52 Years old bill : 70ರ ದಶಕದಲ್ಲಿ 1 ಮಸಾಲೆ ದೋಸೆ ಬೆಲೆ ಎಷ್ಟಿತ್ತು? 52 ವರ್ಷಗಳ ಈ ಹಳೆಯ ಬಿಲ್ ಹೇಳೋದೇನು?

52 Years old bill : ಇಂದಿನ ದಿನಗಳಲ್ಲಿ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲೂ ಆಹಾರ ಪದಾರ್ಥಗಳ ಬೆಲೆಯಂತೂ ಕೇಳೋದೆ ಬೇಡ. ಹೊರಗಡೆ ಹೋಗಿ ಏನಾದರೂ ತಿನ್ನೋಣ ಅಂದುಕೊಂಡರೆ ಅದರ ರೇಟ್ ಕೇಳಿಯೇ ಹೊಟ್ಟೆ ತುಂಬಿಬಿಡುತ್ತದೆ. ಮೊದಲೆಲ್ಲ ಒಂದು ರೂಪಾಯಿಗೆ ಸಾಕಷ್ಟು ತಿಂಡಿ ತಿನಿಸು ಕೊಳ್ಳಬಹುದಿತ್ತು. ಆದರೆ ಈಗಿನ ಕಾಲದಲ್ಲಿ ಒಂದು ರೂಪಾಯಿ ಒಂದು ಚೊಕೊಲೇಟ್ ಕೂಡ ಬರೋದಿಲ್ಲ. ಆದರೆ ಈ ಒಂದು ರೂಪಾಯಿಗೆ ಮಸಾಲೆ ದೋಸೆ(Masala Dosa) ಸಿಕ್ತಿತ್ತು ಅಂದ್ರೆ ನೀವು ನಂಬ್ತೀರಾ?

ಮಸಾಲೆ ದೋಸೆ ಅಂದ್ರಂತೂ ಹಲವರಿಗೆ ಪಂಚಪ್ರಾಣ. ಬೆಳ್ಳಂಬೆಳಗ್ಗೆಯೋ ಅಥವಾ ಸಂಜೆ ಟೈಮಲ್ಲೋ ಬಿಡುವು ಮಾಡಿಕೊಂಡು ಹೋಟೆಲ್ ಹೋಗಿ ಬಿಸಿ ಬಿಸಿಯಾದ ಗರಿ ಗರಿಯಾದ ಮಸಾಲೆ ದೋಸೆ ಆರ್ಡರ್ ಒಂದೊಂದ ತುಂಡು ಮುರಿದು ಬಾಯಿಗೆ ಇರಿಸಿದರೆ ಏನೋ ಒಂದು ಆನಂದ. ಅಂದಹಾಗೆ ಈ ಮಸಾಲೆ ದೋಸೆ ಕೇವಲ ಒಂದು ರೂಪಾಯಿಗಳಿಗೆ ಸಿಗುತ್ತಿತ್ತು ಗೊತ್ತಾ? ಯಾವುದಾ ಹೋಟೆಲ್? ಎಲ್ಲಿದೆ, ನಾವೂ ಹೋಗ್ತೀವಿ ಅಂತೆಲ್ಲಾ ಕೇಳ ಬೇಡಿ ಮತ್ತೆ. ಯಾಕಂದ್ರೆ ಅದು ಸುಮಾರು 70ರ ದಶದಲ್ಲಿ. ಅಂದ್ರೆ 1971ರ ಸಮಯದಲ್ಲಿ ಕೇವಲ ಒಂದು ರೂಪಾಯಿಗೆ ಗರಿ ಗರಿ ಮಸಾಲೆ ನಮ್ಮದಾಗುತ್ತಿತ್ತು.

ಹೌದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ 1971ರ ಅಂದರೆ ಸುಮಾರು 52 (52 Years old bill) ವರ್ಷದ ಹಳೆಯ ಮಸಾಲೆ ದೋಸೆಯ ಬಿಲ್ ಒಂದು ಭಾರೀ ಸದ್ಧುಮಾಡಿತ್ತಿದೆ. ಮೋತಿ ಮಹಲ್ ಎಂಬ ರೆಸ್ಟೋರೆಂಟಿನಲ್ಲಿ ಆ ಸಮಯದಲ್ಲಿ ಕೇವಲ ಒಂದು ರೂಪಾಯಿಗೆ ಮಸಾಲೆ ದೋಸೆ ಸಿಕ್ತಿತ್ತು ಅಂತ ಈ ವೈರಲ್ ಬಿಲ್ ಹೇಳುತ್ತದೆ.

ಅಂದಹಾಗೆ ಕೇವಲ ಮಸಾಲೆ ದೋಸೆಯ ದರವನ್ನು ಮಾತ್ರ ಇದು ಹೇಳೋದಲ್ಲ, ಜೊತೆಗೆ ಕಾಫಿಯ ಬಿಲ್ ಬೆಲೆಯನ್ನು ಕೂಡ ಅದರಲ್ಲಿ ನಮೂದಿಸಲಾಗಿದೆ. ಬಿಲ್ ನಲ್ಲಿ ಮಸಾಲೆ ದೋಸೆಯ ಬೆಲೆ 1 ರೂಪಾಯಿ ಮತ್ತು ಒಂದು ಕಪ್ ಕಾಫಿಯ ಬೆಲೆ 1 ರೂಪಾಯಿ ಎಂದು ಬರೆದಿದೆ. ಇವೆರಡರ ಜೊತೆಗೆ 16 ಪೈಸೆ ಸೇವಾ ತೆರಿಗೆಯನ್ನು ವಿಧಿಸಿ, ಸಂಪೂರ್ಣ ಬೆಲೆಯಾಗಿ 2 ರೂಪಾಯಿ 16 ಪೈಸೆ ಎಂದು ದಾಖಲಿಸಲಾಗಿದೆ.

ಇಂದು ಯಾವುದೇ ಹೋಟೆಲ್ ಗೆ ಹೋದರೂ 50 ರಿಂದ 70 ಅಥವಾ 100ರೂಪಾಯಿಗಿಂತ ಕಡಿಮೆಗೆ ಸಿಗದ ಮಸಾಲೆ ದೋಸೆ ಅಂದು ಕೇವಲ 1ರೂಪಾಯಿಗೆ ಸಿಗ್ತಿತ್ತು ಅಂದ್ರೆ ನಿಜಕ್ಕೂ ಅಚ್ಚರಿ ಅಲ್ವಾ? ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಕಮೆಂಟ್ ಮಾಡಿ ತಿಳಿಸಿ ಸ್ನೇಹಿತರೆ

 

ಇದನ್ನೂ ಓದಿ : Twin Babies: ಅವಳಿ ಮಕ್ಕಳು ಜನಿಸಲು ಕಾರಣವೇನು ಗೊತ್ತಾ? 

Leave A Reply

Your email address will not be published.