KSRTC Bus : ಕೆಎಸ್ ಆರ್ ಟಿಸಿ ಬಸ್ ನಲ್ಲಿ ಯುವತಿಗೆ ಗುಪ್ತಾಂಗ ತೋರಿಸಿದ ಪ್ರಯಾಣಿಕ! ಮುಂದೇನಾಯ್ತು?

KSRTC Bus : ಕೆಎಸ್​ಆರ್​ಟಿಸಿ ಬಸ್​ನಲ್ಲಿ (KSRTC Bus) ಯುವತಿಗೆ (Women)ಗುಪ್ತಾಂಗ ಪ್ರದರ್ಶಿಸಿದ ಆರೋಪದ ಮೇಲೆ 52 ವರ್ಷದ ವ್ಯಕ್ತಿಯನ್ನು ಕೇರಳದ ಕರಮಾನಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ನೆಮ್ಮಮ್​ ಬಸ್​ ನಿಲ್ದಾಣನಿಂದ ಬಸ್ಸನ್ನೇರಿದ ಹುಡುಗಿಗೆ ಜಯನ್​ ತನ್ನ ಗುಪ್ತಾಂಗ ಪ್ರದರ್ಶಿಸಿದ್ದ ಎನ್ನಲಾಗಿದೆ. ತನ್ನ ಪಕ್ಕದ ಸೀಟಿನಲ್ಲಿ ಕುಳಿತಿರುವಾಗಲೇ ಆರೋಪಿ(Crime News) ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮೊದಲು ಯುವತಿ ವ್ಯಕ್ತಿಯ ನಡೆಯನ್ನು ನಿರ್ಲಕ್ಷಿಸಿದ್ದು, ಆದರೆ, ಬಸ್ಸಿನಲ್ಲಿ ಇದೇ ಕೃತ್ಯವನ್ನು ದೂರದವರೆಗೆ ಆರೋಪಿ ಮುಂದುವರಿಸಿದ್ದರಿಂದ ಆಕ್ರೋಶಗೊಂಡ ಯುವತಿ ಬಸ್​ನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾಳೆ.

ಸದ್ಯ,ಬಂಧಿತ ವ್ಯಕ್ತಿಯನ್ನು ಜಯನ್​ ಎಂದು ಗುರುತಿಸಲಾಗಿದ್ದು, ಈತ ಕರಮಾನದ ಚುಲ್ಲಮುಕ್ಕುವಿನ ಮುಂಡಪ್ಲವಿಲ ವೀಟಿಲ ಮೂಲದ ನಿವಾಸಿ ಎನ್ನಲಾಗಿದೆ. ಈ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಆಗಮಿಸಿದ ಕರಮಾನಾ ವೃತ್ತ ನಿರೀಕ್ಷಕ ಸುಜಿತ್​, ಸಬ್​ ಇನ್ಸ್​ಪೆಕ್ಟರ್​ ಸಂತು ಮತ್ತು ಸಿಪಿಒ ಸಾಜನ್​ ಮತ್ತು ಅಭಿಲಾಶ್​ ಯುವತಿಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿ, ಠಾಣೆಗೆ ಒಯ್ದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

ಇದನ್ನು ಓದಿ : Jio vs Airtel : ಜಿಯೋ ಮತ್ತು ಏರ್ಟೆಲ್ ನ ವಾರ್ಷಿಕ ಯೋಜನೆಯಲ್ಲಿ ಯಾರ ಪ್ಲ್ಯಾನ್ ಬೆಸ್ಟ್?

2 Comments
  1. Your article helped me a lot, is there any more related content? Thanks!

  2. binance referral bonus says

    Can you be more specific about the content of your article? After reading it, I still have some doubts. Hope you can help me.

Leave A Reply

Your email address will not be published.