Asteroid 2023 FZ3: ಏಪ್ರಿಲ್ 6ರಂದು ಧರೆಗೆ ಅಪ್ಪಳಿಸಲಿದೆ 150 ಅಡಿಯ ಬೃಹತ್ ಕ್ಷುದ್ರಗ್ರಹ: ನಾಸಾ ಎಚ್ಚರಿಕೆ!
Asteroid 2023 FZ3 : ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಿ ಆವಿಷ್ಕಾರದ (Research And Invention) ಪ್ರತಿಫಲವಾಗಿ ಅನೇಕ ಆವಿಷ್ಕಾರಗಳು ಆಗಿರುವುದು ಗೊತ್ತೇ ಇದೆ. ಅನೇಕ ಅನ್ವೇಷಣೆಗಾಗಿ ವಿಜ್ಞಾನಿಗಳು(Scientist) ವೈಜ್ಞಾನಿಕ ತಳಹದಿಯಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಇದೀಗ, ಏಪ್ರಿಲ್ 6ರಂದು ಬೃಹತ್ ಕ್ಷುದ್ರಗ್ರಹ (Asteroid 2023 FZ3)ಭೂಮಿಗೆ ಅಪ್ಪಳಿಸುವ ಕುರಿತಂತೆ ನಾಸಾ(NASA) ಎಚ್ಚರಿಕೆ ನೀಡಿದೆ.
ಭೂಮಿಯನ್ನು ಸಮೀಪಿಸುವ ಕ್ಷುದ್ರಗ್ರಹಗಳು (Asteroid) ಇತ್ತೀಚೆಗೆ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಕ್ಷುದ್ರಗ್ರಹಗಳು ಘರ್ಷಣೆಯಾದ ಸಂದರ್ಭದಲ್ಲಿ ಮಾನವ ಕುಲಕ್ಕೆ ಭಾರೀ ದೊಡ್ಡ ಮಟ್ಟದ ವಿಪತ್ತು ಉಂಟು ಮಾಡುವ ಸಾಧ್ಯತೆಗಳಿವೆ. ಕ್ಷುದ್ರಗ್ರಹಗಳು ಅದೇ ರೀತಿ ಧೂಮಕೇತುಗಳು (Comet)ಭೂಮಿಗೆ(Earth) ಅಪ್ಪಳಿಸಲಿದೆ ಎಂಬ ವಿಚಾರ ತಿಳಿದ ಬಳಿಕ ತಜ್ಞರು, ಬಾಹ್ಯಾಕಾಶ ಸಂಸ್ಥೆಗಳು (Space Agency) ಈ ಬಗ್ಗೆ ಗಮನ ಹರಿಸುತ್ತಿವೆ.
ನಮ್ಮ ಸೌರವ್ಯೂಹವು ಸುಮಾರು 4.6 ಶತಕೋಟಿ ವರ್ಷಗಳ ಹಿಂದೆ ಅನಿಲ ಮತ್ತು ಧೂಳಿನ ದೊಡ್ಡ ಮೋಡವು ಕುಸಿದಾಗ ನಿರ್ಮಾಣವಾಗಿದ್ದು, ಇದು ಸಂಭವಿಸಿದಾಗ, ಹೆಚ್ಚಿನ ವಸ್ತುವು ಮೋಡದ ಮಧ್ಯಭಾಗಕ್ಕೆ ಬಿದ್ದು ಸೂರ್ಯನ ಸೃಷ್ಟಿಗೆ ಕಾರಣವಾಯಿತು. ಮೋಡದಲ್ಲಿ ಘನೀಕರಿಸುವ ಕೆಲವು ಧೂಳು ಗ್ರಹಗಳಾಗಿ ಬದಲಾದವು. ನಮ್ಮ ಸೌರವ್ಯೂಹದ ರಚನೆಯಿಂದ ಕ್ಷುದ್ರಗ್ರಹಗಳು ಉಳಿದುಕೊಂಡಿರುವ ಬಗ್ಗೆ ನಾಸಾ ಮಾಹಿತಿ ನೀಡಿದೆ ಎನ್ನಲಾಗಿದೆ. ಇತ್ತೀಚೆಗೆ, ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್‌ನ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (National Aeronautics and Space Administration’s Jet Propulsion Laboratory) ಭೂಮಿಯನ್ನು ಅಪ್ಪಳಿಸಲಿರುವ ಕ್ಷುದ್ರ ಗ್ರಹಗಳ ಕುರಿತಂತೆ ಮಾಹಿತಿ ನೀಡಿದೆ.
ನಾಸಾ ತಿಳಿಸಿರುವಂತೆ ಒಟ್ಟು ಐದು ಕ್ಷುದ್ರ ಗ್ರಹಗಳು ಭೂಮಿಗೆ ಅಪ್ಪಳಿಸಲಿದ್ದು, ಅವುಗಳಲ್ಲಿ ಎರಡು ಕ್ಷುದ್ರಗ್ರಹ ಈಗಾಗಲೇ ಭೂಮಿಯ ಸನಿಹ ತಲುಪಿದೆ ಎನ್ನಲಾಗಿದೆ.ನಾಸಾದ ಕ್ಷುದ್ರಗ್ರಹ ವಾಚ್ ಡ್ಯಾಶ್‌ಬೋರ್ಡ್ ಸಾಮಾನ್ಯವಾಗಿ ಕ್ಷುದ್ರಗ್ರಹ ಹಾಗೂ ಧೂಮಕೇತುಗಳ ಮೇಲೆ ವಿಶೇಷ ಕಣ್ಗಾವಲಾಗಿ ಇರುತ್ತದೆ. ಡ್ಯಾಶ್‌ಬೋರ್ಡ್ ಭೂಮಿಗೆ ಸಮೀಪದಲ್ಲಿರುವ ಯಾವುದೇ ಕ್ಷುದ್ರಗ್ರಹ ಹಾಗೂ ಧೂಮಕೇತುವಿನ ನಿಖರವಾದ ದಿನಾಂಕ, ವ್ಯಾಸ, ನಿಖರ ಗಾತ್ರ ಹಾಗೂ ಭೂಮಿಯಿಂದ ಎಷ್ಟು ಅಂತರದಲ್ಲಿದೆ ಎಂಬ ಮಾಹಿತಿಯನ್ನು ನೀಡುತ್ತದೆ. ಹೀಗಾಗಿ, ಎರಡು ಕ್ಷುದ್ರಗ್ರಹಗಳು ಭೂಮಿಗೆ ಸನಿಹದಲ್ಲಿದೆ ಎಂದು ತಿಳಿದುಬಂದಿದೆ.
ಎಲ್ಲಾ ಗಾತ್ರದ ಸುಮಾರು 30,000 ಕ್ಷುದ್ರಗ್ರಹಗಳನ್ನು ಹಾಗೂ ಅವುಗಳ ಪೈಕಿ ಒಂದು ಕಿ.ಮೀ ಗಿಂತಲೂ ಹೆಚ್ಚು ಗಾತ್ರವುಳ್ಳ 850 ಕ್ಷುದ್ರಗ್ರಹಗಳು ಭೂಮಿಯ ಸನಿಹ ಇರುವುದನ್ನು ಪಟ್ಟಿ ಮಾಡಿದೆ. ಅವುಗಳಿಗೆ “ಭೂಮಿಯ ಸಮೀಪ ವಸ್ತುಗಳು” (NEOs) ಎಂಬ ಲೇಬಲ್ ಅನ್ನು ನೀಡಲಾಗಿದ್ದು, ಇವುಗಳಿಂದ ಮುಂದಿನ 100 ವರ್ಷಗಳವರೆಗೆ ಭೂಮಿಗೆ ಯಾವುದೇ ಅಪಾಯ ಸಂಭವಿಸದು.
ಯಾವೆಲ್ಲಾ ಕ್ಷುದ್ರಗ್ರಹ ಭೂಮಿಗೆ ಸಮೀಪವಾಗಲಿದೆ ಎಂಬ ಮಾಹಿತಿ ಇಲ್ಲಿದೆ.
ಕ್ಷುದ್ರಗ್ರಹ 2023 FU6: 45 ಅಡಿಯ ಸಣ್ಣ ಕ್ಷುದ್ರಗ್ರಹವು ಏಪ್ರಿಲ್ 3 ರಂದು 1,870,000 ಕಿಮೀ ಅಂತರದಿಂದ ಭೂಮಿಯ ಹತ್ತಿರಕ್ಕೆ ತಲುಪಿದೆ.
ಕ್ಷುದ್ರಗ್ರಹ 2023 FS11: 82-ಅಡಿ ಏರೋಪ್ಲೇನ್ ಗಾತ್ರದ ಕ್ಷುದ್ರಗ್ರಹವು ಏಪ್ರಿಲ್ 3 ರಂದು 6,610,000 ಕಿಮೀ ಅಂತರದಿಂದ ಭೂಮಿಯ ಸಮೀಪ ಬಂದಿದೆ.
ಕ್ಷುದ್ರಗ್ರಹ 2023 FZ3: 150 ಅಡಿ ಅಗಲದ ಬಂಡೆಯು ಪ್ರತಿ ಗಂಟೆಗೆ 67656 ಕಿಮೀ ವೇಗದಲ್ಲಿ ಭೂಮಿಗೆ 4,190,000 ಕಿಮೀ ದೂರದಲ್ಲಿ ಭೂಮಿಯ ಸಮೀಪಕ್ಕೆ ಬರಲಿದೆ. ಆದರೂ, ಕ್ಷುದ್ರಗ್ರಹವು ಭೂಮಿಗೆ ಅಪಾಯಕಾರಿಯಲ್ಲ ಎಂದು ನಾಸಾ ತಿಳಿಸಿದ್ದು, ಮುಂಬರುವ ಕ್ಷುದ್ರಗ್ರಹಗಳ ಪೈಕಿ ಅತಿದೊಡ್ಡ ಕ್ಷುದ್ರಗ್ರಹವು(Asteroid 2023 FZ3)ಏಪ್ರಿಲ್ 6 ರಂದು ಭೂಮಿಯ ಮೂಲಕ ಹಾದುಹೋಗಲಿದೆ ಎಂದು ತಿಳಿದುಬಂದಿದೆ.
ಕ್ಷುದ್ರಗ್ರಹ 2023 FA7: ವಿಮಾನದ ಗಾತ್ರದ 92-ಅಡಿ ಕ್ಷುದ್ರಗ್ರಹವು ಏಪ್ರಿಲ್ 4 ರಂದು 2,250,000 ಕಿಮೀ ದೂರದಲ್ಲಿ ಭೂಮಿಯ ಸನಿಹ ಬಂದಿದೆ.
ಕ್ಷುದ್ರಗ್ರಹ 2023 FQ7: ಏಪ್ರಿಲ್ 5 ರಂದು, 65-ಅಡಿ ಗಾತ್ರದ ಕ್ಷುದ್ರಗ್ರಹವು 5,750,000 ಕಿ.ಮೀ ದೂರದಲ್ಲಿ ಭೂಮಿಯನ್ನ ಸಮೀಪಿಸಿದೆ.
ನಾಸಾದ ಪ್ಲಾನೆಟರಿ ಡಿಫೆನ್ಸ್ ಕೋಆರ್ಡಿನೇಷನ್ ಆಫೀಸ್ ಮಾಹಿತಿ ನೀಡಿದಂತೆ ಹೊಸದಾಗಿ ಪತ್ತೆಯಾದ ಒಲಿಂಪಿಕ್ ಈಜುಕೊಳದ ಗಾತ್ರದಲ್ಲಿರುವ ಕ್ಷುದ್ರಗ್ರಹವು ಇಂದಿನಿಂದ 23 ವರ್ಷಗಳ ಬಳಿಕ ಪ್ರೇಮಿಗಳ ದಿನದಂದು (Valtience Day) ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಯ ಬಗ್ಗೆ ನಾಸಾ ಮಾಹಿತಿ ನೀಡಿದೆ.