Pope Francis:’ಲೈಂಗಿಕತೆ’ ಎನ್ನುವುದು ದೇವರು ಮಾನವನಿಗೆ ನೀಡಿರುವ ಅದ್ಭುತ ಸಂಗತಿ- ಪೋಪ್ ಫ್ರಾನ್ಸಿಸ್

Pope Francis : ಕ್ಯಾಥೋಲಿಕ್ ಚರ್ಚ್ ನ (Catholic Church)ಮುಖ್ಯಸ್ಥರಾದ ಪೋಪ್ ಫ್ರಾನ್ಸಿಸ್(Pope Francis) ಅವರು ಲೈಂಗಿಕ ಕ್ರಿಯೆ (Sexuality) ಬಗ್ಗೆ ಸಂವಾದ ನಡೆಸಿದ್ದು, ಈ ಸಂದರ್ಭ ಲೈಂಗಿಕ ಕ್ರಿಯೆ ದೇವರ ಅದ್ಭುತ ಸೃಷ್ಟಿ ಎಂದು ವರ್ಣಿಸಿದ್ದಾರೆ.

 

ಬುಧವಾರ ಬಿಡುಗಡೆಯಾದ ಸಾಕ್ಷ್ಯಚಿತ್ರದಲ್ಲಿ (Documentary Film Regarding Sexuality) ಲೈಂಗಿಕತೆಯ ಸದ್ಗುಣಗಳನ್ನು ಪೋಪ್ ಫ್ರಾನ್ಸಿಸ್ ಶ್ಲಾಘನೆ ಮಾಡಿದ್ದು, “ಸೆಕ್ಸ್ ಎಂಬುದು ದೇವರು ಮಾನವನಿಗೆ ನೀಡಿದ ಸುಂದರವಾದ ಸಂಗತಿಗಳಲ್ಲಿ ಒಂದು ಎಂಬುದಾಗಿ ಬಣ್ಣಿಸಿದ್ದಾರೆ. 86 ವರ್ಷ ವಯಸ್ಸಿನ ಪೋಪ್ ಫ್ರಾನ್ಸಿಸ್ , ಡಿಸ್ನಿ ನಿರ್ಮಾಣದ “ದಿ ಪೋಪ್ ಆನ್ಸರ್ಸ್” ನಲ್ಲಿ ಈ ರೀತಿ ಬಣ್ಣಿಸಿದ್ದು, ಸಾಕ್ಷ್ಯಚಿತ್ರವನ್ನು (Documentary Film)ಕಳೆದ ವರ್ಷ ರೋಮ್‌ನಲ್ಲಿ ನಡೆದ ಸಂವಾದ ಸಭೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಅದರಲ್ಲಿ 20 ವರ್ಷ ವಯಸ್ಸಿನ 10 ಜನರೊಂದಿಗೆ ಸಂವಾದ ನಡೆಸಲಾಗಿದೆ.

ಸಾಕ್ಷ್ಯಚಿತ್ರದಲ್ಲಿ LGBT ಹಕ್ಕುಗಳು, ಗರ್ಭಪಾತ(Abortion) ಪೋರ್ನ್ ಉದ್ಯಮ, ಲೈಂಗಿಕತೆ ಮತ್ತು ಕ್ಯಾಥೋಲಿಕ್ ಚರ್ಚ್‌ನೊಳಗಿನ ನಂಬಿಕೆ ಮತ್ತು ಲೈಂಗಿಕ ನಿಂದನೆಯನ್ನ ಒಳಗೊಂಡಂತೆ ಫ್ರಾನ್ಸಿಸ್ ಅವರನ್ನು ಪ್ರಶ್ನೆ ಕೇಳಲಾಗಿದೆ. ಆ ಎಲ್ಲ ಪ್ರಶ್ನೆಗಳಿಗೆ ಪೋಪ್ ಉತ್ತರ ನೀಡಿದ್ದು, “ಮನುಷ್ಯನಿಗೆ ದೇವರು ನೀಡಿದ ಸುಂದರವಾದ ಸಂಗತಿಗಳಲ್ಲಿ ಲೈಂಗಿಕತೆ ಒಂದು” ಎಂದು ಅವರು ಸಾಕ್ಷ್ಯಚಿತ್ರದಲ್ಲಿ ತಿಳಿಸಿದ್ದಾರೆ. ಎಲ್ಲಾ ವ್ಯಕ್ತಿಗಳು ದೇವರ ಮಕ್ಕಳು, ದೇವರು ಯಾರನ್ನೂ ತಿರಸ್ಕಾರ ಭಾವನೆಯಿಂದ ನೋಡುವುದಿಲ್ಲ. ದೇವರು ತಂದೆ. ಚರ್ಚ್‌ನಿಂದ ಯಾರನ್ನೂ ಹೊರಹಾಕಲು ನನಗೆ ಯಾವುದೇ ಹಕ್ಕಿಲ್ಲ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ಇದೇ ವೇಳೆ, ಗರ್ಭಪಾತದ ಬಗ್ಗೆ ಉತ್ತರ ನೀಡುವಾಗ ಆ ಸ್ಥಿತಿಯಲ್ಲಿ ಮಹಿಳೆಯರ ಬಗ್ಗೆ ಕರುಣೆ ತೋರಬೇಕಾಗಿದ್ದು, ಆದರೆ ಗರ್ಭಪಾತ (Abortion)ಅಭ್ಯಾಸವು ಸ್ವೀಕರಿಸಲ್ಪಡುವ ವಿಚಾರವಲ್ಲ ಎಂದು ಕೂಡ ಉತ್ತರ ನೀಡಿದ್ದಾರೆ.

ಹಸ್ತಮೈಥುನದ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಇದಕ್ಕೆ ಉತ್ತರಿಸಿದ ಅವರು “ನಿಜವಾದ ಲೈಂಗಿಕ ಅಭಿವ್ಯಕ್ತಿಯಿಂದ ದೂರವಿರುವುದು ನಿಮ್ಮನ್ನು ಕುಂಠಿತಗೊಳಿಸಬಹುದು” ಎಂದು ತಿಳಿಸಿದ್ದಾರೆ. LGBT ಜನರನ್ನು ಕ್ಯಾಥೋಲಿಕ್ ಚರ್ಚ್ ಸ್ವಾಗತಿಸುವ ಬಗ್ಗೆ ಕೂಡ ಪೋಪ್ ಫ್ರಾನ್ಸಿಸ್ ಮಾಹಿತಿ ನೀಡಿದ್ದಾರೆ. ಪೋಪ್ ಅವರ ಹೇಳಿಕೆಗಳನ್ನು ಅಧಿಕೃತ ವ್ಯಾಟಿಕನ್ ಪತ್ರಿಕೆಯಾದ L’Osservatore Romano ಪ್ರಕಟಿಸಿದ್ದು, ಇದು ಯುವ ಜನರೊಂದಿಗೆ ಅವರ ಸಂಭಾಷಣೆಯನ್ನು “ಮುಕ್ತ ಮತ್ತು ಪ್ರಾಮಾಣಿಕ ಸಂಭಾಷಣೆ” ಎಂದು ವಿವರಣೆ ನೀಡಿದೆ.

 

ಇದನ್ನು ಓದಿ : Noise HRX Sprint Smartwatch : ನಾಯ್ಸ್ ಕಂಪೆನಿ ಅನಾವರಣ ಮಾಡಿದೆ ಹೊಸ ಸ್ಮಾರ್ಟ್ ವಾಚ್ ; ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ 

Leave A Reply

Your email address will not be published.