Ajay Devagan: ತೆರೆಗೆ ಅಪ್ಪಳಿಸಲಿದೆ ‘ಮೈದಾನ್ ‘ ಟೀಸರ್ ರಿಲೀಸ್! ಅಜಯ್ ದೇವಗನ್ ಸಿನಿಮಾಗೆ ರಕ್ಷಿತ್ ಶೆಟ್ಟಿ ಬೆಂಬಲ

Ajay Devagan : ಭಾರತದ ಒಬ್ಬ ಪ್ರಮುಖ ಚಿತ್ರನಟ, ನಿರ್ದೇಶಕ, ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡ ಅಜಯ್ ದೇವ್ ಗನ್(Ajay Devagan) 1991 ರಲ್ಲಿ ಫೂಲ್ ಔರ್ ಕಾಂಟೆ ಎಂಬ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಪಾದಾರ್ಪಣೆ ಮಾಡಿದರು.ತಮ್ಮ ಚೊಚ್ಚಲ ಚಿತ್ರದ ನಟನೆಗೆ ಫಿಲ್ಮ್ ಫೇರ್ ಶ್ರೇಷ್ಠನಟ ಪ್ರಶಸ್ತಿಗೆ ಕೂಡ ಭಾಜನರಾಗಿದ್ದಾರೆ.

 

ಒಂದೆಡೆ ಅಜಯ್ ದೇವಗನ್ ನಟನೆಯ ‘ಭೋಲಾ’ ಸಿನಿಮಾ ರಿಲೀಸ್ ಆಗಿ ಸಂಚಲನ ಮೂಡಿಸಿದೆ. ಮತ್ತೊಂದು ಕಡೆ ‘ಮೈದಾನ್’ ಸಿನಿಮಾ ಟೀಸರ್ ಧೂಳೆಬ್ಬಿಸಿದ್ದು, ಅಜಯ್ ದೇವಗನ್ ಕನಸಿನ ಸಿನಿಮಾ ಇದಾಗಿದ್ದು, ಭಾರತೀಯ ಫುಟ್ಬಾಲ್‌ನ ‘ಸುವರ್ಣ ಯುಗ’ದ ಕಥೆಯನ್ನು ಈ ಚಿತ್ರದಲ್ಲಿ 60ರ ದಶಕದ ಭಾರತ ಫುಟ್‌ಬಾಲ್ ತಂಡದ ಕೋಚ್ ಸೈಯದ್ ಅಬ್ದುಲ್ ರಹೀಂ ಹೋರಾಟದ ಕಥೆ ಇದಾಗಿದೆ.

ಫುಟ್ಬಾಲ್ ಕ್ರೀಡೆಯನ್ನ ಆಧರಿಸಿದ ʼಮೈದಾನ್ʼ ಸಿನಿಮಾ ಬಹಳ ಹಿಂದೆಯೇ ತೆರೆ ಕಾಣಬೇಕಿತ್ತು. ಆದರೆ, ಅನೇಕ ಕಾರಣಗಳಿಂದ ರಿಲೀಸ್ ಆಗುವುದು ತಡವಾಗಿತ್ತು. ಸದ್ಯ, ಇದೀಗ, ರಿಲೀಸ್ ಡೇಟ್ (Release Date)ಜೊತೆಗೆ ಸಿನಿಮಾ ಟೀಸರ್( Cinema Teaser) ಕೂಡ ರಿಲೀಸ್ ಆಗಿದೆ.ಅಮಿತ್ ಶರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಪ್ರಿಯಾಮಣಿ, ಗಜ್ರಾಜ್ ರಾವ್, ರುದ್ರಾನಿಲ್ ಘೋಷ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಜೂನ್ 23ಕ್ಕೆ ಸಿನಿಮಾ ತೆರೆಗೆ ಬರಲಿದ್ದು, ಅಭಿಮಾನಿಗಳನ್ನು ರಂಜಿಸುವ ನಿರೀಕ್ಷೆ ಹುಟ್ಟು ಹಾಕಿದೆ. ಕನ್ನಡ ನಟ ರಕ್ಷಿತ್ ಶೆಟ್ಟಿ (Rakshith Shetty) ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಲ್ಲದೇ ಈ ಚಿತ್ರತಂಡಕ್ಕೆ ಸಾಥ್ ನೀಡಿ ಬೆಂಬಲ ಸೂಚಿಸಿದ್ದಾರೆ. ಟೀಸರ್ ಶೇರ್ ಮಾಡಿದ ಬಳಿಕ ಇಡೀ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

Leave A Reply

Your email address will not be published.