Divya Bharati : 19ನೇ ವಯಸ್ಸಿಗೇ ಹಿಟ್ ಸಿನಿಮಾಗಳನ್ನು ನೀಡಿದ್ದ ಈ ನಟಿಯ ಸಾವು ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು! ಅಷ್ಟಕ್ಕೂ ಅಂದು ನಡೆದದ್ದೇನು?

Divya Bharti :ಚಿತ್ರರಂಗ ಅನ್ನೋದು ಬಣ್ಣದ ಲೋಕ ಇದ್ದಂತೆ. ಇಲ್ಲಿ ಯಾರ ಜೀವನ ಹೇಗೆ ಎಂದು ಹೇಳಲಾಗದು. ಕೆಲವರು ಇಲ್ಲಿಗೆ ಬಂದ ಕೂಡಲೇ ಭಾರೀ ಫೇಮಸ್ ಆದ್ರೆ, ಇನ್ನು ಕೆಲವರು ನಿಧಾನವಾಗಿ ಗುರುತಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಇದ್ದಹಾಗೆ ಇರುತ್ತಾರೆ. ಅಲ್ಲದೆ ಎತ್ತರದಲ್ಲಿದ್ದವರು ಕ್ಷಣಾರ್ಧದಲ್ಲಿ ಕೆಳಗೆ ಬಿದ್ದಿರುವುದಕ್ಕೂ ಈ ರಂಗ ಸಾಕ್ಷಿಯಾಗಿದೆ. ಇದೆಲ್ಲದರ ನಡುವೆ ಇಲ್ಲಿ ಸುಂದರ ಬದುಕಿನ ಕನಸನ್ನು ಹೊತ್ತು ಬಂದ ಅನೇಕ ನಕ್ಷತ್ರಗಳು ಮಿಂಚಿ ಮರೆಯಾದದ್ದೂ ಉಂಟು. ಅಂತವರಲ್ಲಿ ಕೆಲವರನ್ನು ಇಂದಿಗೂ ನೆನಪಿಟ್ಟರೆ, ಮತ್ತೆ ಕೆಲವರು ಎಂದೋ ಸ್ಮೃತಿಪಟಲದಿಂದ ಮಾಸಿ ಹೋಗಿದ್ದಾರೆ. ಅಂತವರ ಸಾಲಿನಲ್ಲಿ ನಟಿ ದಿವ್ಯಾ ಭಾರತಿ(Divya bharti) ಕೂಡ ಒಬ್ಬರು.

 

ಹೌದು, ಬಾಲಿವುಡ್​ನ(Bollywood) ಮೋಸ್ಟ್​ ಬ್ಯೂಟಿಫುಲ್​ ನಟಿ ಎಂದೇ ಖ್ಯಾತರಾಗಿದ್ದ ಮುದ್ದು ಮೊಗದ ಚೆಲುವೆ, 19ನೇ ವಯಸ್ಸಿಗೆ ಸಿನಿಮಾ ರಂಗ ಪ್ರವೇಶಿಸಿದ ದಿವ್ಯಾ ಭಾರತಿ, ಆರಂಭದಲ್ಲೇ ಹಿಟ್​ ಚಿತ್ರಗಳನ್ನು ನೀಡಿ ಎಲ್ಲರ ಮನದಲ್ಲಿ ಮನೆ ಮಾಡಿದ್ದರು. ಆದರೆ ಆಕೆ ತನ್ನ ಅದೇ ಎಳೆ ವಯಸ್ಸಿನಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ್ದಳು. ದಿವ್ಯಾಳ ಸಾವಿನ ಸುದ್ದಿ ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು. ಸದ್ಯ ನಿನ್ನೆಗೆ ಈಕೆ ಸತ್ತು ಭರ್ತಿ 30 ವರ್ಷ.

ತನ್ನ 19ನೇ ವಯಸ್ಸಿನಲ್ಲಿಯೇ ದಿವ್ಯಾ ನಿಗೂಢವಾಗಿ ಸಾವನ್ನಪ್ಪಿದಾಗ ಇಡೀ ಸಿನಿಮಾ ರಂಗವೇ ಬೆಚ್ಚಿಬಿದ್ದಿತ್ತು. 1992ರಲ್ಲಿ ಖ್ಯಾತ ನಿರ್ಮಾಪಕ ಸಾಜಿದ್‌ ನಾಡಿಯಾದ್‌ವಾಲಾ(Sajid Nadiadwala) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ, ಮದುವೆಯಾದ ಎರಡೇ ವರ್ಷಗಳಲ್ಲಿ ಸಾವನ್ನಪ್ಪಿದ್ದರು. 1993ರ ಏಪ್ರಿಲ್​ 5ರಂದು ನಟಿ ದಿವ್ಯಾ ನಿಗೂಢವಾಗಿಯೇ ಇಹಲೋಕ ತ್ಯಜಿಸಿದರು. ಈ ವೇಳೆ ಏನೂ ಮಾತನಾಡದ ಸಾಜಿದ್‌ ಮೌನ ಅನೇಕ ಅನುಮಾಗಳಿಗೆ ಎಡೆ ಮಾಡಿಕೊಟ್ಟಿತ್ತು. 5ನೇ ಮಹಡಿಯಲ್ಲಿನ ಬಾಲ್ಕಾನಿಯಿಂದ ಆಯಾ ತಪ್ಪಿ ಬಿದ್ದು ದಿವ್ಯಾ ಮೃತಪಟ್ಟಿದ್ದಾಳೆಂದು ಹೇಳುತ್ತಾ, ನಂಬುತ್ತಾ ಬಂದಿದೆಯಾದರೂ ಕೆಲವು ಚಿತ್ರ ತಾರೆಯರ ಬಗೆಹರಿಯದ ಸಾವಿನ ರಹಸ್ಯದಂತೆ ದಿವ್ಯಾ ಭಾರತಿ (Divya Bharati) ಸಾವಿನ ರಹಸ್ಯ ಆಕೆಯೊಂದಿಗೆ ಸುಟ್ಟು ಭಸ್ಮವಾಗಿ ನಿಗೂಡವಾಗಿಯೇ ಉಳಿದಿದೆ.

ಸುದ್ದಿಯ ಪ್ರಕಾರ, ಅಪಘಾತದ ದಿನ, ದಿವ್ಯಾ ಅವರು ತಮ್ಮ ಒಂದು ಚಿತ್ರೀಕರಣವನ್ನು ಮುಗಿಸಿ ಚೆನ್ನೈನಿಂದ ಹಿಂದಿರುಗಿದ್ದರು. ದಿವ್ಯಾ ಮರುದಿನ ಹೈದರಾಬಾದ್ ಶೂಟಿಂಗ್‌ಗೆ ಹೋಗಬೇಕಿತ್ತು. ಆದರೆ ಅವರ ಕಾಲಿನ ಗಾಯದಿಂದಾಗಿ ಶೂಟಿಂಗ್ ಅನ್ನು ಮುಂದೂಡಲಾಯಿತು. ದಿವ್ಯಾ ಸಾಜಿದ್ ನಾಡಿಯಾವಾಲಾ ಅವರನ್ನು ವಿವಾಹವಾಗಿದ್ದರು. ಅಪಘಾತದ ರಾತ್ರಿ ದಿವ್ಯಾ ಜೊತೆ ಸಾಜಿದ್ ಮತ್ತು ಫ್ಯಾಷನ್ ಡಿಸೈನರ್ ನೀತಾ ಲುಲ್ಲಾ ಪಾರ್ಟಿ ಮಾಡಿದ್ದಾರೆ. ದಿವ್ಯಾ ಕುಡಿದು ತನ್ನ ಬಾಲ್ಕನಿಯಲ್ಲಿ ಕುಳಿತಿದ್ದರು ಎನ್ನಲಾಗಿದೆ. ಅಲ್ಲಿ ಗ್ರಿಲ್ (Grill) ಇರಲಿಲ್ಲ, ದಿವ್ಯಾ ಎದ್ದೇಳಲು ಪ್ರಯತ್ನಿಸಿದ ತಕ್ಷಣ ಐದನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ ಪತಿ ಸಾಜಿದ್ ಸುತ್ತ ಅನುಮಾನ ಹುಟ್ಟುಕೊಂಡಿದ್ದವು

ಅಂದಹಾಗೆ 1992 ರಲ್ಲಿ ತೆರೆಕಂಡ ಶಾರುಖ್ ಖಾನ್(Sharuk Khan)ಅಭಿನಯದ ‘ದಿಲ್ ಆಶನಾ ಹೈ’ ಮತ್ತು ‘ದೀವಾನಾ’ (Deewana) ಸಿನಿಮಾಗಳು ಶಾರುಖ್ ಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಈ ಎರಡೂ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದವು. ಅದರಲ್ಲಿ ಶಾರುಖ್ ಗೆ ಮುದ್ದು ಮೊಗದ ದಿವ್ಯಾ ಭಾರತಿ ನಾಯಕ ನಟಿಯಾಗಿ ಜೊತೆಯಾಗಿದ್ದರು. ನಿನ್ನೆಗೆ ಅಂದರೆ ಏಪ್ರಿಲ್ 5ಕ್ಕೆ ದಿವ್ಯಾ ಭಾರತಿ ಸಾವನ್ನಪ್ಪಿ 30 ವರ್ಷಗಳಾಗಿವೆ. ಆಕೆಯ ಜೊತೆ ಎರಡು ಚಿತ್ರಗಳಲ್ಲಿ ನಟಿಸಿದ್ದ ಶಾರುಖ್​ ಖಾನ್​ ಅಂದು ದಿವ್ಯಾ ಸತ್ತ ಸುದ್ದಿಯನ್ನು ಕೇಳಿದಾಗ ತಮಗಾಗಿದ್ದ ಅನುಭವವನ್ನು ಸಂದರ್ಶನವೊಂದರಲ್ಲಿ ಬಹಿರಂಗಗೊಳಿಸಿದ್ದಾರೆ.

ಅಂದು ನಾನು ದೆಹಲಿಯ ಮನೆಯಲ್ಲಿ ಮಲಗಿದ್ದೆ. ಆಗ ‘ದೀವಾನ’ ಚಿತ್ರದ ‘ಐಸಿ ದೀವಾಂಗಿ…’ ಹಾಡು ಕೇಳುತ್ತಿದೆ. ಎಷ್ಟು ಸುಂದರ ಹಾಡುಗಳು ಎಂದು ಅದೇ ಹಾಡನ್ನು ಗುನುಗುತ್ತಿದ್ದೆ. ಅಷ್ಟರಲ್ಲಿಯೇ ದಿವ್ಯಾ ಸಾವಿನ ಸುದ್ದಿ ಬಂತು. ಇದು ಕನಸೋ ಅಥವಾ ನಿಜವಾಗಿಯೂ ಈ ಸುದ್ದಿ ಬಂದಿದೆಯೋ ತಿಳಿಯದೇ ಗಲಿಬಿಲಿಗೊಂಡೆ. ಏನೂ ಅರ್ಥವಾಗಲಿಲ್ಲ. ಅವರ ಜೊತೆ ಇನ್ನಷ್ಟು ಸಿನಿಮಾ ಮಾಡಬೇಕು ಅಂತ ಆಸೆ ಇತ್ತು, 1993ರಲ್ಲಿ ಬಂದ ‘ಕ್ಷತ್ರಿಯ’ ದಿವ್ಯಾ ಅವರ ಕೊನೆಯ ಸಿನಿಮಾ. ಅವರ ಸಾವಿನ ನಂತರ 3 ಚಿತ್ರಗಳು ಬಿಡುಗಡೆಯಾದವು. ಆ ರಾತ್ರಿ ಏನಾಯಿತೋ ಒಂದೂ ಗೊತ್ತಿಲ್ಲ. ಆದರೆ ದಿವ್ಯಾ ಸತ್ತಿದ್ದು ಮಾತ್ರ ನಿಜವಾಗಿತ್ತು’ ಎಂದು ಶಾರುಖ್​ (Shahrukh Khan) ಭಾವುಕರಾದರು.

ಅಲ್ಲದೆ ‘ದಿವ್ಯಾ ಅದ್ಭುತ ನಟಿಯಾಗಿದ್ದರು. ಎಲ್ಲಾ ಪಾತ್ರಗಳಿಗೂ ಜೀವ ತುಂಬುತ್ತಿದ್ದರು. ‘ದೀವಾನಾ’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿ ಸೀ ರಾಕ್ ಹೋಟೆಲ್​ನಿಂದ ಹೊರಡುವಾಗ ದಿವ್ಯಾ ಎದುರಿಗೆ ಬಂದರು. ನಾನು ಹಲೋ ಹೇಳಿದೆ. ನೀವು ಕೇವಲ ಉತ್ತಮ ನಟರಲ್ಲ, ಒಂದು ಅದ್ಭುತ ಕಲಾವಿದ ಎಂದು ಹೇಳಿದ್ದ ಆಕೆ ಬೈ ಬೈ ಹೇಳಿ ಹೋದರು. ಆದರೆ ಆ ಬೈ ಬೈ ಜೀವನಕ್ಕೆ ಹೇಳುತ್ತಿದ್ದ ವಿದಾಯ ಎಂದು ತಿಳಿದಾಗ ಆಘಾತದಿಂದ ಕುಸಿದು ಹೋದೆ’ ಎಂದು ಭಾವುಕರಾಗಿದ್ದಾರೆ.

ಇದನ್ನೂ ಓದಿ: Men’s hands inside underwear while sleeping: ಗಂಡಸರು ಮಲಗುವಾಗ ತಮ್ಮ ಅಂಡರ್‌ವೇರ್‌ ಒಳಗೆ ಕೈ ಹಾಕೋದ್ಯಾಕೆ ಗೊತ್ತಾ? ಈ ಬಗ್ಗೆ ವಿವರಿಸಿದ ಶ್ರೀ ಸೋಹಂ ಹೇಳಿದ್ದೇನು?

Leave A Reply

Your email address will not be published.