Home Breaking Entertainment News Kannada Pushpa 2 : ಪುಷ್ಪ 2 ಸಿನಿಮಾ ಶೂಟಿಂಗ್‌ ಸ್ಥಗಿತ!!

Pushpa 2 : ಪುಷ್ಪ 2 ಸಿನಿಮಾ ಶೂಟಿಂಗ್‌ ಸ್ಥಗಿತ!!

Pushpa 2

Hindu neighbor gifts plot of land

Hindu neighbour gifts land to Muslim journalist

Pushpa 2 : ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (rashmika mandanna) ನಟನೆಯ ಪುಷ್ಪ ಚಿತ್ರ ಎಲ್ಲೆಡೆ ಜನಪ್ರಿಯತೆ ಗಳಿಸಿದೆ. ಸಖತ್ ಹಿಟ್ ಆಗಿದ್ದು, ಜನರು ಸಿನಿಮಾವನ್ನು ಮೆಚ್ಚಿ, ಇದೀಗ Pushpa 2 ಕೂಡ ತೆರೆ ಮೇಲೆ ಬರಲು ಸಜ್ಜಾಗಿದೆ. ಸಿನಿಪ್ರಿಯರು ಪುಷ್ಪಾ 2 ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಆದರೆ, ಇದೀಗ ಅವರಿಗೆ ಬೇಸರದ ಸಂಗತಿ ಇಲ್ಲಿದೆ. ಈಗಾಗಲೇ ಸಿನಿಮಾ ಶೂಟಿಂಗ್ ನಡೆಯುತ್ತಿದೆ ಎಂಬ ವಿಚಾರ ಎಲ್ಲೆಡೆ ವೈರಲ್ ಆಗಿದೆ. ಹಾಗಿದ್ದರೆ ಸಿನಿಮಾ ಬೇಗನೆ ಬಿಡುಗಡೆ ಆಗುತ್ತದೆ ಎಂದುಕೊಂಡಿದ್ದ ಫ್ಯಾನ್ಸ್ ಗೆ ನಿರಾಸೆ ಉಂಟಾಗಿದೆ.

ಪುಷ್ಪ 2 ಸಿನಿಮಾದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸದ್ಯ ಈ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ. ವರದಿ ಪ್ರಕಾರ, ಚಿತ್ರದ ಒಂದು ಭಾಗವನ್ನು ವಿಶಾಖಪಟ್ಟಣದಲ್ಲಿ ಚಿತ್ರೀಕರಿಸಲಾಗಿದೆ. ಆ ನಂತರ ಶೂಟಿಂಗ್ ಮತ್ತೆ ಆರಂಭಿಸಿಲ್ಲ ಎನ್ನಲಾಗಿದೆ.

ನಿರ್ದೇಶಕ ಸುಕುಮಾರ್ ಪುಷ್ಪ 2 ಚಿತ್ರದ ಟೀಸರ್ (pushpa -2 teaser) ಮೇಲೆ ಕೆಲಸ ಮಾಡುತ್ತಿದ್ದಾರೆ. ಇದು ಏಪ್ರಿಲ್ ನಲ್ಲಿ ಅಲ್ಲು ಅರ್ಜುನ್ ಹುಟ್ಟುಹಬ್ಬದಂದು (allu arjun birthday) ಬಿಡುಗಡೆಯಾಗುತ್ತದೆ ಎನ್ನಲಾಗಿದೆ. ಆದರೆ, ನಿರ್ದೇಶಕರು ಇಲ್ಲಿಯವರೆಗೆ ಚಿತ್ರೀಕರಣ ಮಾಡಿದ್ದನ್ನು ಮತ್ತೆ ಹೊಸದಾಗಿ ಚಿತ್ರೀಕರಿಸಬೇಕೆಂದು ಬಯಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಹಿಂದಿಯಲ್ಲಿ ಸಿನಿಮಾ ಹಿಟ್ ಆಗಿರುವುದನ್ನು ಪರಿಗಣಿಸಿ, ಪುಷ್ಪಾ 2 ಸಿನಿಮಾಗೆ ಬಾಲಿವುಡ್ (Bollywood) ನಟಿಯನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗುತ್ತಿದೆ. ನಿರ್ಮಾಪಕ – ನಿರ್ದೇಶಕರು ಚಿತ್ರದ ಪ್ರಮುಖ ನಟಿಯರಿಗೆ ಬೇಕಿದ್ದರೆ ಬೇರೆ ಚಿತ್ರಗಳನ್ನು ತೆಗೆಯಬಹುದು ಎಂದು ಹೇಳಿದ್ದಾರೆ.

ಸದ್ಯ ಪುಷ್ಪಾ ನಾಯಕಿ ರಶ್ಮಿಕಾ ಮಂದಣ್ಣ ಅವರು ಸಾಲು ಸಾಲು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಎರಡು ಚಿತ್ರಗಳಿಗೆ ಸಹಿ ಮಾಡಿದ್ದು, ಅವುಗಳತ್ತ ಕೇಂದ್ರೀಕರಿಸಿದ್ದಾರೆ ಎನ್ನಲಾಗಿದೆ. ಇನ್ನು ಪುಷ್ಪ -2 2023 ರಲ್ಲಿ ತೆರೆ ಮೇಲೆ ಬರುವುದಿಲ್ಲ. ಬದಲಾಗಿ 2024 ರಲ್ಲಿ ಬಿಡುಗಡೆಯಾಗಲಿದೆ ಎಂದು ಮೂಲಗಳು ಹೇಳುತ್ತಿವೆ.