Home Karnataka State Politics Updates ಭಾರತಕ್ಕೆ ವಿದ್ಯಾವಂತ ಪ್ರಧಾನಿ ಬೇಕು, ಕಡಿಮೆ ವಿದ್ಯಾವಂತರು ಸಮೃದ್ಧಿಯನ್ನು ತರಲು ಸಾಧ್ಯವಿಲ್ಲ: ಮೋದಿ ವಿರುದ್ಧ ಕೇಜ್ರಿವಾಲ್...

ಭಾರತಕ್ಕೆ ವಿದ್ಯಾವಂತ ಪ್ರಧಾನಿ ಬೇಕು, ಕಡಿಮೆ ವಿದ್ಯಾವಂತರು ಸಮೃದ್ಧಿಯನ್ನು ತರಲು ಸಾಧ್ಯವಿಲ್ಲ: ಮೋದಿ ವಿರುದ್ಧ ಕೇಜ್ರಿವಾಲ್ ವಿವಾದಾತ್ಮಕ ವಾಗ್ದಾಳಿ !

Educated PM

Hindu neighbor gifts plot of land

Hindu neighbour gifts land to Muslim journalist

India needs an educated PM: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಟೀಕೆಗಳನ್ನು ಮುಂದುವರೆಸಿದ್ದಾರೆ. ಪ್ರಧಾನಿ ಮೋದಿ ವಿದ್ಯಾವಂತ ಪ್ರಧಾನಿಯಾಗಿದ್ದರೆ, (Educated PM) ನೋಟು ಬ್ಯಾನ್ ಮತ್ತು ಮೂರು ರೈತ ವಿರೋಧಿ ಕಾನೂನುಗಳಂತಹ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂದು ಕೇಜ್ರಿವಾಲ್ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. India needs an educated PM, Kejriwal attacks Modi again.

ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ನಡೆದ ತಮ್ಮ ಚೊಚ್ಚಲ ರ್‍ಯಾಲಿಯನ್ನು ಉದ್ದೇಶಿಸಿ ಭಾನುವಾರ ಅರವಿಂದ್ ಕೇಜ್ರಿವಾಲ್ ಮಾತನಾಡುತ್ತಿದ್ದರು. ಅಲ್ಲಿ ಮೋದಿ ಅವರನ್ನು ಟೀಕಿಸಿದ ಅರವಿಂದ್ ಕೇಜ್ರಿವಾಲ್ ಅವರು, “ನರೇಂದ್ರ ಮೋದಿಯವರ ಭಾಷಣವನ್ನು ನಾನು ಕೇಳಿದ್ದೇನೆ. ಅವರು ಹಳ್ಳಿಯ ಶಾಲೆಗೆ ಹೋಗುತ್ತಿದ್ದರು ಎಂದು ಹೇಳಿದ್ದಾರೆ. ಅಲ್ಲಿ ಅವರಿಗೆ ಹೆಚ್ಚು ಓದಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಹೀಗಾಗಿ ಅವರಿಗೆ ಶಿಕ್ಷಣ ಸರಿಯಾಗಿ ಆಗಿಲ್ಲ. ಆದ್ದರಿಂದ ನಾನು ಹೇಳಲು ಬಯಸುವುದೇನೆಂದರೆ, ಭಾರತದಂತಹ ಮಹಾನ್ ರಾಷ್ಟ್ರದ ಪ್ರಧಾನಿ ಶಿಕ್ಷಣ ಪಡೆಯಬೇಕಲ್ಲವೇ?” ಎಂದು ನೆರೆದ ಜನರನ್ನು ಕೇಳಿದರು.

“ಭಾರತ ಬಡ ರಾಷ್ಟ್ರವಾಗಿದ್ದು, ಬಡತನದಿಂದ ಶಾಲೆಗೆ ಹೋಗದಿರುವವರು ಅಪರಾಧವಲ್ಲ. ಆದರೆ ನಮ್ಮ ಪ್ರಧಾನಿ ವಿದ್ಯಾವಂತರಾಗಿರಬೇಕು. ಪ್ರಧಾನಿಯವರು ನೋಟು ಅಮಾನ್ಯೀಕರಣವನ್ನು ಮಾಡಿದರು. ಅದು ನಮ್ಮ ಆರ್ಥಿಕತೆಯನ್ನು 10 ವರ್ಷ ಹಿಂದಕ್ಕೆ ಕೊಂಡೊಯ್ಯಿತು” ಎಂದಿದ್ದಾರೆ ಆಪ್.ಮುಖಂಡ ಎಂದರು.

ಯಾರೋ ನಮ್ಮ ಪ್ರಧಾನಿಯನ್ನು ಮೂರ್ಖರನ್ನಾಗಿಸಿದ್ದಾರೆ. ಭ್ರಷ್ಟಾಚಾರವನ್ನು ಕೊನೆಗೊಳಿಸಲು ನೋಟುಗಳನ್ನು ಬ್ಯಾನ್ ಮಾಡಿ ಎಂದು ಮೋದಿಯವರಿಗೆ ಹೇಳಿದರು. ಅದರಂತೆ ಮೋದಿ ನೋಟು ಬ್ಯಾನ್ ಮಾಡಿದರು. ಆದರೆ ನೋಟು ಅಮಾನ್ಯೀಕರಣದಿಂದ ಭ್ರಷ್ಟಾಚಾರ ಕೊನೆಗೊಂಡಿತೇ? ಇಲ್ಲ. ನೋಟು ಅಮಾನ್ಯೀಕರಣದಿಂದ ಭಯೋತ್ಪಾದನೆ ಕೊನೆಗೊಳ್ಳುತ್ತದೆ ಎಂದು ನಮ್ಮ ಪ್ರಧಾನಿಗೆ ಯಾರೋ ಹೇಳಿದ್ದರು. ನೋಟು ರದ್ದತಿ ಭಯೋತ್ಪಾದನೆಯನ್ನು ಕೊನೆಗೊಳಿಸಿದೆಯೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಕೃಷಿ ಕಾನೂನುಗಳ ಬಗ್ಗೆ ಮಾತನಾಡಿದ ಎಎಪಿ ನಾಯಕ, “ಯಾರೋ ನಮ್ಮ ಪ್ರಧಾನಿಯನ್ನು ಮೂರ್ಖರನ್ನಾಗಿಸಿ ರೈತ ವಿರೋಧಿಯಾದ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತರಲು ಹೇಳಿದರು. ಒಂದು ವರ್ಷ ಆಂದೋಲನ ನಡೆಯಿತು. ಇದರಿಂದ 750 ಕ್ಕೂ ಹೆಚ್ಚು ಜನರು ಸತ್ತರು. ನಮ್ಮ ಪ್ರಧಾನಿ ವಿದ್ಯಾವಂತರಾಗಿದ್ದರೆ, ಅವರು ಅಂತಹ ಕಾನೂನುಗಳಿಗೆ ಜಾರಿಗೆ ತರಲು ಹೋಗುತ್ತಿರಲಿಲ್ಲ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಪ್ರಧಾನಿಯಾಗಲು ಶೈಕ್ಷಣಿಕ ಅರ್ಹತೆ ಇರಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರತಿಪಾದಿಸಿದ್ದಾರೆ. “ಇದು 21 ನೇ ಶತಮಾನ, 21 ನೇ ಶತಮಾನದ ಯುವಕರು ಮಹತ್ವಾಕಾಂಕ್ಷಿಗಳು. ಯುವಕರು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಂಬುತ್ತಾರೆ. ಯುವಕರು ನಮ್ಮ ಭಾರತದ ಉದ್ಯೋಗ ಮತ್ತು ಸಮೃದ್ಧಿಯನ್ನು ಬಯಸುತ್ತಾರೆ. ಮತ್ತು ಒಬ್ಬ ವಿದ್ಯಾವಂತ ಪ್ರಧಾನಿ ಮಾತ್ರ ಆ ಸಮೃದ್ಧಿಯನ್ನು ತರಲು ಸಾಧ್ಯ. ಕಡಿಮೆ ವಿದ್ಯಾವಂತ ಅಥವಾ ಅನಕ್ಷರಸ್ಥ ವ್ಯಕ್ತಿಯು ಸಮೃದ್ಧಿಯನ್ನು ತರಲು ಸಾಧ್ಯವಿಲ್ಲ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

” ಒಂದು ಖಾಸಗಿ ಕಂಪನಿಯು ಕೂಡಾ ಮ್ಯಾನೇಜರ್ ಹುದ್ದೆಗೆ ಎಂಬಿಎ, ಎಂಎ ಮತ್ತು ಬಿಎ ಪದವಿ ಕೇಳುತ್ತದೆ. ಹೀಗಿರುವಾಗ ದೇಶದ ಅಗ್ರಮಾನ್ಯ ಪ್ರಧಾನಿಯಾಗಲು ಶೈಕ್ಷಣಿಕ ಅರ್ಹತೆ ಇರಬೇಕಲ್ಲವೇ? ” ಎಂದು ಅವರು ಅರವಿಂದ್ ಕೇಜ್ರಿವಾಲ್ ಅವರು ಪ್ರಶ್ನೆ ಕೇಳಿದ್ದಾರೆ.
ಪ್ರಧಾನಿ ಹುದ್ದೆಗೆ ಏರಲು ಉನ್ನತ ಶಿಕ್ಷಣ ಬೇಕೆಂದು ಪ್ರತಿಪಾದಿಸುವ ಕೇಜ್ರಿವಾಲರ ಅಭಿಪ್ರಾಯಗಳಿಗೆ ನೀವು ಏನು ಹೇಳುತ್ತೀರಿ? ನಿಮ್ಮ ಅಭಿಪ್ರಾಯಗಳನ್ನು ನಮಗೆ ಬರೆದು ತಿಳಿಸಿ.

ಇದನ್ನೂ ಓದಿ: Hassan ticket war: ಹಾಸನದಲ್ಲಿ ಭವಾನಿ ಸ್ಪರ್ಧಿಸೋದು ಬೇಡವೆಂದ ದೊಡ್ಡಗೌಡರು, ಆಕ್ರೋಶಗೊಂಡು ಕೂಗಾಡಿ ಹೊರ ನಡೆದ ಭವಾನಿ