Poker Game : ಆನ್‌ಲೈನ್ ಗೇಮ್ ಆಡಿ ಬರೋಬ್ಬರಿ 9 ಕೋಟಿ ಕಳೆದುಕೊಂಡ ಸ್ಟಾರ್ ಫುಟ್ ಬಾಲ್ ಆಟಗಾರ!! ಮುಂದೇನಾಯ್ತು?
Poker Game : ಪೋಕರ್ ಅಥವಾ ಇಸ್ಪೀಟ್ ಆಟವನ್ನು (Poker Game) ಹಲವರು ಮೋಜಿಗಾಗಿ ಆಡುತ್ತಾರೆ. ಕೆಲವರು ಗೆದ್ದು ಹಣ ಬಾಚಿಕೊಂಡರೆ ಕೆಲವರು ಸೋತು ಕೈಚೆಲ್ಲಿ ಕೂರುತ್ತಾರೆ. ಈ ಪೋಕರ್ ಆಟದಿಂದ ಸಾವಿರಾರು ಕುಟುಂಬಗಳು ನಿರಾಶ್ರಿತವಾಗಿವೆ. ಒಳ್ಳೆಯ ಆಟವಲ್ಲದ ಕಾರಣ ಹಣಕ್ಕಾಗಿ ಪೋಕರ್ ಆಡುವುದನ್ನು ಅಪರಾಧ ಎಂದು ಕಾನೂನಿನಲ್ಲಿ ಹೇಳಲಾಗಿದೆ.
ಪೋಕರ್ ಆಟ ಅಭಿವೃದ್ಧಿಗೊಂಡು ಹಲವು ಆನ್ ಲೈನ್ ಗೇಮಿಂಗ್ (online gaming) ಪ್ರಾರಂಭವಾಗಿವೆ. ಅದರಲ್ಲಿ ರಮ್ಮಿ ಕೂಡ ಒಂದು. ಆನ್‌ಲೈನ್ ರಮ್ಮಿ (rummi) ಹೆಸರಿನಲ್ಲಿ ಮೊಬೈಲ್ ಫೋನ್‌ಗಳ ಮೂಲಕ ಬೆಟ್ಟಿಂಗ್ ದಂಧೆ ಎಗ್ಗಿಲ್ಲದೆ ನಡೆಯುವಂತಾಗಿದೆ. ಅದೆಷ್ಟೋ ಜನರು ಈ ಆಟಕ್ಕೆ ಮರುಳಾಗಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅಂತೆಯೇ ಇತ್ತೀಚೆಗೆ ಈ ಆಟಕ್ಕೆ ಸ್ಟಾರ್ ಫುಟ್ಬಾಲ್ ಆಟಗಾರ (star football player) 9 ಕೋಟಿ ಕಳೆದುಕೊಂಡಿದ್ದಾರೆ.
ಬ್ರೆಜಿಲ್ ಫುಟ್ಬಾಲ್ ತಾರೆ ನೇಮರ್ ಜೂನಿಯರ್ (Brazil Football Star Neymar Junior) ಆನ್‌ಲೈನ್ ಪೋಕರ್ ಆಟವಾಡಿ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಜೂನಿಯರ್ ಪ್ಯಾರಿಸ್ ಸೇಂಟ್ ಜರ್ಮೈನ್ ಪರ ಆಡುತ್ತಿರುವ ಸಾಕರ್ ಹೀರೋ, ಆನ್ಲೈನ್ನಲ್ಲಿ ಇಸ್ಪಿಟ್ ಆಡಿ ತಮ್ಮ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ.
ನೇಮರ್ ಮೊಣಕಾಲಿನ ಗಾಯದಿಂದಾಗಿ ಫುಟ್‌ಬಾಲ್ ಆಟದಿಂದ ಬ್ರೆಕ್ ತೆಗೆದುಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ. ಫ್ರಾನ್ಸ್ ಮೂಲದ ಆನ್‌ಲೈನ್ ಪೋಕರ್ ಗೇಮ್‌ನ ಸದಸ್ಯರಾಗಿರುವ ನೇಮರ್ ಆಟವಿಲ್ಲದೆ ಬೇಸರವೆನಿಸಿ, ಬುಧವಾರ ರಾತ್ರಿ ಆನ್‌ಲೈನ್ ಜೂಜು ಆಡಿದ್ದಾರೆ. ಆಡಿದ್ದೇ ತಡ ಪೋಕರ್ ಆಟವನ್ನು ಆಡಿದ ಒಂದೇ ಒಂದು ಗಂಟೆಯಲ್ಲಿ 8,80,000 ಪೌಂಡ್‌ಗಳನ್ನು ಕಳೆದುಕೊಂಡಿದ್ದಾರೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ 8 ಕೋಟಿ, 95 ಲಕ್ಷ 32 ಸಾವಿರ ರೂಪಾಯಿ. ಅಂದರೆ ಸುಮಾರು 9 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಕೋಟಿಗಟ್ಟಲೆ ಹಣ ಕಳೆದುಕೊಂಡ ಆಟಗಾರ ಗಳಗಳನೆ ಅತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ನೇಮರ್ ಅಳುತ್ತಿರುವ, ಅರಚುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೇಮರ್ ಆಸ್ತಿ ಮೌಲ್ಯ, ವಾರ್ಷಿಕ ಆದಾಯ 500 ಕೋಟಿಗೂ ಹೆಚ್ಚಿದ್ದರೂ ಕೋಟಿಗಟ್ಟಲೆ ಹಣ ಒಂದೇ ಬಾರಿಗೆ ಕಳೆದುಕೊಂಡಾಗ ಮಗುವಿನಂತೆ ಅತ್ತಿದ್ದಾರೆ ಎನ್ನಲಾಗಿದೆ. ಸದ್ಯ ಈ ಘಟನೆ ಎಲ್ಲರಿಗೂ ಪಾಠ ಎಂದೇ ಹೇಳಬಹುದು. ಪೋಕರ್ ಅಥವಾ ಇಸ್ಪೀಟ್ ಆಡುವ ಪ್ರತಿಯೊಬ್ಬರಿಗೂ ಎಚ್ಚರಿಕೆಯ ಸಂದೇಶವಿದು.