Mahavir Jayanti: ಮಹಾವೀರ ಜಯಂತಿಯ ಸಾರ್ವತ್ರಿಕ ರಜೆಯ ದಿನಾಂಕ ಬದಲು

Mahavir Jayanti : ರಾಜ್ಯ ಸರ್ಕಾರದಿಂದ ( Karnataka Government ) ಈಗಾಗಲೇ 2023ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ( Public Holiday List )ಪ್ರಕಟಿಸಲಾಗಿತ್ತು. ಇದೇ ವೇಳೆ, ಏ.3ರಂದು ಮಹಾವೀರ ಜಯಂತಿ ಪ್ರಯುಕ್ತ ರಜೆಯನ್ನು ಬದಲಾವಣೆ ಮಾಡಲಾಗಿದ್ದು, ಈ ರಜೆಯನ್ನು ಬದಲಾವಣೆ ಮಾಡಿ ಆದೇಶಿಸಿದೆ.

 

ರಾಜ್ಯ ಸರ್ಕಾರದಿಂದ ಪ್ರಕಟಿಸಿದ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯ ಕ್ರಮ ಸಂಖ್ಯೆಯಲ್ಲಿ ಮಹಾವೀರ ಜಯಂತಿ ( Mahavir Jayanthi ) ಪ್ರಯುಕ್ತ ರಜೆಯನ್ನು ದಿನಾಂಕ 03-04-2023ರಂದು ಘೋಷಣೆ ಮಾಡಲಾಗಿತ್ತು. ಸದ್ಯ, ಈ ರಜೆಯನ್ನು ದಿನಾಂಕ 04-04-2023ರಂದು ನೀಡಲಾಗಿದೆ ಎಂದು ಸೂಚಿಸಲಾಗಿದೆ.

ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಿದ್ದುಪಡಿ ಆದೇಶ ಹೊರಡಿಸಿದ್ದಾರೆ. 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ದಿನಾಂಕ 21-11-2022ರ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದ್ದು, ಈ ಹಿನ್ನಲೆಯಲ್ಲಿ ದಿನಾಂಕ 03-04-2023ರಂದು ನೀಡಲಾಗಿದ್ದ ಮಹಾವೀರ ಜಯಂತಿಯ ಸಾರ್ವತ್ರಿಕ ರಜಾ ದಿನವನ್ನು ದಿನಾಂಕ 04-04-2023ರಂದು ನೀಡಲಾಗಿದೆ.

Leave A Reply

Your email address will not be published.