Priyanka Chopra : ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ಮದುವೆ! ಪತಿ ಮತ್ತು ಮಗಳೊಂದಿಗೆ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಆಗಮನ!

Priyanka Chopra : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಅವರು ವಿವಾಹವಾಗಲಿದ್ದಾರೆ ಎಂಬ ವದಂತಿಗಳು ಈಗಾಗಲೇ ಫೋಟೋಗಳು ಮತ್ತು ವೀಡಿಯೊಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಇದರ ಜೊತೆಗೆ ಪ್ರಿಯಾಂಕಾ ಚೋಪ್ರಾ (Priyanka Chopra) ತನ್ನ ಕುಟುಂಬದೊಂದಿಗೆ ಭಾರತಕ್ಕೆ ಬಂದಿರುವುದು ಇದು ನಿಜವೆಂದು ಪ್ರೂವ್‌ ಮಾಡುವಂತೆ ಅರಿವಾಗುತ್ತಿದೆ.

 

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿಯೊಂದಿದೆ ತನ್ನ ಮನೆಗೆ ಆಗಮಿಸಿದ್ದಾರೆ. ಈ ತಾರಾ ಜೋಡಿ ಏಕಾಏಕಿ ಭಾರತಕ್ಕೆ ಬಂದಿದ್ದು ಯಾಕೆ ಎಂಬುದಕ್ಕೆ ಫುಲ್ ಕ್ಲಾರಿಟಿ ಬಂದಿದೆ. ಪ್ರಿಯಾಂಕಾ ಚೋಪ್ರಾ ಅವರ ಸಹೋದರಿ ಪರಿಣಿತಿ ಚೋಪ್ರಾ ಅವರ ಮದುವೆಗಾಗಿ ಈ ಸ್ಟಾರ್ ಜೋಡಿ ಅಮೆರಿಕದಿಂದ ಭಾರತಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ಗಘವ್ ಚಡ್ಡಾ ವಿವಾಹವಾಗಲಿದ್ದಾರೆ ಎಂಬ ವದಂತಿಗಳು, ಫೋಟೋಗಳು ಮತ್ತು ವೀಡಿಯೊಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈಗ, ಪ್ರಿಯಾಂಕಾ ಚೋಪ್ರಾ ಅವರ ಕುಟುಂಬದ ಆಗಮನದೊಂದಿಗೆ, ಅದು ನಿಜವೆಂದು ಕಾಣುತ್ತಿದೆ.

ಪ್ರಿಯಾಂಕಾ ಚೋಪ್ರಾ ತನ್ನ ಪತಿ ನಿಕ್ ಜೋನಾಸ್ ಅವರೊಂದಿಗೆ ಭಾರತಕ್ಕೆ ಆಗಮಿಸಿದಾಗ ಭಾರತದಲ್ಲಿ ಸೆಲೆಬ್ರಿಟಿಯಾಗಿರುವ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ವಿವಾಹದ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಅಂದ ಹಾಗೆ ಈ ಜೋಡಿ ತಮ್ಮ ಮದುವೆಯ ಬಗ್ಗೆ ಏನೂ ಹೇಳದೇ ಇದ್ದರೂ, ಪ್ರಿಯಾಂಕಾ ಹಾಗೂ ನಿಕ್‌ ಅವರ ಆಗಮನ ಇದಕ್ಕೆ ಊಹಾಪೋಹಕ್ಕೆ ಪುಷ್ಠಿ ನೀಡಿದೆ ಎಂದೇ ಹೇಳಬಹುದು.

ವಿಶೇಷ ವಿಮಾನದಲ್ಲಿ ಮುಂಬೈನಲ್ಲಿ ಪ್ರಿಯಾಂಕಾ ಚೋಪ್ರಾ ತನ್ನ ಪತಿ ಮತ್ತು ಮಗಳೊಂದಿಗೆ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ಮದುವೆಯ ಸುದ್ದಿ ಮತ್ತೆ ವೇಗ ಪಡೆದುಕೊಂಡಿದೆ.

ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಸ್ಟಾರ್ ಹೀರೋಯಿನ್ ಪ್ರಿಯಾಂಕಾ ಚೋಪ್ರಾ ಮಗಳು ಮಾಲತಿಯನ್ನು ಮಡಿಲಲ್ಲಿ ಕೂರಿಸಿಕೊಂಡು ತೆಗೆದಿರುವ ಫೋಟೋ ಎಲ್ಲ ಕಡೆ ವೈರಲ್‌ ಆಗಿದೆ. ಇಷ್ಟು ಮಾತ್ರವಲ್ಲದೇ, ತನ್ನ ಮಗುವಿಗೆ ಜನ್ಮ ನೀಡಿದ ಬಳಿಕ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಭಾರತಕ್ಕೆ ಬಂದ ಪ್ರಿಯಾಂಕಾ ಚೋಪ್ರಾ ತನ್ನ ಗಂಡ ನಿಕ್‌ ಹಾಗೂ ಮಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಗುಲಾಬಿ ಬಣ್ಣದ ಕೋ-ಆರ್ಡ್ ಸೆಟ್‌ನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಕ್ರಾಪ್ ಟಾಪ್‌ನಲ್ಲಿ ಸಿಂಗಲ್ ಲೆಗ್ ಕಟ್ ವಿನ್ಯಾಸದೊಂದಿಗೆ ತನ್ನ ಥಾಂಗ್ ಅನ್ನು ತೋರಿಸುತ್ತಿರುವ ಆಕೆಯ ಸೌಂದರ್ಯವು ನೆಟಿಜನ್‌ಗಳನ್ನು ನಿಜಕ್ಕೂ ಮೆಚ್ಚುಗೆ ಸೂಚಿಸಿದ್ದಾರೆ. ಕಾಲಿಗೆ ಬೂಟುಗಳು ಮತ್ತು ಕಪ್ಪು ಸನ್‌ ಗ್ಲಾಸ್‌ ಕೂಡಾ ಧರಿಸಿದ್ದು ಸೌಂದರ್ಯ ಇಮ್ಮಡಿ ಮಾಡಿಸಿದ್ದಂತಿದ್ದು. ಏತನ್ಮಧ್ಯೆ, ನಿಕ್ ನೀಲಿ ಹೂಡಿ ಮತ್ತು ಡೆನಿಮ್ ಜೀನ್ಸ್‌ನಲ್ಲಿ ಕಾಣಿಸಿಕೊಂಡರು.

ಪ್ರಿಯಾಂಕಾ ಮತ್ತು ನಿಕ್ ಒಟ್ಟಿಗೆ ಇರುವ ಫೋಟೋಗಳನ್ನು ನೋಡಿದ ನೆಟ್ಟಿಗರು ರಾಘವ್ ಮತ್ತು ಪರಿಣಿತಿ ಮದುವೆ ಫಿಕ್ಸ್ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಶೀಘ್ರದಲ್ಲೇ ಮದುವೆಯ ಘೋಷಣೆಯಾಗುವ ನಿರೀಕ್ಷೆಯಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದೇ ವಿಷಯದ ಕುರಿತು ಕಾಮೆಂಟ್‌ಗಳು ಹರಿದಾಡುತ್ತಿವೆ.

ಇದನ್ನೂ ಓದಿ: Rashmika Mandanna : ರಶ್ಮಿಕಾ – ವಿಜಯ್ ದೇವರಕೊಂಡ ಲವ್ ಸ್ಟೋರಿಗೆ ಹೊಸ ಟ್ವಿಸ್ಟ್! ಕಿರಿಕ್ ರಾಣಿ ಈಗ ಈ ನಟನ ಜೊತೆ ಲವ್ವಿ ಡವ್ವಿ!!

Leave A Reply

Your email address will not be published.