7th pay commission : ಸರ್ಕಾರಿ ನೌಕರರಿಗೆ ಸಿಗಲಿದೆ ಭರ್ಜರಿ ಗುಡ್ ನ್ಯೂಸ್ ; ವೇತನದೊಂದಿಗೆ ಅರಿಯರ್ಸ್ ಲಭ್ಯ!!

7th pay DA Arrears: ಈ ಹಿಂದೆ ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಶುಭ ಸುದ್ದಿ ನೀಡಿ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ. ಆನಂತರ ಕೇಂದ್ರ ಸರ್ಕಾರ ಸರ್ಕಾರಿ ನೌಕರರ (Central Govt Employees) ಎಚ್‌ಆರ್‌ಎ (HRA) ಅಂದರೆ, ಮನೆ ಬಾಡಿಗೆ ಭತ್ಯೆಯನ್ನೂ ಹೆಚ್ಚಿಸಲು (7th pay DA Arrears ) ಚಿಂತನೆ ನಡೆಸಿದ್ದು, ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ಘೋಷಣೆ ಮಾಡಲಿದೆ ಎಂದು ಕೂಡ ಹೇಳಲಾಗಿತ್ತು. ಇದೀಗ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿಸುದ್ದಿ ಇಲ್ಲಿದೆ.

ಹೌದು, ಮೋದಿ ಸರ್ಕಾರ ಸರ್ಕಾರಿ ನೌಕರರಿಗೆ (7th pay commission) ಭರ್ಜರಿ ಗಿಫ್ಟ್ ನೀಡಲು (Good news from Central Govt) ಮುಂದಾಗಿದೆ. ಶೀಘ್ರವೇ ಬಾಕಿ ಇರುವ ಡಿಎ ಅರಿಯರ್ಸ್ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಈ ಮೊತ್ತ ಸರ್ಕಾರಿ ನೌಕರರ ಖಾತೆಗೆ ಶೀಘ್ರವೇ ಜಮಾ ಆಗಲಿದೆ ಎಂದು ಹೇಳಲಾಗಿದೆ.

ಈ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳದ (DA hike) ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 4 ರಷ್ಟು ಏರಿಕೆ ಮಾಡಲಾಗಿದೆ. ಹೀಗಾಗಿ ನೌಕರರ ತುಟ್ಟಿಭತ್ಯೆ ಶೇ.42ಕ್ಕೆ ಏರಿಕೆ ಆಗಿದೆ. ಆದರೆ, ಇದೀಗ ಕೇಂದ್ರ ನೌಕರರಿಗೆ ಮತ್ತೊಂದು ಉಡುಗೊರೆ ಸಿಗಲಿದೆ.
ತುಟ್ಟಿಭತ್ಯೆ ಹೆಚ್ಚಳದ ನಂತರ ಮೂಲ ವೇತನದಲ್ಲಿ ಹೆಚ್ಚಳವಾಗುವುದು. ಅಲ್ಲದೆ ಬಾಕಿ ಅರಿಯರ್ಸ್ ಮೊತ್ತವನ್ನು ಕೂಡಾ ಸರ್ಕಾರ ಶೀಘ್ರವೇ ಬಿಡುಗಡೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಖಾತೆಗಳಿಗೆ ತುಟ್ಟಿ ಭತ್ಯೆ ಬಾಕಿ ಪಾವತಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜನವರಿ 2023 ರಿಂದ ಫೆಬ್ರವರಿವರೆಗೆ ಅಂದ್ರೆ ಎರಡು ತಿಂಗಳವರೆಗೆ, ಬಾಕಿ ಮೊತ್ತವನ್ನು ಸರ್ಕಾರಿ ನೌಕರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಹೇಳಲಾಗಿದ್ದು, ನೌಕರರು ತುಟ್ಟಿ ಭತ್ಯೆ ಬಾಕಿಯ ನಿರೀಕ್ಷೆಯಲ್ಲಿದ್ದಾರೆ.

ಡಿಎ ಹೆಚ್ಚಳದ (DA hike) ನಂತರ, ದೇಶಾದ್ಯಂತ ಎಲ್ಲಾ ಉದ್ಯೋಗಿ ಸಂಸ್ಥೆಗಳು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿವೆ. ಇದರಿಂದ ಉದ್ಯೋಗಿಗಳ ಸಂಬಳದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗುವ ಸಾಧ್ಯತೆ ಇದ್ದು, ಈ ಕಾರಣದಿಂದ ನೌಕರರ ಆಗ್ರಹ ಬಹಳ ಸಮಯದಿಂದ ಕೇಳಿ ಬರುತ್ತಿದೆ. ಹಾಗಾಗಿ ಸರ್ಕಾರವು ಫಿಟ್‌ಮೆಂಟ್ ಅಂಶವನ್ನು 2.6 ರಿಂದ 3.7 ಪಟ್ಟು ಹೆಚ್ಚಿಸಬಹುದು ಎಂಬ ನಿರೀಕ್ಷೆ ಇದೆ. ಆನಂತರ ಮೂಲ ವೇತನದಲ್ಲಿಯೂ ಏರಿಕೆಯನ್ನು ನಿರೀಕ್ಷಿಸುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರದಲ್ಲೇ ಸಂತಸದ ಸುದ್ದಿಯನ್ನು ಘೋಷಿಸಬಹುದು ಎಂದು ಹೇಳಲಾಗುತ್ತಿದೆ.

Leave A Reply

Your email address will not be published.