Transformer wire biting incident: ಪತ್ನಿ ತವರಿಗೆ ಹೋದಳೆಂದು ಕುಡಿದು ಟ್ರಾನ್ಸ್​ಫಾರ್ಮರ್ ಹತ್ತಿ ಹೈ-ಟೆನ್ಷನ್ ತಂತಿ ಕಚ್ಚಿದ ಪತಿರಾಯ! ನಂತರ ಆದದ್ದೇನು ಗೊತ್ತಾ?

Transformer wire biting incident : ಕುಡಿದ ಅಮಲಿನಲ್ಲಿರೋರಿಗೆ ತಾವು ಏನು ಮಾಡುತ್ತೇವೆ ಎಂಬ ಪರಿವೇ ಇರೋದಿಲ್ಲ. ಮನಬಂದಂತೆ ಮಾತನಾಡುತ್ತಾ, ತೋಚಿದ್ದನ್ನು ಮಾಡುತ್ತಾ ಬೇಕಾಬಿಟ್ಟಿ ಅಲೆಯುತ್ತಿರುತ್ತಾರೆ. ಅದರಲ್ಲೂ ಗಲಾಟೆ-ಗಿಲಾಟೆ ಏನಾದರೂ ನಡೆಯಿತೆಂದರೆ ಅವರನ್ನು ಹಿಡಿದು ನಿಲ್ಲಿಸಲು ಸಾಧ್ಯವೇ ಇಲ್ಲ ಬಿಡಿ. ದೆವ್ವ-ಭೂತಗಳೆಲ್ಲ ಮೈಮೇಲೆ ಒಮ್ಮೆಲೇ ವಕ್ಕರಿಸಿಕೊಂಡುಬಿಡುತ್ತವೆ. ಅಂತೆಯೇ ಇಲ್ಲೊಬ್ಬ ಭೂಪ ಕುಡಿದ ಅಮಲಿನಲ್ಲಿ ಪತ್ನಿ ಬಳಿ ಜಗಳವಾಡಿಕೊಂಡು ಬಂದು ಟ್ರಾನ್ಸ್​ಫಾರ್ಮರ್(Transformer) ಹತ್ತಿ ಹೈ ಟೆನ್ಷನ್ ತಂತಿಯನ್ನು ಕಚ್ಚಿರುವ ಘಟನೆ ಬೆಳಕಿಗೆ ಬಂದಿದೆ.

 

ಹೌದು, ತಮಿಳುನಾಡಿನ(Tamilnad) ಚಿನ್ನಮಂಗೋಡಿನ(Chinnamangodu) ನಿವಾಸಿ, 33 ವರ್ಷದ ಧರ್ಮದುರೈ(Dharmadurai) ಎಂಬಾತನೇ ಟ್ರಾನ್ಸ್​ಫಾರ್ಮರ್ ಹತ್ತಿದ ಅಸಾಮಿ. ಈ ಮಹಾಶಯ ತನ್ನ ಪತ್ನಿ ಜಗಳವಾಡಿಕೊಂಡು ಹುಟ್ಟೂರು ರೆಡ್ಡಿಪಾಳ್ಯಕ್ಕೆ ತೆರಳಿದ್ದರಿಂದ ಮನನೊಂದಿದ್ದ. ಹೆಂಡತಿಯನ್ನು ಮರಳಿ ಕರೆತರಲು ಮಾವನ ವಿರುದ್ಧ ದೂರು ನೀಡಲು ಹಲವು ಬಾರಿ ಅರಂಬಕ್ಕಂ(Arambakkam) ಪೊಲೀಸರನ್ನು ಸಂಪರ್ಕಿಸಿದ್ದ.

ಅಂತೆಯೇ ಬುಧವಾರ ಧರ್ಮದುರೈ ಅವರು ಮದ್ಯದ ಅಮಲಿನಲ್ಲಿ ಪೊಲೀಸ್ ಠಾಣೆಗೆ ಬಂದು ಮತ್ತೆ ದೂರು ನೀಡಲು ಮುಂದಾಗಿದ್ದಾನೆ. ಈ ವೇಳೆ ಠಾಣೆಯಲ್ಲಿ ಆತನಿಗೆ ಕಾಯುವ ಕೊಠಡಿಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಲಾಗಿದೆ. ಇದರಿಂದ ಇನ್ನಷ್ಟು ನೊಂದ ಧರ್ಮದುರೈ ಏಕಾಏಕಿ ಪೊಲೀಸ್ ಠಾಣೆ ಆವರಣದಿಂದ ಹೊರಬಂದು ಕಟ್ಟಡದ ಎದುರಿನ ಟ್ರಾನ್ಸ್‌ಫಾರ್ಮರ್‌ ಹತ್ತಿ ಹೈ-ಟೆನ್ಷನ್ ತಂತಿಯನ್ನು (Transformer wire biting incident) ಕಚ್ಚಿದ್ದಾನೆ. ಈ ಕುರಿತಂತೆ ಪೋಲೀಸರು ಮಾಹಿತಿ ನೀಡಿದ್ದಾರೆ.

ಜನರು ಮತ್ತು ಪೊಲೀಸರು ಯಾವುದೇ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳದಂತೆ ಒತ್ತಾಯಿಸಿದರೂ ಧರ್ಮದುರೈ ಹೈಟೆನ್ಷನ್ ತಂತಿಯನ್ನು ಕಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಧರ್ಮದುರೈ ಮಾಡಿದ ಈ ಸಾಹಸ ಕಾರ್ಯದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಗಾಯಾಳು ಧರ್ಮದುರೈ ಅವರನ್ನು ಎಳವೂರ್ ಆಸ್ಪತ್ರೆಗೆ ಕರೆದೊಯ್ದು ನಂತರ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈಗಲಾದರೂ ಹೆಂಡತಿ ಬಂದು ಈ ಪತಿರಾಯನ ಆರೈಕೆ ಮಾಡುತ್ತಾಳೋ ನೋಡಬೇಕು.

 

ಇದನ್ನು ಓದಿ : Sony ZV-1F Vlogging Camera : ಸೋನಿಯಿಂದ ಹೊಸ ZV-1F vlogging ಕ್ಯಾಮೆರಾ ಬಿಡುಗಡೆ! ಫೀಚರ್ಸ್ ಸೂಪರ್ ಸ್ಮಾರ್ಟ್ !

1 Comment
  1. nimabi says

    Thank you very much for sharing, I learned a lot from your article. Very cool. Thanks. nimabi

Leave A Reply

Your email address will not be published.