Mangalore University : ಮಂಗಳೂರು ಜನತೆಗೆ ಭರ್ಜರಿ ಉದ್ಯೋಗವಕಾಶ! ಮಂಗಳೂರು ಯುನಿವರ್ಸಿಟಿಯಲ್ಲಿ ಕೆಲಸ, ತಿಂಗಳಿಗೆ ರೂ.52,000 ಸಂಬಳ!
Mangalore University : ಮಂಗಳೂರಿನಲ್ಲಿ ನೌಕರಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ ಇಲ್ಲಿದೆ. ನೀವೇನಾದರೂ ಮಂಗಳೂರಿನಲ್ಲಿ ನೌಕರಿಗಾಗಿ ಹುಡುಕಾಟ ನಡೆಸುತ್ತಿದ್ದರೆ ಈ ಮಾಹಿತಿ ನಿಮಗೆ ಪ್ರಯೋಜನವಾಗಬಹುದು. ಮಂಗಳೂರು ವಿಶ್ವವಿದ್ಯಾಲಯ(Mangalore University) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ.
ಮಂಗಳೂರು ವಿಶ್ವವಿದ್ಯಾಲಯ (Mangalore University Recruitment 2023) ಒಟ್ಟು 4 ಟೆಕ್ನಿಷಿಯನ್(Technician), ಕುಕ್(Cook) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಹುದ್ದೆಯ ವಿವರ, ಖಾಲಿ ಹುದ್ದೆಗಳು,ವೇತನ ಮೊದಲಾದ ಮಾಹಿತಿ ತಿಳಿದಿರುವುದು ಅವಶ್ಯಕ.
ಹುದ್ದೆಯ ಮಾಹಿತಿ:
ಟೆಕ್ನಿಷಿಯನ್ ಗ್ರೇಡ್ II (Technician Grade 2)- 1
ಶಿಫ್ಟ್ ಮೆಕ್ಯಾನಿಕ್( Shift Mechanic)- 1
ಕುಕ್/ ಅಸಿಸ್ಟೆಂಟ್ ಕುಕ್(Cook/ Assistant Cook)- 2
ಉದ್ಯೋಗದ ಸ್ಥಳ: ಮಂಗಳೂರು
ಪ್ರಮುಖ ದಿನಾಂಕಗಳು:
ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು 10.03.2023ಆರಂಭಿಕ ದಿನವಾಗಿದ್ದು,ಏಪ್ರಿಲ್ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.
ವಿಳಾಸ:
ರಿಜಿಸ್ಟ್ರಾರ್
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳ ಗಂಗೋತ್ರಿ-574199
ದಕ್ಷಿಣ ಕನ್ನಡ
ಕರ್ನಾಟಕ
ವಿದ್ಯಾರ್ಹತೆ:(Education Qualification)
ಟೆಕ್ನಿಷಿಯನ್ ಗ್ರೇಡ್ II – ಹುದ್ದೆಗೆ 12ನೇ ತರಗತಿ ಮತ್ತು ಐಟಿಐ ಪಾಸ್ ಆಗಿರಬೇಕು. ಶಿಫ್ಟ್ ಮೆಕ್ಯಾನಿಕ್- ಹುದ್ದೆಗೆ 10ನೇ ತರಗತಿ ಆಗುರಬೇಕಾಗಿದ್ದು, ಕುಕ್/ ಅಸಿಸ್ಟೆಂಟ್ ಕುಕ್- ಹುದ್ದೆಗೆ 10ನೇ ತರಗತಿ ಪಾಸ್ ಆಗಿರಬೇಕು.
ವಯೋಮಿತಿ:(Age Limit)
ಮಂಗಳೂರು ವಿಶ್ವವಿದ್ಯಾಲಯ ನೇಮಕಾತಿ ಅಧಿಸೂಚನೆಯ ಅನುಸಾರ, ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷವಾಗಿದ್ದು ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:(Application Fee)
ಮಾಜಿ ಸೈನಿಕ, PH ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಇನ್ನುಳಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 200 ರೂ. ಆಗಿದ್ದು, ಚಲನ್/ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅರ್ಜಿ ಶುಲ್ಕ ವನ್ನ ಪಾವತಿ ಮಾಡಬೇಕಾಗುತ್ತದೆ.
ಆಯ್ಕೆ ಪ್ರಕ್ರಿಯೆ(Selection Procedures)
ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ:
ಟೆಕ್ನಿಷಿಯನ್ ಗ್ರೇಡ್ II- ಮಾಸಿಕ ₹ 27,650- 52,650
ಶಿಫ್ಟ್ ಮೆಕ್ಯಾನಿಕ್- ಮಾಸಿಕ ₹21,400-42,000
ಕುಕ್/ ಅಸಿಸ್ಟೆಂಟ್ ಕುಕ್- ಮಾಸಿಕ ₹ 18,600-32,600
ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ : Liquor : ಗಮನಿಸಿ ಮದ್ಯಪ್ರಿಯರೇ, ಈ ನಾಲ್ಕು ದಿನ ಮದ್ಯ ಸಿಗಲ್ಲ! ಕಾರಣ ಇಲ್ಲಿದೆ!