Toll rate hike : ಜನರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ; ದೇವನಹಳ್ಳಿ ಏರ್ ಪೋರ್ಟ್ ಹೋಗುವ ರಸ್ತೆಯ ಟೋಲ್ ದರ ಹೆಚ್ಚಳ; ಎಷ್ಟಿದೆ ಗೊತ್ತಾ?
Toll rate hike : ಬೆಂಗಳೂರು: ರಾಜ್ಯದಲ್ಲಿ ಜನರಿಗೆ ದಿನದಿಂದ ದಿನಕ್ಕೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಇಂದಿನಿಂದ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಇದೀಗ ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಿದೆ. ಯಾಕೆಂದರೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಟೋಲ್ ಬೆಲೆ ಏರಿಕೆಯಾಗಿದೆ. ಏರ್ ಪೋರ್ಟ್ ರಸ್ತೆಯ ಅಥಾಂಗ್ ಟೋಲ್ ವೇ ಪ್ರೈವೈಟ್ ಲಿಮಿಟೆಡ್ ಮಧ್ಯರಾತ್ರಿಯಿಂದಲೇ ಟೋಲ್ (Toll rate hike) ದರವನ್ನು ಹೆಚ್ಚಿಸಿದೆ. ಇದರಿಂದಾಗಿ ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಗಿದೆ. ಇನ್ನು ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೈವೇ ಉದ್ಘಾಟನೆಗೊಂಡು 15 ದಿನಗಳಲ್ಲೇ ಟೋಲ್ ದರವನ್ನು ಹೆಚ್ಚಿಸಿದೆ. ಹೀಗಾಗಿ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಹಳ್ಳಿ ಟೋಲ್ ದರದ ಮಾಹಿತಿ ಇಲ್ಲಿದೆ…!
ಕಾರು, ಜೀಪು, ವ್ಯಾನ್ ಲಘು ಮೋಟಾರು ವಾಹನ ಏಕಮುಖ ಸಂಚಾರಕ್ಕೆ 110 ರೂ. 24 ಗಂಟೆಯೊಳಗೆ ಹಿಂತಿರುಗುವ ಶುಲ್ಕ 170 ರೂ ನಿಗದಿ ಮಾಡಲಾಗಿದೆ. ಇಷ್ಟು ದಿನ ಏಕಮುಖ ಸಂಚಾರಕ್ಕೆ 105 ರೂ. ಹಾಗೂ ದ್ವಿಮುಖ ಸಂಚಾರ 165 ರೂಪಾಯಿ ಇತ್ತು. 3,555 ರೂಪಾಯಿಯಿದ್ದ ಮಾಸಿಕ ಪಾಸ್ ಶುಲ್ಕ 3,755 ರೂಪಾಯಿಗೆ ಏರಿಕೆಯಾಗಿದೆ.
ಲಘು ವಾಣಿಜ್ಯ ವಾಹನ ಲಘು ಸರಕು ವಾಹನ ಮಿನಿ ಬಸ್- ಏಕಮುಖ ಸಂಚಾರಕ್ಕೆ 165 ರಿಂದ 170 ರೂ. ಗೆ ಏರಿಕೆ. ವಾಪಸ್ ಆಗುವ ಶುಲ್ಕ 245 ರಿಂದ 260 ರೂಪಾಯಿಗೆ ಏರಿಕೆ. ಮಾಸಿಕ ಪಾಸ್ 5465 ರೂ. ಯಿಂದ 5745 ರೂ. ಗೆ ಹೆಚ್ಚಳವಾಗಿದೆ.
ಟ್ರಕ್ ಬಸ್ 2 ಆಕ್ಸೆಲ್ ವಾಹನಗಳ ಏಕಮುಖ ಸಂಚಾರಕ್ಕೆ 330 ರಿಂದ 345 ರೂ. ಗೆ ಏರಿಕೆಯಾಗಿದ್ದು, ದ್ವಿಮುಖ ಸಂಚಾರಕ್ಕೆ 495 ರೂ. ನಿಂದ 520 ರೂ. ಗೆ ಏರಿಕೆ ಮಾಡಲಾಗಿದೆ. 10,990 ರೂಪಾಯಿ ಇದ್ದ ಮಾಸಿಕ ಪಾಸ್ 11,550 ರೂ. ಆಗಿದೆ. ಭಾರೀ ವಾಹನಗಳು 03 ರಿಂದ 06 ಅಕ್ಸೆಲ್ ವಾಹನಗಳ ಏಕಮುಖ ಸಂಚಾರಕ್ಕೆ 500 ರಿಂದ 525 ರೂ. ದ್ವಿಮುಖ ಸಂಚಾರ 750 ರೂ. ನಿಂದ 790 ರೂ. 16,680 ರೂ. ಇದ್ದ ಮಾಸಿಕ ಪಾಸ್ 17, 525 ರೂ. ಜಾಸ್ತಿಯಾಗಿದೆ.
ಅಂದಹಾಗೆ ಭಾರೀ ಗಾತ್ರದ ವಾಹನಗಳಿಗೆ 07 ಆಕ್ಸೆಲ್ ಹಾಗೂ ಅದಕ್ಕಿಂತ ಹೆಚ್ಚು ಆಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ 650 ರಿಂದ 685 ರೂ. ಗೆ ಏರಿಕೆ. ದ್ವಿಮುಖ 980 ರೂ. ನಿಂದ 1025 ರೂ. ಗೆ ಏರಿಕೆ. 21, 730 ರೂ. ಇದ್ದ ಮಾಸಿಕ ಪಾಸ್ 22,830 ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಸ್ಥಳೀಯ ಮಾಸಿಕ ಪಾಸ್ 315 ರಿಂದ 330 ರೂಪಾಯಿಗೆ
ಹೆಚ್ಚಳವಾಗಿದೆ. ಒಟ್ಟಾರೆಯಾಗಿ ಅಗತ್ಯ ವಸ್ತುಗಳ ಜೊತೆ ವಾಹನ ಸವಾರರಿಗೆ ಟೋಲ್ ದರ ಹೆಚ್ಚಾಗಿದ್ದು, ಜನರ ಕೆಂಗಣ್ಣಿಗೆ ಗುರಿಯಾಗಿರುವುದಂತೂ ಸತ್ಯ.