Twin Babies: ಅವಳಿ ಮಕ್ಕಳು ಜನಿಸಲು ಕಾರಣವೇನು ಗೊತ್ತಾ?

Twin Babies : ಮಕ್ಕಳು (Children)ಎಂದರೇ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ!ಮಕ್ಕಳಿರಲವ್ವ ಮನೆತುಂಬ ಎಂದು ಹೆಚ್ಚಿನ ಮಂದಿ ಬಯಸುತ್ತಾರೆ. ಮಕ್ಕಳ ಲಾಲನೆ ಪಾಲನೆಯಲ್ಲಿ ಸಿಗುವ ಖುಶಿ ಬಹುಶಃ ಪೋಷಕರಿಗೆ ಮತ್ತಾವುದರಲ್ಲಿಯೂ ಸಿಗಲಾರದು. ಪ್ರತಿ ಹೆಣ್ಣಿಗೂ ತಾಯ್ತನ ಎಂಬುದು ನವೀನ ಅನುಭವ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ (Women)ಬದುಕನ್ನೇ ಸಾರ್ಥಕಗೊಳಿಸುವ ಮಾತೃ ಶಕ್ತಿ ಅಡಕವಾಗಿರುತ್ತದೆ. ಇದರ ನಡುವೆ ಅವಳಿ ಮಕ್ಕಳಾಗಬೇಕು (Twin Babies)ಎಂದು ಕೂಡ ಬಯಸುವ ಮಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಅವಳಿ ಮಕ್ಕಳು ಏಕೆ ಜನಿಸುತ್ತವೆ? ಎಂಬ ಕುತೂಹಲ ಸಹಜವಾಗಿ ಹೆಚ್ಚಿನ ಮಂದಿಗೆ ಕಾಡುತ್ತಿರುತ್ತದೆ. ಈ ವಿಚಾರದ ಕುರಿತಾಗಿ ವಿಜ್ಞಾನಿಗಳು ಹಲವು ವರ್ಷಗಳಿಂದ ಸಂಶೋಧನೆ ಮಾಡುತ್ತಿದ್ದಾರೆ. ಆದರೂ ಇದಕ್ಕೆ ನಿಖರ ಉತ್ತರ ಲಭ್ಯವಾಗಿಲ್ಲ. ಕೆಲವು ಅವಳಿ ಮಕ್ಕಳು ಒಂದೇ ರೀತಿಯಲ್ಲಿ ಜನಿಸಿದರೆ ಮತ್ತೆ ಕೆಲವು ಅವಳಿಗಳು ವಿಭಿನ್ನ ಬಣ್ಣ, ದೇಹ ಚಹರೆ ವಿಭಿನ್ನವಾಗಿರುತ್ತದೆ.

ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 1.6 ಮಿಲಿಯನ್ ಅವಳಿ ಮಕ್ಕಳು(Twin Babies)ಜನಿಸುತ್ತವೆ. ಇದಕ್ಕೆ ಪ್ರಮುಖ ಕಾರಣ ಏನು ಎಂದು ಗಮನಿಸಿದರೆ, ಇನ್ ವಿಟ್ರೊ ಫಲೀಕರಣ (ಐವಿಎಫ್), ಅಂಡಾಶಯದ ಸಿಮ್ಯುಲೇಶನ್ ಮತ್ತು ಕೃತಕ ಗರ್ಭಧಾರಣೆ (Artificial insemination)ಸೇರಿದಂತೆ ಎಂಎಆರ್ ಹೆಚ್ಚಳದಿಂದ ಉಂಟಾಗುತ್ತದೆ.

ಮುಟ್ಟು ಸಮೀಪಿಸುತ್ತಿರುವ (Menstrual period)ಮಹಿಳೆಯರಲ್ಲಿ ಹಾರ್ಮೋನಿನ ಬದಲಾವಣೆ ಆಗುತ್ತದೆ. ಈ ಸಂದರ್ಭದಲ್ಲಿ ಅವಳಿ ಮಕ್ಕಳಾಗುವ ಸಾಧ್ಯತೆ ಯಿದೆ. ಅಧ್ಯಯನದ ಸಂದರ್ಭ ವಯಸ್ಸಾದಂತೆ ಅವಳಿ ಮಕ್ಕಳಾಗುವ ಸಂಭವ ಹೆಚ್ಚಿದೆ. ಮುಟ್ಟು ಸಮೀಪವಿರುವ ಮಹಿಳೆಯರು ಹಾರ್ಮೋನುಗಳ ಬದಲಾವಣೆಯಾಗುವ ಹಿನ್ನೆಲೆ ಅಂಡೋತ್ಪತ್ತಿ ಸಮಯದಲ್ಲಿ ತಮ್ಮ ದೇಹವನ್ನು ಒಂದಕ್ಕಿಂತ ಹೆಚ್ಚು ಮೊಟ್ಟೆಗಳನ್ನಿಡಲು ಪ್ರೋತ್ಸಾಹಿಸುತ್ತದೆ. ಈ ಅಧ್ಯಯನದ IVF ಮತ್ತು ಕೃತಕ ಗರ್ಭಧಾರಣೆಯ ಹೆಚ್ಚಳದಿಂದಾಗಿ, ಪ್ರತಿ 42 ಮಕ್ಕಳಲ್ಲಿ ಒಬ್ಬರು ಈಗ ಅವಳಿ ಮಕ್ಕಳು ಜನಿಸಿವೆ ಎಂದು ವರದಿಯಾಗಿದೆ. ಅಧ್ಯಯನದ ಅನುಸಾರ, ಹಿಂದೆಂದಿಗಿಂತಲೂ ಹೆಚ್ಚು ಅವಳಿ ಮಕ್ಕಳು ಜನಿಸುತ್ತಿದ್ದಾರೆ ಎನ್ನಲಾಗಿದೆ. ಈಗ ಏಷ್ಯಾ ಮತ್ತು ಆಫ್ರಿಕಾದಲ್ಲಿ ಪ್ರಪಂಚದ ಎಲ್ಲಾ ಅವಳಿ ಮಕ್ಕಳು ಸುಮಾರು ಶೇ.80 ರಷ್ಟು ಸಂಭವಿಸುತ್ತಿದೆ ಎಂದು ಸಂಶೋಧಕರು ಅನ್ವೇಷಣೆ ಮಾಡಿದ್ದಾರೆ. ಇಂಗ್ಲೆಂಡ್ ನಲ್ಲಿ 1,000 ಹೆರಿಗೆಯಲ್ಲಿ 15 ರಿಂದ 17 ಅವಳಿ ಮಕ್ಕಳು ಜನಿಸುತ್ತಾರೆ ಎನ್ನಲಾಗಿದೆ.

Leave A Reply

Your email address will not be published.