಂಗ್‌, ಡಿಪ್ಲೊಮ ಇನ್‌ ಸಿವಿಲ್‌ ಇಂಜಿನಿಯರಿಂಗ್‌, ಡಿಪ್ಲೊಮ ಇನ್‌ ಕೆಮಿಕಲ್‌ ಇಂಜಿನಿಯರಿಂಗ್‌ ಕೋರ್ಸ್‌ ಕೂಡ ವ್ಯಾಸಂಗ ಮಾಡಬಹುದು.

ಇದರ ಜೊತೆಗೆ ಅನೇಕ ವಿಷಯಗಳಲ್ಲಿ ಡಿಪ್ಲೊಮ ಕೋರ್ಸ್‌ಗಳಿದ್ದು, ಈ ಎಲ್ಲಾ ಕೋರ್ಸ್‌ಗಳು ಮೂರು ವರ್ಷದ ಕೋರ್ಸ್‌ಗಳಾಗಿದ್ದು, ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಯ ಮೂಲಕ ಅಥವಾ ನೇರ ಪ್ರವೇಶದ ಮೂಲಕ ಡಿಪ್ಲೊಮ ಇಂಜಿನಿಯರಿಂಗ್‌ಗೆ ಪ್ರವೇಶ ಪಡೆಯಬಹುದಾಗಿದೆ. ಪ್ರವೇಶ ಪರೀಕ್ಷೆಗಳು ಕಾಲೇಜಗಳನ್ನು ಅವಲಂಬಿತವಾಗಿರುತ್ತದೆ. ಡಿಪ್ಲೊಮ ಇಂಜಿನಿಯರಿಂಗ್‌ ಕೋರ್ಸ್‌ ಬಳಿಕ ಖಾಸಗಿ ವಲಯದಲ್ಲಿ ಮತ್ತು ಸರ್ಕಾರಿ ವಲಯದಲ್ಲಿ ಉದ್ಯೋಗಗಳು ಲಭ್ಯವಾಗುತ್ತದೆ. ಇದಲ್ಲದೆ, ಸ್ವಯಂ ಉದ್ಯೋಗವನ್ನು ಕೂಡ ಆರಂಭಿಸಬಹುದಾಗಿದೆ.

ಡಿಪ್ಲೊಮಾ ಇನ್ ಆರ್ಟ್ ಟೀಚರ್(Diploma in Art Teaching)

ಡಿಪ್ಲೊಮಾ ಇನ್ ಆರ್ಟ್ ಟೀಚಿಂಗ್ ಎನ್ನುವುದು ಶಾರ್ಟ್‌ ಟೈಂ ಕೋರ್ಸ್ ಆಗಿದೆ. ಈ ಕೋರ್ಸ್‌ನಲ್ಲಿ ನಿಮಗೆ ಪೇಟಿಂಗ್‌, ಸ್ಕೆಚಿಂಗ್ ಬಗ್ಗೆ ಹೇಳಿಕೊಡಲಾಗುತ್ತದೆ. ಈ ಕೋರ್ಸ್‌ಗೆ ಪ್ರವೇಶ ಪಡೆಯಲು ವಿದ್ಯಾರ್ಥಿಯೂ 17 ವರ್ಷಕ್ಕಿಂತ ಮೇಲ್ಪಟ್ಟವರಿರಬೇಕು. ಇದು ಆರು ತಿಂಗಳ ಕೋರ್ಸ್‌ ಆಗಿದ್ದು, ಈ ಕೋರ್ಸ್ ಮುಗಿದ ಬಳಿಕ ಆರ್ಟ್ ಟೀಚರ್ ಆಗಿ ಕೇಲಸ ಮಾಡಬಹುದಾಗಿದ್ದು, ಸ್ವಯಂ ಉದ್ಯೋಗವನ್ನು ಪಡೆಯಲು ಅವಕಾಶವಿದೆ.

ಸ್ಟೆನೋಗ್ರಫಿಯಲ್ಲಿ ಡಿಪ್ಲೊಮಾ(Stenography Diploma)

ಸಾಮಾನ್ಯವಾಗಿ ಶೀಘ್ರಲಿಪಿಗಾರರಿಗೆ ನ್ಯಾಯಾಲಯಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ನ್ಯಾಯಾಲಯಗಳು, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ, ಖಾಸಗಿ ಕ್ಷೇತ್ರಗಳಲ್ಲು ಶೀಘ್ರಲಿಪಿಗಾರರಿಗೆ ಉದ್ಯೋಗವಕಾಶ ಹೇರಳವಾಗಿದ್ದು, ಈ ಕೋರ್ಸ್‌ನ ಅವಧಿಯು 1 ರಿಂದ 2 ವರ್ಷಗಳವರೆಗೆ ಇದ್ದು, ಸಂಸ್ಥೆಯಿಂದ ಸಂಸ್ಥೆಗೆ ಬದಲಾಗುತ್ತದೆ.

ಲಲಿತಕಲೆಯಲ್ಲಿ ಡಿಪ್ಲೊಮಾ (ಡಿಪ್ಲೊಮ ಇನ್ ಫೈನ್ ಆರ್ಟ್ಸ್)

ಡಿಪ್ಲೊಮ ಇನ್ ಫೈನ್ ಆರ್ಟ್ಸ್(Diploma in Fine Arts)ಎಂಬುದು ಸೃಜನಶೀಲ ಮತ್ತು ವಿನ್ಯಾಸದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಈ ಕೋರ್ಸ್‌ ಮಾಡಬಹುದಾಗಿದೆ. ಈ ಕೋರ್ಸ್‌ನ ಅವಧಿ 1 ವರ್ಷವಾಗಿದೆ. ಆರ್ಟ್ಸ್ ಮತ್ತು ಅದರ ಸಂಬಂಧಿತ ಕ್ಷೇತ್ರಗಳ ಪ್ರಮಾಣಪತ್ರ ಮಟ್ಟದ ಕೋರ್ಸ್ ಆಗಿದ್ದು,ಎಸ್‌ಎಸ್‌ಎಲ್‌ಸಿಯಲ್ಲಿ ತೆಗೆದುಕೊಂಡ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಪ್ರವೇಶ ನೀಡಲಾಗುತ್ತದೆ. ಕೋರ್ಸ್‌ನ ನಂತರ ಗ್ರಾಫಿಕ್ ಡಿಸೈನರ್, ಆರ್ಟ್ ಟೀಚರ್, ಫ್ಲ್ಯಾಶ್ ಆನಿಮೇಟರ್, ಆರ್ಟ್ ಲೈಸನ್ ಆಫೀಸರ್ ನಂತಹ ವೃತ್ತಿ ಆಯ್ಕೆಗಳಿವೆ.

ಡಿಪ್ಲೋಮ ಇನ್‌ ಫ್ಯಾಷನ್ ಡಿಸೈನಿಂಗ್(Diploma In Fashion Designing)

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ನಂತರ ಫ್ಯಾಶನ್‌ ಡಿಸೈನಿಂಗ್‌ ಕೋರ್ಸ್‌ನ್ನು ಆಯ್ಕೆ ಮಾಡಬಹುದು. ಇಂದು ಹೆಚ್ಚಿನ ಮಂದಿ ಈ ಕೋರ್ಸ್‌ ಬಗ್ಗೆ ಹೆಚ್ಚಿನ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಈಗಿನ ಟ್ರೆಂಡ್‌ಗೆ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಹೆಚ್ಚು ಬೇಡಿಕೆ ಹೊಂದಿದ್ದು, ಈ ಕೋರ್ಸ್‌ ಮುಗಿದ ಮೇಲೆ ಹೆಚ್ಚು ಉದ್ಯೋಗಾವಕಾಶವಿದೆ.

Leave A Reply

Your email address will not be published.