Matru Vandana Yojana : ಕೇಂದ್ರ ಸರ್ಕಾರದಿಂದ ‘ಗರ್ಭಿಣಿ’ಯರಿಗೆ ಸಿಹಿಸುದ್ದಿ!! ಈ ಯೋಜನೆಯ ಮೂಲಕ ಪಡೆಯಿರಿ ತಿಂಗಳಿಗೆ ₹6,000
Matru Vandana Yojana : ಕೇಂದ್ರ ಸರ್ಕಾರದಿಂದ (central government) ‘ಗರ್ಭಿಣಿ’ಯರಿಗೆ ಭರ್ಜರಿ ಗುಡ್ ನ್ಯೂಸ್ (good news) ಸಿಕ್ಕಿದೆ. ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಮೂಲಕ ಜನಸಾಮಾನ್ಯರಿಗೆ ಆರ್ಥಿಕ ನೆರವು ನೀಡುತ್ತಿದೆ. ಇದೀಗ ‘ಗರ್ಭಿಣಿ’ಯರಿಗೆ ಆರ್ಥಿಕ ನೆರವು ನೀಡಲಿದೆ.
ಕೇಂದ್ರ ಸರ್ಕಾರವು ಮಾತೃತ್ವ ವಂದನಾ ಯೋಜನೆಯನ್ನು (Pradhan Mantri Matru Vandana Yojana) (PMMVY) ಜಾರಿಗೆ ತಂದಿದ್ದು, ಇದು 2017ರಿಂದ ಜಾರಿಯಲ್ಲಿದೆ. ಸದ್ಯ ಈ ಯೋಜನೆಯಡಿ ಗರ್ಭಿಣಿಯರಿಗೆ 6,000 ರೂಪಾಯಿ ಲಭಿಸಲಿದೆ.
ತಾಯಿ ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು (Matru Vandana Yojana) ಜಾರಿಗೆ ತಂದಿದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಗರ್ಭಿಣಿಯರಿಗೆ 19 ವರ್ಷ ವಯಸ್ಸಾಗಿರಬೇಕು. ಈ ಪ್ರೋಗ್ರಾಂನಲ್ಲಿ ನೀವು ಆಫ್ ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಡಿ, ಸರ್ಕಾರವು 6000 ರೂ.ಗಳನ್ನು 3 ಕಂತುಗಳಲ್ಲಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಈ ಯೋಜನೆಯನ್ನು ಜನವರಿ 1, 2017ರಂದು ಮೋದಿ ಸರ್ಕಾರ ಜಾರಿಗೆ ತಂದಿದ್ದು, ಈ ಯೋಜನೆಯಡಿ ಗರ್ಭಿಣಿಯರಿಗೆ ಹಂತ ಹಂತವಾಗಿ ಖಾತೆಗೆ ಹಣ ಸೇರುತ್ತದೆ. ಮೊದಲು 1000 ರೂ., ಎರಡನೇ ಹಂತದಲ್ಲಿ 2000 ರೂ., ಮೂರನೇ ಹಂತದಲ್ಲಿ 3000 ರೂ. ಲಭ್ಯವಾಗುತ್ತದೆ.
ಯೋಜನೆಯ ಫಲಾನುಭವಿಗಳು ಯೋಜನೆಯಲ್ಲಿ ಯಾವುದೇ ಸಮಸ್ಯೆ, ಗೊಂದಲಗಳು ಉಂಟಾದರೆ, ಅಧಿಕೃತ ಸಹಾಯವಾಣಿ ಸಂಖ್ಯೆ 7998799804 ಸಂಪರ್ಕಿಸಬಹುದು ಎಂದು ಹೇಳಲಾಗಿದೆ.