Rashmika Mandanna – Vijay Deverakonda : ರಶ್ಮಿಕಾ ವಿಜಯ್‌ ದೇವರಕೊಂಡ ಒಂದೇ ಮನೆಯಲ್ಲಿ ವಾಸ! ಇಲ್ಲಿದೆ ನೋಡಿ ಸಾಕ್ಷಿ

Rashmika Mandanna- Vijay Deverakonda:ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ(Rashmika Mandanna) ಇತ್ತೀಚೆಗೆ ಒಂದಲ್ಲ ಒಂದು ವಿಚಾರಕ್ಕೆ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಕಾಂತಾರ ಸಿನೆಮಾದ(Kantara Cinema)ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ನ್ಯಾಷನಲ್ ಕ್ರಷ್ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಪಡ್ಡೆ ಹುಡುಗರ ಹೃದಯ ಬಡಿತ ಏರು ಪೇರಾಗುವಂತೆ ಮಾಡೋದು ಕಾಮನ್. ಇದೀಗ ಕಿರಿಕ್ ಬೆಡಗಿಯ ಬರ್ತ್ಡೇ ಪಾರ್ಟಿ ಮುಗಿಯುತ್ತಿದ್ದಂತೆ ಹೊಸ ವಿಚಾರ ಸದ್ದು ಮಾಡುತ್ತಿದೆ.

 

ರಶ್ಮಿಕಾ ಮಂದಣ್ಣ(Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Deverakonda) ಇಬ್ಬರ ನಡುವೆ ಲವ್ ಕಹಾನಿ ನಡೆಯುತ್ತಿದೆ ಎಂಬ ಸುದ್ದಿ ವರ್ಷಗಳಿಂದಲೂ ಹರಿದಾಡುತ್ತಿದೆ. ಇಬ್ಬರೂ ಈ ಸುದ್ದಿಗಳನ್ನು ನಿರಾಕರಿಸಿದರು ಕೂಡ ಜೊತೆಯಾಗಿ ಆಗಾಗ ಕ್ಯಾಮರಾ ಕಣ್ಣಲ್ಲಿ ಸೆರೆಯಾಗುತ್ತಲೆ ಇರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ನ್ಯೂ ಇಯರ್ ಪಾರ್ಟಿ ದಿನ ಒಟ್ಟಿಗೆ ಕಾಣಿಸಿಕೊಂಡಿದ್ದರು.ನ್ಯಾಷನಲ್‌ ಕ್ರಶ್‌ ನಟಿ ರಶ್ಮಿಕಾ ಮಂದಣ್ಣ ನಿನ್ನೆಯಷ್ಟೇ (ಏಪ್ರಿಲ್‌ 5) ಅವರಿಗೆ ಜನುಮ ದಿನದ ಸಂಭ್ರಮ. 27ನೇ ವರ್ಷದ ಹುಟ್ಟಹಬ್ಬದ(Rashmika Mandanna’s birthday) ಖುಷಿಯಲ್ಲಿ ಮುಳುಗಿರುವ ನಟಿಗೆ ಅಭಿಮಾನಿ ಬಳಗದಿಂದ ಶುಭಾಶಯಗಳ ಸುರಿಮಳೆ ಗೈದಿದ್ದಾರೆ. ನೆಟ್ಟಿಗರು, ಅಭಿಮಾನಿಗಳ ನಡುವೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಇದಕ್ಕೆ ಪೂರಕವಾಗಿ ನಿನ್ನೆಯಷ್ಟೇ ಕಿರಿಕ್ ಬೆಡಗಿ ಮಾಡಿದ ವೀಡಿಯೋ ಸಾಕ್ಷಿ ಹೇಳುವಂತೆ ತೋರುತ್ತಿದೆ. ಈ ಜೋಡಿ ಜೊತೆ ಜೊತೆಯಲಿ ಕಂಡ ಕೂಡಲೇ ಮೀಡಿಯಾಗಳ ಪಾಲಿಗೆ ಆಹಾರ ಆಗೋದು ಕಾಮನ್.

ಏಪ್ರಿಲ್ 05 ರಂದು ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ(Rashmika Mandanna Birthday) ಸಂಭ್ರಮಕ್ಕೆ ಹಲವು ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದರು. ಈ ಬಳಿಕ ರಶ್ಮಿಕಾ ಅವರು ಕೂಡ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡು, ತಮ್ಮ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ಬಿಳಿ ಬಣ್ಣದ ಉಡುಗೆ ತೊಟ್ಟು ಬೆರಳಿಗೆ ಸುಂದರವಾದ ಉಂಗುರ ತೊಟ್ಟು ವಿಡಿಯೋದಲ್ಲಿ ನಟಿ ಕಂಗೊಳಿಸಿದ್ದಾರೆ. ಆದರೆ, ಈ ವಿಡಿಯೋ ಶೇರ್ ಮಾಡಿದ ಮೇಲೆ ಅಭಿಮಾನಿಗಳಲ್ಲಿ ವಿಜಿ – ರಶ್ ನಡುವೆ ಲವ್ ಸ್ಟೋರಿ ಪಕ್ಕಾ ಎನ್ನುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಮೊದಲು ಲೈವ್ ಮಾಡಲು ಹೋಗಿ ಅಭಿಮಾನಿಗಳ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಿರಿಕ್ ಬೆಡಗಿ ಇದೀಗ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಸಿಕ್ಕಿಬಿದ್ರಾ? ಅನ್ನೋ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಕಾರಣವೂ ಇದೆ.

ರಶ್ಮಿಕಾ ಹುಟ್ಟಿದ ಹಬ್ಬಕ್ಕೆ ಶುಭ ಕೋರಿದ ಅಭಿಮಾನಿಗಳಿಗೆ ಧನ್ಯವಾದ ಹೇಳಲು ವೀಡಿಯೋ(Video) ರೆಕಾರ್ಡ್ ಮಾಡುವಾಗ ರಶ್ಮಿಕಾ ಕೂತಿದ್ದ ಕೋಣೆಯ ತಾರಸಿ, ಹಾಗೂ ಈ ಹಿಂದೆ ವಿಜಯ್ ದೇವರಕೊಂಡ ಹಂಚಿಕೊಂಡಿದ್ದ ಫೋಟೊ ಒಂದರ ತಾರಸಿ ಥೇಟ್ ಒಂದೇ ರೀತಿ ಇದ್ದು, ಇದನ್ನು ಗಮನಿಸಿದ ನೆಟ್ಟಿಗನೊಬ್ಬ ವಿಜಯ್ ದೇವರಕೊಂಡ ಹಂಚಿಕೊಂಡ ಫೋಟೊ ಹಾಗೂ ರಶ್ಮಿಕಾರ ವಿಡಿಯೋ ಅನ್ನು ಒಟ್ಟಿಗೆ ಟ್ವೀಟ್ ಮಾಡಿ ಎರಡರ ತಾರಸಿಯು ಒಂದೇ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗಾಗಿ, ವಿಜಯ್ ಹಾಗೂ ರಶ್ಮಿಕಾ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ರುಜುವಾತು ಮಾಡಲು ಇದಕ್ಕಿಂತ ಮಿಗಿಲಾದ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ವಿಡಿಯೋದಲ್ಲಿ ರಶ್ಮಿಕಾ ಧರಿಸಿರುವ ಉಂಗುರ ವಿಜಯ್ ದೇವರಕೊಂಡ ನೀಡಿದ್ದು ಎಂದು ಕೂಡ ಹೇಳಿದ್ದಾನೆ. ರಶ್ಮಿಕಾ ಮಂದಣ್ಣ, ಈ ಬಗ್ಗೆ ಬಹಳ ಯೋಚನೆ ಮಾಡಲು ಹೋಗಬೇಡಿ ಎಂದು ಆ ವ್ಯಕ್ತಿಯ ಟ್ವೀಟ್​ಗೆ ನಟಿ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ. ಯಾರೇನೇ ಅನ್ನಲಿ ಅದಕ್ಕೂ ನನಗೂ ಸಂಬಂಧವೇ ಇಲ್ಲ ಅನ್ನೋ ಪಾಲಿಸಿ ಅನುಸರಿಸಿಕೊಂಡು ಕಿರಿಕ್ ಬೆಡಗಿ ತಮ್ಮ ಸಿನಿ ಬದುಕಲ್ಲಿ ಸಾಲು ಸಾಲು ಸಿನಿಮಾಗಳ ಆಫರ್ ಹಿಡಿದು ಜನರನ್ನು ರಂಜಿಸಲು ರೆಡಿಯಾಗುತ್ತಿದ್ದಾರೆ.

https://t.co/VotVtLUAr5

 

Leave A Reply

Your email address will not be published.