Hassan Ticket Fight: ಭವಾನಿ ರೇವಣ್ಣಗೆ ಟಿಕೆಟ್ ನಿರಾಕರಿಸೋ ಹಿಂದೆದೆ HDKಯ ಈ ರಾಜಕೀಯ ಲೆಕ್ಕಾಚಾರ, ಏನೀ ಹೊಸ ತಂತ್ರ!?
Hassan Ticket Fight : ಹಾಸನ ಟಿಕೆಟ್ ಫೈಟ್ (Hassan Ticket Fight) ದಳಪತಿ ಮನೆಯಲ್ಲಿ ದಂಗಲ್ ಸೃಷ್ಟಿಸಿದೆ. ಟಿಕೆಟ್ ಬೇಕೇ ಬೇಕು ಎಂದು ರೇವಣ್ಣ (HD Revanna) ಪಟ್ಟು ಹಿಡಿದಂತಿದೆ. ಆದರೆ ಅಣ್ಣ ಒಂದು ಲೆಕ್ಕಚಾರ ಹಾಕಿದ್ರೆ, ತಮ್ಮ ಮತ್ತೊಂದು ಲೆಕ್ಕಾಚಾರದಲ್ಲಿದ್ದಾರೆ. ಕುಮಾರಸ್ವಾಮಿ(Kumaraswamy) ಅವ್ರು ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಟಿಕೆಟ್ ಕೊಡುತ್ತೆ ಅಂದರೆ, ರೇವಣ್ಣನ ಆ ಸಾಮಾನ್ಯ ಕಾರ್ಯಕರ್ತ ಯಾರೆಂದೇ ಗೋತ್ತಿಲ್ಲ ಅಂದಿದ್ದಾರೆ. ಒಟ್ಟಿನಲ್ಲಿ ಪ್ರತಿಷ್ಠೆಯ ಜಿದ್ದಾಜಿದ್ದಿಯಲ್ಲಿ ಸಹೋದರರ ಅಂತರಂಗ, ಬಹಿರಂಗ ಗುದ್ದಾಟ ಕೂಡ ನಡೆಯುತ್ತಿದೆ.
ಅಂದಹಾಗೆ ಭವಾನಿ ರೇವಣ್ಣಗೆ(Bhavani Revanna) ಟಿಕೆಟ್ ಇಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ನಿರಾಕರಿಸಲು ಕಾಣವೂ ಇದೆ. ಅವರ ರಾಜಕೀಯ ಲೆಕ್ಕಾಚಾರವೇ ಬೇರೆ ಇದೆ. ಅದೇನು ತಿಳಿಯಬೇಕಿದ್ದರೆ ಇದನ್ನು ಓದಿ.
ಹಾಸನದಲ್ಲಿ ಭವಾನಿ ರೇವಣ್ಣನಿಗಿಂತ ಸ್ವರೂಪ್(Swaroop) ಪರವಾಗಿ ಹೇಚ್ಚು ಚುನಾವಣಾ ಟ್ರೆಂಡ್ ಇದೆ. ಆದರೆ ಭವಾನಿ ರೇವಣ್ಣಗೆ ಒಕ್ಕಲಿಗ ಒಳಪಂಗಡ ಮತಗಳ ಧೃವೀಕರಣದಿಂದ ಹಿನ್ನೆಡೆ ಸಾಧ್ಯತೆ ಹೆಚ್ಚಿದೆ. ಜೊತೆಗೆ ಎಮೋಷನಲ್ ಚಿಂತನೆಗಳಿಂದ ಕ್ಷೇತ್ರ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಅಲ್ಲದೆ ಕುಟುಂಬದಿಂದ ಮತ್ತೊಬ್ಬರು ರಾಜಕೀಯ ಎಂಟ್ರಿಯಿಂದ ಫ್ಯಾಮಿಲಿ ಪಾಲಿಟಿಕ್ಸ್ ಹಣೆಪಟ್ಟಿಗೆ ಮತ್ತೊಂದು ಪೆಟ್ಟು ಕೂಡ ಎದುರಾಗಬಹುದು.
ಇನ್ನು ವಿಪಕ್ಷಗಳು ಈಗಾಗಲೇ ಫ್ಯಾಮಿಲಿ ಪಾಲಿಟಿಕ್ಸ್ ಎಂದೆ ಪಕ್ಷವನ್ನು ಟೀಕಿಸುತ್ತಿವೆ. ಭವಾನಿಯವರೂ ಈಗ ಪಾಲಿಟಿಕ್ಸ್ ಗೆ ಬಂದರೆ ವಿರೋಧಿಗಳ ಗೇಲಿಗೆ ಗುರಿಯಾಗಿ ಮತಗಳು ವಿಭಜನೆ ಆಗಬಹುದು. ಇತರ ಪಕ್ಷಗಳು ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಗುರುತಿಸಿಕೊಳ್ಳುವಾಗ ತಾವು ಕುಟುಂಬದವರಿಗೇ ಟಿಕೆಟ್ ನೀಡಿದರೆ ಜನರು ಅಪಾರ್ಥ ಮೃಡಿಕೊಳ್ಳಬಹುದು. ಹಾಗಾಗಿ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೆ ಪಕ್ಷದ ಆಂತರಿಕ ವಲಯದಲ್ಲಿ ಉತ್ತಮ ಸಂದೇಶ ರವಾನೆ ಆಗುತ್ತದೆ. ಇದು ಕಾರ್ಯಕರ್ತರ ಪರ ಪಕ್ಷವಿದೆ ಎಂಬ ಸಂದೇಶ ನೀಡಿ ಪಕ್ಷಕ್ಕೆ ದೊಡ್ಡ ಲಾಭ ತಂದುಕೊಡುತ್ತದೆ.
ಅಲ್ಲದೆ ಭವಾನಿ ರೇವಣ್ಣ ಸ್ಪರ್ಧೆಯಿಂದ ಉಳಿದ ಜೆಡಿಎಸ್ ಕ್ಷೇತ್ರಗಳ ಮೇಲೆ ಇಂಪ್ಯಾಕ್ಟ್ ಆಗುವ ಸಾಧ್ಯತೆ ಕೂಡ ಇದೆ. ಜೊತೆಗೆ ಕುಟುಂಬದಲ್ಲಿ ಬಣ ರಾಜಕೀಯಕ್ಕೆ ವೇದಿಕೆಯಾಗಲಿದೆ. ಹೀಗಾಗಿ ಈ ಎಲ್ಲಾ ರಾಜಕೀಯ ಲೆಕ್ಕಾಚಾರದಿಂದ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ ಎನ್ನುತ್ತಿರುವ ಹೆಚ್ ಡಿ ಕುಮಾರಸ್ವಾಮಿ.
ಇನ್ನು ಟಿಕೆಟ್ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ಮಾಜಿ ಪ್ರಧಾನಿ ದೇವೇಗೌಡರು ಮಣಿಪಾಲ್ ಆಸ್ಪತ್ರೆಯಿಂದ ಮನೆಗೆ ಆಗಮಿಸಿದ್ದಾರೆ. ಆರೋಗ್ಯ ತಪಾಸಣೆಗಾಗಿ ದೇವೇಗೌಡರು ವೈದ್ಯಕೀಯ ಪರೀಕ್ಷೆಗೆ ತೆರಳಿದ್ದರು. ಸದ್ಯ ದೇವೇಗೌಡರು ಮನೆಗೆ ಹಿಂತಿರುಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಹೆಚ್ ಡಿ ರೇವಣ್ಣ ಮನೆಗೆ ಬರಲಿದ್ದಾರೆ. ಬಳಿಕ ಹಾಸನ ಟಿಕೆಟ್ ವಿಚಾರ ಮುಖಂಡರು ಚರ್ಚಿಸಲಿದ್ದಾರೆ. ಹಾಸನ ಟಿಕೆಟ್ ಯಾರಿಗೆ ಕೊಡಬೇಕು ಎಂದು ಈ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ.