KPSC : KPSC ‘ಬಿ’ ವೃಂದದ ಹುದ್ದೆಗಳಿಗೆ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ!!

Share the Article

KPSC: KPSC ‘ಬಿ’ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಬಹುಮುಖ್ಯ ಮಾಹಿತಿಯೊಂದು ಇಲ್ಲಿದೆ. ಪರೀಕ್ಷೆ (KPSC exam date) ಯಾವಾಗ ನಡೆಯಲಿದೆ? ಹಾಲ್ ಟಿಕೆಟ್ ಪಡೆಯುವುದು ಹೇಗೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಕರ್ನಾಟಕ ಲೋಕಸೇವಾ ಆಯೋಗದ (KPSC) ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ / ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಏಪ್ರಿಲ್ 11 ಮತ್ತು 12 ರಂದು ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

ಅಭ್ಯರ್ಥಿಗಳು ಸದರಿ ಪರೀಕ್ಷೆಗಳಿಗೆ ಪ್ರವೇಶ ಪತ್ರಗಳನ್ನು (hall ticket) ಆಯೋಗದ ವೆಬ್ ಸೈಟ್ https://kpsc.kar.nic.in ಗೆ ಭೇಟಿ ನೀಡುವ ಮೂಲಕ ಪಡೆದುಕೊಳ್ಳಬಹುದು. ಏಪ್ರಿಲ್ 5 ರಿಂದಲೇ ಪ್ರವೇಶ ಪತ್ರಗಳನ್ನು ಡೌನ್ಹೋಡ್ ಮಾಡಿಕೊಳ್ಳಬಹುದಾಗಿದೆ.

ಅಭ್ಯರ್ಥಿಗಳಿಗೆ ಪರೀಕ್ಷೆಯ ಬಗ್ಗೆ ಏನಾದರೂ ಗೊಂದಲಗಳಿದ್ದರೆ ಅಥವಾ ತಾಂತ್ರಿಕ ಸಮಸ್ಯೆ ಉಂಟಾದಲ್ಲಿ ಸಹಾಯವಾಣಿ ಸಂಖ್ಯೆ-

18005728707 ಸಂಪರ್ಕಿಸಬಹುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ, ಸುರಳ್ಳ‌ ವಿಕಾಸ್ ಕಿಶೋರ್ ತಿಳಿಸಿದ್ದಾರೆ

Leave A Reply