SSLC Grace Mark : ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೇ ನಿಮಗಿದು ತಿಳಿದಿದೆಯೇ? ಗ್ರೇಸ್ ಮಾರ್ಕ್ ಕೊಡಲು ಕಾರಣ ಏನೆಂದು?
SSLC grace mark: 2022-23ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯು (SSLC Annual Exam 2023 ) ಈಗಾಗಲೇ ಆರಂಭವಾಗಿದ್ದು, ದಿನಾಂಕ 31-03-2023 ರಿಂದ 15-04-2023ರವರೆಗೆ ನಡೆಯಲಿದ್ದು, ಈ ನಡುವೆ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಸಿಹಿಸುದ್ದಿ ನೀಡಿದೆ.
2022-23ನೇ ಸಾಲಿನ ಎಸ್ ಎಸ್ ಎಲ್ ಸಿ (SSLC ) ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ (SSLC Students)ಈ ಬಾರಿ ಕೂಡ ಕೊರೊನಾ (COVID) ಬ್ಯಾಚ್ ಎಂದು ಪರಿಗಣಿಸಿ 26 ಗ್ರೇಸ್ ಅಂಕ ನೀಡಲಿದೆ (SSLC grace mark). ಈ ಬಗ್ಗೆ ಎಸ್‌ಎಸ್ ಎಲ್ ಸಿ ಬೋರ್ಡ್ ನಿರ್ದೇಶಕ ರಾಮಚಂದ್ರ ಅವರು ಮಾಹಿತಿ ನೀಡಿದ್ದು, ಈ ಬಾರಿಯೂ ಕೂಡ ಕೊರೊನಾ ಬ್ಯಾಚ್ ಆಗಿದ್ದು, ಈ ಕಾರಣದಿಂದ ಶೇ.10 ರಷ್ಟು ಗ್ರೇಸ್ ಅಂಕ ನೀಡಲಾಗುವುದು. ಆದರೆ, ಮೂರು ವಿಷಯಗಳಿಗೆ ಮಾತ್ರ ಗ್ರೇಸ್ ಮಾರ್ಕ್ ನೀಡಲಾಗುತ್ತದೆ ಎಂದಿದ್ದಾರೆ. ಈ ಬಾರಿ ಒಟ್ಟು 26 ಗ್ರೇಸ್ ಅಂಕಗಳನ್ನು SSLC ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಹಾಗಾದರೆ ಈ ಅಂಕ ಪಡೆಯಲು ಯಾರು ಅರ್ಹರು?
ಕಳೆದ ಎರಡು ವರ್ಷಗಳಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗುತ್ತಿದ್ದು, ಆದರೆ ಈ ಅಂಕವನ್ನು ಯಾಕೆ ನೀಡಲಾಗುತ್ತಿದ್ದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೆ ಉತ್ತರ ಇಲ್ಲಿವೆ ನೋಡಿ.
ಕಳೆದ ಎರಡೂ ವರ್ಷವೂ ಕೂಡಾ ಕೋವಿಡ್ (Covid 19)ಸಾಂಕ್ರಾಮಿಕ ಖಾಯಿಲೆಯ ಪರಿಣಾಮ ವಿದ್ಯಾರ್ಥಿಗಳಿಗೆ ಓದಿನ ಕಡೆಗೆ ಹೆಚ್ಚಿನ ನಿಗಾ ವಹಿಸಲು ಆಗದೇ ಇದ್ದ ಹಿನ್ನೆಲೆ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಗ್ರೇಸ್ Grace Marks) ಅನ್ನು ನೀಡಲು ಪ್ರಾರಂಭ ಮಾಡಲಾಯಿತು. ಪ್ರಸ್ತುತ ಕೋವಿಡ್ ಹಾವಳಿ ಹೆಚ್ಚು ಇಲ್ಲದೇ ಇದ್ದರೂ ಕೂಡ ಈ ಕ್ರಮವನ್ನು ಮುಂದುವರಿಸಲಾಗಿದ್ದು, ಈ ವರ್ಷವೂ ವಿದ್ಯಾರ್ಥಿಗಳಿಗೆ 26 ಅಂಕಗಳನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಹಾಗಿದ್ರೆ, ಯಾರಿಗೆ ಈ ಗ್ರೇಸ್ ಅಂಕ ಸಿಗುತ್ತೆ? ಅಂತ ತಿಳಿಯ ಹೊರಟರೆ, ಯಾವೆಲ್ಲ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸಿ ಫೇಲ್ ಆಗುವ ಹಂತದಲ್ಲಿರುತ್ತಾರೋ ಅವರಿಗೆ ಈ ಗ್ರೇಸ್ ಅಂಕವನ್ನು ನೀಡಲಾಗುತ್ತದೆ. ಪಾಸ್ ಆಗಲು ಅಂಕ ಬೇಕಿದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ಈ ಗ್ರೇಸ್ ಅಂಕ ನೀಡಲಾಗುತ್ತದೆ. ಇದಲ್ಲದೆ, ಭಾಷಾವಾರು ವಿಷಯಗಳಿಗೆ ಮಾತ್ರ ಈ ಅಂಕ ಕೊಡಲಾಗುತ್ತದೆ. ಇದರ ಜೊತೆಗೆ ಯಾವುದಾದರೂ 3 ವಿಷಯಗಳಿಗೆ ಮಾತ್ರ ಇದು ಅನ್ವಯ ಆಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಗಮನಿಸಬೇಕು. ಇದರ ಜೊತೆಗೆ ಹಿಂದಿನ ವರ್ಷ ಪರೀಕ್ಷೆ ಬರೆದರೂ ಕೂಡ ವಿದ್ಯಾರ್ಥಿಗಳು ಪಾಸ್ ಆಗಿರದೇ ಇದ್ದಲ್ಲಿ ಆ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುತ್ತಿದ್ದರೆ ಅವರಿಗೂ ಕೂಡ ಈ ಗ್ರೇಸ್ ಅಂಕ ಅನ್ವಯವಾಗುತ್ತದೆ. ಆದರೆ, ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಈ ಗ್ರೇಸ್ ಮಾರ್ಕ್ಸ್ ಸಿಗುವುದಿಲ್ಲ ಎಂಬುದನ್ನು ಗಮನಿಸಬೇಕು.
ಇದನ್ನೂ ಓದಿ: SSLC Annual Exam 2023: SSLC ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ; ಈ ವರ್ಷ ನಿಮಗೆ ಸಿಗಲಿದೆ ಗ್ರೇಸ್ ಮಾರ್ಕ್ಸ್ !!