Rashmika-Rakshit Shetty : ರಶ್ಮಿಕಾ ಮಂದಣ್ಣಗೆ ಬರ್ತ್ ಡೇ ವಿಶ್ ಮಾಡಿದ ರಕ್ಷಿತ್ ಶೆಟ್ಟಿ!

Rashmika Mandanna Birthday: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ(Rashmika Mandanna) ಕಿರಿಕ್ ಪಾರ್ಟಿ (Kirik Party)ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿಬಿಟ್ಟಿದೆ. ಇಂದು ನ್ಯಾಷನಲ್‌ ಕ್ರಶ್‌ ನಟಿ ರಶ್ಮಿಕಾ ಮಂದಣ್ಣ (ಏಪ್ರಿಲ್‌ 5) ಅವರ ಜನುಮ ದಿನದ ಸಂಭ್ರಮ. 27ನೇ ವರ್ಷದ ಹುಟ್ಟಹಬ್ಬದ(Rashmika Mandanna birthday) ಖುಷಿಯಲ್ಲಿ ಮುಳುಗಿರುವ ನಟಿಗೆ ಅಭಿಮಾನಿ ಬಳಗದಿಂದ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದೆ. ತನ್ನ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ರೂಪದರ್ಶಿಯಾಗಿದ್ದ ರಶ್ಮಿಕಾ 2017ರಲ್ಲಿ ಪರಂವಾ ಸ್ಟುಡಿಯೋಸ್ ಕಿರಿಕ್‌ ಪಾರ್ಟಿ ಸಿನಿಮಾದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ನೆನಪಿರಬಹುದು.

 

 

2020ರಲ್ಲಿ ಗೂಗಲ್‌ ಇಂಡಿಯಾ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಂಡ ಬೆಡಗಿಗೆ ಸದ್ಯ ಪರಂವಾ ಸ್ಟುಡಿಯೋಸ್ ನಟಿ ರಶ್ಮಿಕಾ ಮಂದಣ್ಣನಿಗೆ ಬಹಳ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. ಪರಂವಃ ಸ್ಟುಡಿಯೋಸ್ ಮೂಲಕ ರಕ್ಷಿತ್ ಶೆಟ್ಟಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಗೆಲುವಿನ ಬಳಿಕ ನಟಿ ರಶ್ಮಿಕಾ ಮತ್ತು ನಟ ರಕ್ಷಿತ್ ನಡುವೆ ಲವ್ವಿ ಡವ್ವಿ ನಡೆದು ಕೊನೆಗೆ ನಿಶ್ಚಿತಾರ್ಥ ಮುರಿದು ಬಿದ್ದ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಲವ್ ಬ್ರೇಕಪ್ ಆದ ಬಳಿಕ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಇದೀಗ ಪರಂವಃ ಸ್ಟುಡಿಯೋಸ್ ರಶ್ಮಿಕಾಗೆ ಬರ್ತ್ ಡೇ ವಿಶ್ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ನಟ ರಕ್ಷಿತ್ ಶೆಟ್ಟಿ ನೇರವಾಗಿ ರಶ್ಮಿಕಾ ಮಂದಣ್ಣಗೆ ಶುಭಾಶಯ ಕೋರದೆ ಇದ್ದರೂ ಪರಂವಃ ಸ್ಟುಡಿಯೋಸ್ (Rashmika – Rakshith Shetty) ಮೂಲಕ ರಶ್ಮಿಕಾ ಜನ್ಮದಿನಕ್ಕೆ ಶುಭಕೋರಿದ್ದಾರೆ.

ರಶ್ಮಿಕಾ ಮಂದಣ್ಣ ಅವರಿಗೆ ಪರಂವಾ ಸ್ಟುಡಿಯೋಸ್ ಟ್ವೀಟರ್‌ನಲ್ಲಿ ಶುಭ ಕೋರಿದ್ದು, “ಚಂದದ ಹಾರೈಕೆ ರಶ್ಮಿಕಾ ಮಂದಣ್ಣಗೆ ಜನ್ಮದಿನದ ಶುಭಾಶಯಗಳು. ನಿಮ್ಮ ವರ್ಷವು ಸಂತೋಷ, ನಗು ಮತ್ತು ಯಶಸ್ಸಿನಿಂದ ಚಿಮುಕಿಸಲ್ಪಡಲಿ” ಎಂದು ಹಾರೈಸಿ ಶುಭ ಕೋರಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಜನ ಕಾಮೆಂಟ್‌ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬೆಳೆದು ಸಾಕಷ್ಟು ಹೆಸರು ಮಾಡಿರುವ ನಟಿ ಕನ್ನಡದ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ ಎಂಬ ಆರೋಪದ ನಡುವೆಯೂ ಪರಂವಾ ಸ್ಟುಡಿಯೋಸ್ ನಟಿಗೆ ಶುಭ ಕೋರಿದ್ದು ವಿಶೇಷ ಗಮನ ಸೆಳೆದಿದೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬಣ್ಣ ಹಚ್ಚಿದ ರಶ್ಮಿಕಾ ಕರ್ಣ(ರಕ್ಷಿತ್ ಶೆಟ್ಟಿ) ಅವರ ಕಾಲೇಜು ಪ್ರೇಯಸಿ ಸಾನ್ವಿ ಜೋಸೆಫ್ ಪಾತ್ರದಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. 2016 ರ ಅತ್ಯುತ್ತಮ ನಟಿ (ಚೊಚ್ಚಲ) ಯಾಗಿ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿ (SIIMA) ಪ್ರಶಸ್ತಿಯನ್ನು ಕೂಡ ಬಾಚಿಕೊಂಡಿದ್ದರು.

ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿಯ ಬಳಿಕ ದೊಡ್ಡ ನೇಮ್ ಫೇಮ್ ಗಳಿಸಿಕೊಂಡರು. ನಟಿ ರಶ್ಮಿಕಾ ತೆಲುಗು(Telugu) ತಮಿಳು, ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ತನ್ನ ಛಾಪು ಮೂಡಿಸುತ್ತಿರುವುದು ಗೊತ್ತಿರುವ ವಿಚಾರವೇ!! ಅಲ್ಲು ಅರ್ಜುನ್( Allu Arjun) ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಚಿತ್ರ ಎಲ್ಲೆಡೆ ಟ್ರೆಂಡ್ ಸೃಷ್ಟಿ ಮಾಡಿದೆ.

ಪರಂವಃ ಸ್ಟುಡಿಯೋಸ್ ತಮ್ಮ ಇನ್ಸ್ಟಾಗ್ರಾಮ್ ಪೇಜ್​ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದಿದ್ದು, ರಶ್ಮಿಕಾ ಫೋಟೋ ಕೂಡ್ ಶೇರ್ ಮಾಡಲಾಗಿದೆ. ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್, ರಕ್ಷಿತ್ ಮಾಜಿ ಗೆಳತಿಗೆ ವಿಶ್ ಮಾಡಿದ್ದನ್ನು ಕಂಡ ಅಭಿಮಾನಿಗಳು ಸಿಂಪಲ್ ಸ್ಟಾರ್​ಗೆ ಕಿರಿಕ್ ಬೆಡಗಿಯ ನೆನಪಾಗ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸಿಂಪಲ್ ಸ್ಟಾರ್ ಹೊಸ ವರಸೆ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ನಟಿ ರಶ್ಮಿಕಾ ಅವರು ಬಾಲಿವುಡ್‌, ಟಾಲಿವುಡ್‌ ವಿವಿಧ ಸಿನಿರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಸದ್ಯ ಸಮಂತಾ ಕೈ ಬಿಟ್ಟ ಸಿನಿಮಾದಲ್ಲಿ ನಟಿಸಲು ಅಣಿಯಾಗಿದ್ದಾರೆ ಎನ್ನಲಾಗಿದೆ.

 

1 Comment
  1. binance says

    Your article helped me a lot, is there any more related content? Thanks!

Leave A Reply

Your email address will not be published.