Senior Citizens : ಹಿರಿಯ ನಾಗರಿಕರೇ ನಿಮ್ಮ ಖಾತೆಗೆ ಸೇರುತ್ತೆ ಪ್ರತಿ ತಿಂಗಳು 20,500 ರೂಪಾಯಿ!

Senior Citizens: ಸರ್ಕಾರ ಕೂಡ ಹಿರಿಯ ನಾಗರಿಕರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು(Schemes for Senior Citizens) ಜಾರಿಗೆ ತಂದಿದ್ದು, ಈ ಮೂಲಕ ಆರ್ಥಿಕ ಭದ್ರತೆ ಒದಗಿಸುತ್ತಿದೆ. ಇದರ ಜೊತೆಗೆ ಪ್ರತಿಯೊಬ್ಬ ಹಿರಿಯ ನಾಗರಿಕರಿಗೂ ಸರ್ಕಾರ ಮಾಸಿಕ 1 ಸಾವಿರ ರೂ ಸಹಾಯಧನ ವಿತರಣೆ ಮಾಡಲಾಗುತ್ತಿದೆ. ಇದೀಗ,ಹಿರಿಯ ನಾಗರಿಕರಿಗೆ (Senior Citizens)ಕೇಂದ್ರ ಸರ್ಕಾರ ಮತ್ತೊಂದು ಪ್ರಯೋಜನ ಜಾರಿಗೆ ತಂದಿದೆ.ಪ್ರತಿ ತಿಂಗಳು ತಮ್ಮ ಖಾತೆಗೆ 20,500 ರೂ.ವರೆಗೆ ಪಡೆಯಲು ಅನುವು ಮಾಡಿಕೊಟ್ಟಿದೆ. ಈ ಯೋಜನೆಯ ಕುರಿತ ಮಾಹಿತಿ ಇಲ್ಲಿದೆ.

 

 

ಈ ಬಜೆಟ್​ನಲ್ಲಿ ಕೂಡ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)(Minister of Finance of India)ಅವರು ಕೇಂದ್ರ ಬಜೆಟ್ 2023 ರ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದರು. ಈ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS- Senior Citizen Saving Scheme) ಹೂಡಿಕೆ (Savings) ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಳ ಕೂಡ ಮಾಡಿದೆ. ಹೀಗಾಗಿ, ಇನ್ನು ಮುಂದೆ ಈ ಯೋಜನೆಯಲ್ಲಿ ಗರಿಷ್ಠ ರೂ.30 ಲಕ್ಷ ಹೂಡಿಕೆ ಮಾಡಬಹುದು. ಹಿರಿಯ ನಾಗರಿಕರಿಗೆ ಹಣಕಾಸು ಸಂಸ್ಥೆಗಳಲ್ಲಿ ಅತಿ ಹೆಚ್ಚಿನ ಬಡ್ಡಿ ಲಭ್ಯವಾಗಲಿವೆ. ಕೇಂದ್ರ ಸರ್ಕಾರವು (Central Government) ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ದುಪ್ಪಟ್ಟು ಮಾಡಿದ್ದು, ಈ ಕುರಿತು ಸುತ್ತೋಲೆ ಹೊರಡಿಸಿದೆ.

 

ಕೇಂದ್ರ ಸರ್ಕಾರವು 2004 ರಲ್ಲಿ ಹಿರಿಯ ನಾಗರಿಕರಿಗೆ ಅವರು ಹೂಡಿಕೆ ಮಾಡಿದ ಹಣದಿಂದ ನಿರ್ದಿಷ್ಟ ಮಾಸಿಕ ಆದಾಯವನ್ನು ಒದಗಿಸಲು ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಆರಂಭ ಮಾಡಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿನ ಹೂಡಿಕೆಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಹೊಂದಿದೆ. ಗರಿಷ್ಠ ರೂ.1,50,000 ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದ್ದು, 50,000 ವರೆಗಿನ ಬಡ್ಡಿಗೆ ತೆರಿಗೆ ಪಾವತಿ ಮಾಡಬೇಕಾದ ಅವಶ್ಯಕತೆ ಇಲ್ಲ.

 

ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ನಿರ್ಧಾರದಿಂದ ವೃದ್ಧರಿಗೆ ಹೆಚ್ಚು ಪ್ರಯೋಜನ ಲಭ್ಯವಾಗಲಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಮಾರ್ಚ್ 31 ರವರೆಗಿನ ಮಿತಿಯ ಅನುಸಾರ, ರೂ.15 ಲಕ್ಷಗಳನ್ನು ಹೂಡಿಕೆ ಮಾಡಿದವರಿಗೆ 8 ಪ್ರತಿಶತ ವಾರ್ಷಿಕ ಬಡ್ಡಿ ಲಭ್ಯವಾಗುತ್ತದೆ. ಈ ಯೋಜನೆಯಲ್ಲಿ ಐದು ವರ್ಷಗಳವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಈ ಲೆಕ್ಕಾಚಾರದಲ್ಲಿ ಪ್ರತಿ ವರ್ಷ ರೂ.1,20,000 ಬಡ್ಡಿ ದೊರೆಯಲಿದೆ. ಐದು ವರ್ಷಗಳವರೆಗೆ ರೂ.6,00,000 ಬಡ್ಡಿಯನ್ನು ಪಡೆಯಬಹುದು. ಹೀಗಾಗಿ, ಪ್ರತಿ ತಿಂಗಳು ಖಾತೆಗೆ ರೂ.10,000 ಜಮಾ ಆಗಲಿದ್ದು, ಇದು ವೃದ್ಧಾಪ್ಯದಲ್ಲಿ ಹಿರಿಯ ನಾಗರಿಕರಿಗೆ ಪಿಂಚಣಿಯಾಗಿ ಕಾರ್ಯನಿರ್ವಹಿಸಲಿದೆ.

 

ಈ ಯೋಜನೆಯಲ್ಲಿ ಬಡ್ಡಿದರ ಗಮನಿಸಿದಾಗ, ಕೇಂದ್ರ ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರಗಳನ್ನು ಪರಿಷ್ಕರಣೆ ಮಾಡುತ್ತದೆ. 60 ವರ್ಷ ಮೇಲ್ಪಟ್ಟ ಯಾವುದೇ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವಿದ್ದು, ಈ ಯೋಜನೆಯಲ್ಲಿ ಐದು ವರ್ಷ ಹೂಡಿಕೆ ಮಾಡಬಹುದು. ಇದಾದ ನಂತರ ಮತ್ತೆ ಮೂರು ವರ್ಷಗಳವರೆಗೆ ವಿಸ್ತರಣೆ ಮಾಡಲು ಅವಕಾಶವಿದೆ.

 

ಈ ಯೋಜನೆಯಲ್ಲಿ, ಹಿರಿಯ ನಾಗರಿಕರು ಐದು ವರ್ಷಗಳವರೆಗೆ ರೂ.12,30,000 ಬಡ್ಡಿಯನ್ನು ಗಳಿಸಬಹುದು. ಪ್ರತಿ ತಿಂಗಳು 20,500 ಖಾತೆಗೆ ಜಮಾ ಮಾಡಲಾಗಲಿದ್ದು, ನೀವು ಐದು ವರ್ಷಗಳವರೆಗೆ ಪ್ರತಿ ತಿಂಗಳು ರೂ.20,500 ದರದಲ್ಲಿ ಪಿಂಚಣಿ ಪಡೆಯಲು ಅವಕಾಶವಿದೆ. ಅವಧಿ ಮುಗಿದ ಬಳಿಕ, ಹೂಡಿಕೆ ಮಾಡಿದ ಹಣವನ್ನು ಮರಳಿಸಲಾಗುತ್ತದೆ. ಹೆಚ್ಚಿದ ಮಿತಿಯ ಅನುಸಾರ, ಏಪ್ರಿಲ್ 1, 2023 ರಿಂದ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 30 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಲು ಅವಕಾಶವಿದೆ. ಕೇಂದ್ರ ಸರ್ಕಾರವು ಬಡ್ಡಿ ದರವನ್ನು 20 ಬೇಸಿಸ್ ಪಾಯಿಂಟ್‌ಗಳಿಂದ 8.20 ಕ್ಕೆ ಹೆಚ್ಚಳ ಮಾಡಿದೆ. 8.20 ರಷ್ಟು ವಾರ್ಷಿಕ ಬಡ್ಡಿಯನ್ನು ಲೆಕ್ಕ ಹಾಕಿದರೆ ಪ್ರತಿ ವರ್ಷ ರೂ.2,46,000 ಬಡ್ಡಿ ದೊರೆಯುತ್ತದೆ.

ಇದನ್ನೂ ಓದಿ: Seed Bank: ರೈತರಿಗೆ ಮುಖ್ಯ ಮಾಹಿತಿ, ಅತಿ ಶೀಘ್ರದಲ್ಲಿ ಬೀಜ ಬ್ಯಾಂಕ್ ಸ್ಥಾಪನೆ

Leave A Reply

Your email address will not be published.