Dasara Controversy : ಅಂಗನವಾಡಿ ಕಾರ್ಯಕರ್ತೆಯರು ರೊಚ್ಚಿಗೆದ್ರು ದಸರಾ ಸಿನಿಮಾ ನೋಡಿ…ಅಂತದ್ದೇನಿದೆ?

Dasara movie Controversy: ನ್ಯಾಚುರಲ್ ಸ್ಟಾರ್ ನಾನಿ (natural star Nani) ನಟಿಸಿರುವ ಹಾಗೂ ನಿರ್ದೇಶಕ ಶ್ರೀಕಾಂತ್ ಒಡೆಲಾ ನಿರ್ದೇಶನದ ‘ದಸರಾ’ (dasara) ಸಿನಿಮಾ ಮಾ.30 ರಂದು ಅದ್ಧೂರಿಯಾಗಿ ತೆರೆ ಕಂಡಿದೆ. ಸಿನಿಮಾದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ (Keerthy Suresh) ನಾನಿಗೆ (actor nani) ಜೋಡಿಯಾಗಿ ಅದ್ಭುತವಾಗಿ ನಟಿಸಿದ್ದಾರೆ. ಹಾಗೇ ಕನ್ನಡದ ದಿಯಾ (Diya) ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ (Dheekshith Shetty) ಸೂರಿ ಎಂಬ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ.

 

ಹಾಡುಗಳು (dasara movie song) ಮತ್ತು ಟ್ರೇಲರ್​ನಿಂದ (dasara film trailer) ಉತ್ತಮ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಥಿಯೇಟರ್​ಗಳಲ್ಲಿಯೂ ಧೂಳೆಬ್ಬಿಸಿದೆ. ನ್ಯಾಚುರಲ್ ಸ್ಟಾರ್ ನಾನಿ ಸಖತ್ ಆಗಿ ನಟಿಸಿದ್ದು, ಸಿನಿಪ್ರಿಯರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನಿ (Nani) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ದಸರಾ ಬಾಕ್ಸಾಫೀಸ್ (Box Office) ಲೂಟಿ ಮಾಡಿದೆ. ಮೊದಲ ದಿನವೆ ದಾಖಲೆ ಮೊತ್ತದ ಗಳಿಕೆ ಕಂಡಿದೆ. ಶ್ರೀರಾಮ ನವಮಿ ಪ್ರಯುಕ್ತ ತೆರೆಗೆ ಬಂದ ದಸರಾ ವಿಶ್ವಾದ್ಯಂತ ಬರೋಬ್ಬರಿ 38 ಕೋಟಿಗೂ ಅಧಿಕ ಹಣ ದೋಚಿದ್ದು, ಈ ಸಿನಿಮಾ ತೆಲುಗು (Telugu), ತಮಿಳು, ಕನ್ನಡ (kannada), ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಏಕಕಾಲದಲ್ಲಿ ರಿಲೀಸ್ ಆಗಿದೆ.

ಭಾರೀ ಯಶಸ್ಸನ್ನು ಹಿಡಿದು ಮುನ್ನುಗ್ಗುತ್ತಿರುವ ಸಿನಿಮಾಗೆ ಇದೀಗ ಬಲವಾದ ಪೆಟ್ಟು ಬಿದ್ದಿದೆ. ಹೌದು ದಸರಾ ವಿವಾದದ ಸುಳಿಯಲ್ಲಿ ಸಿಲುಕಿದೆ (Dasara movie Controversy) ಚಿತ್ರದ ದೃಶ್ಯವೊಂದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು ಕೀರ್ತಿ ಸುರೇಶ್‌ ಅಭಿನಯದ ಕೆಲ ದೃಶ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೃಶ್ಯಗಳನ್ನು ಸಿನಿಮಾದಿಂದ ತೆಗೆಯಬೇಕು ಎಂದು ಆಗ್ರಹಿಸಿದ್ದಾರೆ.

‘ದಸರಾ’ ಚಿತ್ರದಲ್ಲಿ ಕೀರ್ತಿ ಸುರೇಶ್‌, ವೆನ್ನಿಲ ಎಂಬ ಅಂಗನವಾಡಿ ಕಾರ್ಯಕರ್ತೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದ ದೃಶ್ಯವೊಂದರಲ್ಲಿ ಅಂಗನವಾಡಿ ಮಕ್ಕಳಿಗಾಗಿ ಸರ್ಕಾರ ನೀಡುವ ಮೊಟ್ಟೆಗಳನ್ನು ವೆನ್ನಿಲ ಕದ್ದು ಬೇರೆಯವರಿಗೆ ಮಾರಿ ಹಣ ಗಳಿಸುತ್ತಾಳೆ. ಮತ್ತೊಂದು ದೃಶ್ಯದಲ್ಲಿ ಅದೇ ಮೊಟ್ಟೆಗಳನ್ನು ಕದ್ದು ತಂದು ತಮ್ಮ ಮನೆಯವರಿಗೆ ನೀಡುತ್ತಾಳೆ. ಇದೀಗ ಈ ದೃಶ್ಯಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಭಾರೀ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಂತಹ ದೃಶ್ಯಗಳ ಮೂಲಕ ಚಿತ್ರದಲ್ಲಿ ನಮಗೆ ಅವಮಾನ ಮಾಡಲಾಗಿದೆ. ಈ ದೃಶ್ಯಗಳನ್ನು ಸಿನಿಮಾದಿಂದ ತೆಗೆಯಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ. ಅಲ್ಲದೆ, ಆಂಧ್ರ ಹಾಗೂ ತೆಲಂಗಾಣದ ಹಲವೆಡೆ ಅಂಗನವಾಡಿ ಕಾರ್ಯಕರ್ತೆಯರು ಚಿತ್ರಮಂದಿರದ ಮುಂದೆ ಪ್ರತಿಭಟನೆ ಕೂಡಾ ನಡೆಸಿದ್ದಾರೆ. ಸದ್ಯ ಈ ವಿಚಾರದ ಬಗ್ಗೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದರೂ ಸಿನಿಮಾ ಸಖತ್ ಸದ್ದು, ಮಾಡುತ್ತಿದ್ದು, ಅಭಿಮಾನಿಗಳು ಸಿನಿಮಾವನ್ನು, ನಟಿ, ನಟಿಯರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ.
ಇನ್ನು ದಸರಾ’ ಚಿತ್ರವನ್ನು ಶ್ರೀಲಕ್ಷ್ಮಿ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಅಡಿ ಸುಧಾಕರ್ ಚೆರುಕುರಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದು, ಸತ್ಯನ್ ಸೂರ್ಯನ್ ಛಾಯಾಗ್ರಹಣವಿದೆ. ಶೈನ್ ಟಾಮ್ ಚಾಕೋ, ಸಮುದ್ರಖನಿ, ಸಾಯಿಕುಮಾರ್, ಜಾನ್ಸಿ, ಶಮಾ ಖಾಸೀಂ, ರಾಜಶೇಖರ್ ಅನಿಂಗಿ, ರವಿ ತೇಜ ನನ್ನಿಮಾಲಾ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣ ಈ ಚಿತ್ರಕ್ಕಿದೆ. ಗೀತಾ ಆರ್ಟ್ಸ್‌ ಹಾಗೂ ಸ್ಟಾರ್‌ ಸ್ಟುಡಿಯೋಸ್‌ ಈ ಚಿತ್ರವನ್ನು ಹಂಚಿಕೆ ಮಾಡಿದೆ.

ಇದನ್ನೂ ಓದಿ: Weekend with Ramesh : ರಮ್ಯಾ ಇಂಗ್ಲಿಷ್‌ ಎಪಿಸೋಡ್‌ ಬಗ್ಗೆ ಕೊನೆಗೂ ಮೌನ ಮುರಿದ ರಮೇಶ್ ಅರವಿಂದ್. ಹೇಗಿತ್ತು ಫಸ್ಟ್ ರಿಯಾಕ್ಷನ್‌!

Leave A Reply

Your email address will not be published.