Best CNG Car: ಉತ್ತಮ ಮೈಲೇಜ್ ನೀಡುವ 7 ಸೀಟರ್ ಆಯ್ಕೆಯೊಂದಿಗೆ ಲಭ್ಯವಿರುವ ಬೆಸ್ಟ್ CNG ಕಾರುಗಳಿವು!!

Best Budget CNG Car : ಸದ್ಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಕಾರುಗಳು (car) ಉತ್ತಮ ವಿನ್ಯಾಸ, ಫೀಚರ್ ನೊಂದಿಗೆ ಪೈಪೋಟಿಗೆ ನಿಂತಿವೆ. ಅಂತೆಯೇ ಕಂಪನಿಗಳು ನೂತನ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದ್ಭುತ ಮೈಲೇಜ್‌ ನೀಡುವ ಅತ್ಯುತ್ತಮ ಕಾರುಗಳು ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅದರಲ್ಲೂ ಸಿಎನ್‌ಜಿ ಕಾರುಗಳಿಗೆ (Best Budget CNG Car) ಭಾರತದಲ್ಲಿ ಉತ್ತಮ ಬೇಡಿಕೆಯಿದೆ. ಸಿಎನ್‌ಜಿ ಕಾರುಗಳಲ್ಲಿ ಹೆಚ್ಚಿನವು ಕೇವಲ 5 ಸೀಟರ್‌ಗಳಾಗಿವೆ. ಸದ್ಯ 7 ಸೀಟರ್ ಆಯ್ಕೆಯೊಂದಿಗೆ ಅತ್ಯುತ್ತಮ CNG ಕಾರುಗಳ (Budget Car) ಬಗ್ಗೆ ಮಾಹಿತಿ ಇಲ್ಲಿದೆ.

 

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga): ಮಾರುತಿ ಸುಜುಕಿ ಎರ್ಟಿಗಾ ದೇಶದಲ್ಲಿ ಹೆಚ್ಚು ಮಾರಾಟವಾಗುವ 7 ಆಸನಗಳ ಕಾರುಗಳಲ್ಲಿ ಒಂದಾಗಿದೆ. ಇದು CNG ಆಯ್ಕೆಯೊಂದಿಗೆ ಬರುತ್ತದೆ 5-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಟಾರ್ಕ್ ಪರಿವರ್ತಕ ಗೇರ್‌ಬಾಕ್ಸ್‌ನೊಂದಿಗೆ ಸಂಯೋಜಿತವಾಗಿರುವ ಈ ಕಾರ್ 88 PS ಪವರ್ ಮತ್ತು 121.5 Nm ಟಾರ್ಕ್ ಅನ್ನು ಉತ್ಪಾದಿಸುವ ಸಿ‌ಎನ್‌ಜಿ ಕಿಟ್ ಅನ್ನು ಹೊಂದಿದೆ.

ಮಾರುತಿ ಎರ್ಟಿಗಾ ಮೈಲೇಜ್ ಬಗ್ಗೆ ಗಮನ ಹರಿಸಿದರೆ, ಮ್ಯಾನುಯಲ್ ಟ್ರಾನ್ಸ್‌ಮಿಷನ್‌ಗೆ 20.5 ಕಿಮೀ/ಲೀ ಆಗಿದ್ದು, ಸ್ವಯಂಚಾಲಿತ ಪ್ರಸರಣಕ್ಕೆ 20.3 ಕಿಮೀ/ಲೀ ಹಾಗೆಯೇ ಸಿಎನ್‌ಜಿಗೆ 26.1 ಕಿಮೀ/ಕೆಜಿ. ಆಗಿದೆ. ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಮಾರುತಿ ಎರ್ಟಿಗಾ 103 PS ಮತ್ತು 137 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಮಾರುತಿ ಸುಜುಕಿ ಎರ್ಟಿಗಾ(VXI ರೂಪಾಂತರ) ಸಿಎನ್‌ಜಿ ಬೆಲೆಯು ಭಾರತೀಯ ಮಾರುಕಟ್ಟೆಯಲ್ಲಿ 10.44 ಲಕ್ಷ ರೂ.ದಿಂದ ಪ್ರಾರಂಭವಾಗುತ್ತದೆ. ZXI ರೂಪಾಂತರದ ಕಾರಿನ ಬೆಲೆ 11.54 ಲಕ್ಷ ರೂ. ಇದೆ.

ಮಾರುತಿ ಸುಜುಕಿ Xl6 (Maruti Suzuki XL6): ಪಟ್ಟಿಯಲ್ಲಿರುವ 2ನೇ ಕಾರು ಕೂಡ ಮಾರುತಿಯದ್ದಾಗಿದೆ. ಇದು ಕಂಪನಿಯ ಪ್ರೀಮಿಯಂ 7 ಸೀಟರ್ ಕಾರು ಮಾರುತಿ ಸುಜುಕಿ XL6 ಆಗಿದೆ. ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದ ಜೊತೆಗೆ ಬರುವ ಮಾರುತಿ ಸುಜುಕಿ (Maruti Suzuki XL6) 1.5-ಲೀಟರ್ ಪೆಟ್ರೋಲ್ ಎಂಜಿನ್ (103 PS/137 Nm) ನಿಂದ ಚಾಲಿತವಾಗಿದೆ.

ಮಾರುತಿ ಸುಜುಕಿ XL6 ಮೈಲೇಜ್ ಬಗ್ಗೆ ಗಮನ ಹರಿಸಿದರೆ, ಮ್ಯಾನುವಲ್‌ಗೆ 20.97 kmpl ಮೈಲೇಜ್ ಹೊಂದಿದ್ದು, ಸ್ವಯಂಚಾಲಿತವಾಗಿ 20.27 kmpl. ಆಗಿದೆ. ಇದು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದ್ದು, ಮಾರುತಿ XL6 CNG ಬೆಲೆ 12.24 ಲಕ್ಷ ರೂ. (ಎಕ್ಸ್ ಶೋ ರೂಂ, ದೆಹಲಿ) ಇದೆ.

 

ಇದನ್ನೂ ಓದಿ : Asteroid 2023 FZ3: ಏಪ್ರಿಲ್ 6ರಂದು ಧರೆಗೆ ಅಪ್ಪಳಿಸಲಿದೆ 150 ಅಡಿಯ ಬೃಹತ್ ಕ್ಷುದ್ರಗ್ರಹ: ನಾಸಾ ಎಚ್ಚರಿಕೆ! 

Leave A Reply

Your email address will not be published.