Virat-Faf Du Plesis: ಡು ಪ್ಲೆಸಿಸ್ “ಈ ಸಲ ಕಪ್ ನಮ್ದೆ” ಎಂದಾಗ ಹೊಟ್ಟೆ ಹುಣ್ಣಾಗುವಂತೆ ನಕ್ಕ ವಿರಾಟ್! ಕಾರಣವೇನು ಗೊತ್ತಾ?

Virat-Faf Du Plesis: ಐಪಿಎಲ್ 2023 ರ ಪಂದ್ಯದಲ್ಲಿ ಆರ್​ಸಿಬಿ ಮುಂಬೈ ಇಂಡಿಯನ್ಸ್(Rohit Sharma, RCB vs MI) ವಿರುದ್ದ ಅಬ್ಬರಿಸಿ ಭರ್ಜರಿ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ 2023 (IPL 2023) ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ರೋಹಿತ್ ಪಡೆ ಹೀನಾಯ ಸೋಲು ಕಂಡಿದೆ.

ಆದರೆ, ಈ ಆಟಕ್ಕೂ ಮೊದಲು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಅವರು ಕಾರ್ಯಕ್ರಮ ಒಂದರಲ್ಲಿ ಫಾಫ್ ಡು ಪ್ಲೆಸಿಸ್ ಮಾತನ್ನು ಕೇಳಿ ವಿರಾಟ್ ಕೊಹ್ಲಿ ಬಿದ್ದು ಬಿದ್ದು ನಕ್ಕ ಪ್ರಹಸನ ನಡೆದಿದೆ. ಇದಕ್ಕೆ ಕಾರಣ ಕೂಡ ಇದೆ. ಡು ಪ್ಲೆಸಿಸ್ (Faf du Plessis pronounces RCB slogan)ತಪ್ಪಾಗಿ “ಈ ಸಲ ಕಪ್ ನಮ್ದೆ“ ಎಂಬ ಸ್ಲೋಗನ್ ಹೇಳಿಕೊಂಡಿದ್ದಾರೆ. ಈವೆಂಟ್‌ ಒಂದರ ಸಂವಾದದ ಸಂದರ್ಭ, ಡು ಪ್ಲೆಸಿಸ್ ಅವರು ‘ಈ ಸಲ ಕಪ್ ನಮ್ದೆ’ ಎಂದು ಹೇಳುವ ಬದಲಿಗೆ ‘ಈ ಸಲ ಕಪ್ ನಹಿ’ ಎಂದು ಹೇಳಿದ್ದು, ಇದನ್ನು ಕೇಳಿ ಕೊಹ್ಲಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರಂತೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ‘ಈ ಸಲ ಕಪ್ ನಮ್ದೆ’ ಎಂಬುದರ ಬದಲು ‘ಈ ಸಲ ಕಪ್ ನಹಿ’ ಎಂದು ಹೇಳಿದ್ದು, ನಾಯಕನ ಹೇಳಿಕೆ ಕೇಳುತ್ತಿದ್ದಂತೆ ಪಕ್ಕದಲ್ಲೇ ಕುಳಿತಿದ್ದ ವಿರಾಟ್ ಕೊಹ್ಲಿ ಬಿದ್ದು ಬಿದ್ದು ನಕ್ಕಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿದೆ.

ಇನ್ನು ನೆನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ನಾಯಕ (Virat-Faf Du Plesis) ಫಾಫ್ ಡುಪ್ಲೆಸಿಸ್ ಅವರ ಅಮೋಘ ಬ್ಯಾಟಿಂಗ್ ವೈಖರಿಗೆ ಎದುರಾಳಿ ತಂಡ ಮುಂಬೈ ಇಂಡಿಯನ್ಸ್ ಗೆಲುವಿಗಾಗಿ ಹರಸಾಹಸ ಪಟ್ಟರೂ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ. ಮುಂಬೈ ನೀಡಿದ್ದ 172 ರನ್​ಗಳ ಟಾರ್ಗೆಟ್ ಬೆನ್ನಟ್ಟಿ ಹೊರಟ ವಿರಾಟ್ ಕೊಹ್ಲಿ (Virat Kohli) ಹಾಗೂ ಡುಪ್ಲೆಸಿಸ್(Faf Du Plesis) ಭರ್ಜರಿ ಬ್ಯಾಟಿಂಗ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮೊದಲು ಫಾಫ್ ಕ್ರೀಡಾಂಗಣದಲ್ಲಿ ಅಬ್ಬರದ ಪ್ರದರ್ಶನ ನೀಡಿದರೆ, ವಿರಾಟ್ ಸ್ಫೋಟಕ ಬ್ಯಾಟಿಂಗ್ ಮಾಡಿ, ಸಿಕ್ಸರ್ ಮೂಲಕ ಕೊಹ್ಲಿ ವಿನ್ನಿಂಗ್ ಶಾಟ್ ಹೊಡೆದಿದ್ದು 49 ಎಸೆತಗಳನ್ನು ಎದುರಿಸಿದ ಕೊಹ್ಲಿ 6 ಫೋರ್ ಹಾಗೂ 5 ಸಿಕ್ಸರ್​ಗಳ ಮೂಲಕ ಅಜೇಯ 82 ರನ್ ಗಳಿಸಿದರು.

 

https://twitter.com/reaadubey/status/1642129711982854144?s=20

Leave A Reply

Your email address will not be published.