Sudeep Private Video: ಸುದೀಪ್ ಖಾಸಗಿ ವೀಡಿಯೋ ಲೀಕ್! ಎರಡೆರಡು ಬೆದರಿಕೆ ಪತ್ರ

Sudeep Private Video: ಕಿಚ್ಚ ಸುದೀಪ್ (Kichcha Sudeep)ಅವರು ಬಿಜೆಪಿ ಪರ ಪ್ರಚಾರ ಮಾಡುವ ಕುರಿತು ಜೋರಾಗಿ ಸುದ್ದಿ ಹಬ್ಬಿದ್ದು ಸದ್ಯ ಈ ವಿಚಾರ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಕಿಚ್ಚ ಅವರ ರಾಜಕೀಯ ನಿಲುವೇನು ಎಂಬ ವಿಚಾರ ಸದ್ಯ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದರ ನಡುವೆ ಕಿಚ್ಚ ಸುದೀಪ್ ಅವರಿಗೆ ಎರಡು ಬೆದರಿಕೆ ಪತ್ರ ಬಂದಿದೆ ಎಂದು ತಿಳಿದು ಬಂದಿದೆ.

 

ಸುದೀಪ್ ಅವರಿಗೆ ತಲುಪಿದ ಪತ್ರದಲ್ಲಿ ಖಾಸಗಿ ವಿಡಿಯೋ ಲೀಕ್ (Sudeep Private Video)ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ ಎನ್ನಲಾಗಿದೆ. ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜುಗೆ ಈ ಪತ್ರ ದೊರೆತಿದೆ. ಈ ಪತ್ರದಲ್ಲಿ ಸುದೀಪ್ ಅವರ ಬಗ್ಗೆ ಕೆಟ್ಟ ಪದಗಳನ್ನ ಬಳಕೆ ಮಾಡಲಾಗಿದ್ದು, ಸುದೀಪ್ ಅವರ ಖಾಸಗಿ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಿಚ್ಚ ಅವರಿಗೆ ಬೆದರಿಕೆ ಹಾಕುವ ರೀತಿಯ ಪತ್ರ ತನಿಖೆ ಪ್ರಾರಂಭಿಸಿದ್ದು, ಪತ್ರ (Letter) ಕಳುಹಿಸಿದ್ದು ಯಾರು ಎಂಬ ಜಾಡು ಅರಸುತ್ತಾ ಶೋಧ ಕಾರ್ಯದಲ್ಲಿ ಪೋಲೀಸರು (Police)ನಿರತರಾಗಿದ್ದಾರೆ.

ಪುಟ್ಟೇನಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 506, ಸೆಕ್ಷನ್ 504 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದು, ಈ ಬೆದರಿಕೆ ಪತ್ರದ ಮೂಲಕ ಕಿಚ್ಚ ಅವರ ವರ್ಚಸ್ಸಿಗೆ ದಕ್ಕೆ ತರುವ ಷಡ್ಯಂತ್ರ ಎಂದು ಮಂಜು ಅವರು ದೂರಿದ್ದು, ಇದರಿಂದ ಸುದೀಪ್ ಅವರಿಗೆ ಮಾನಸಿಕವಾಗಿ ಹಿಂಸೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ, ಈ ಪ್ರಕರಣವನ್ನು ಸಿಸಿಬಿಗೆ ವಹಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.

1 Comment
  1. Rejestracja na Binance US says

    Can you be more specific about the content of your article? After reading it, I still have some doubts. Hope you can help me.

Leave A Reply

Your email address will not be published.