Happiest Country: ವಿಶ್ವದಲ್ಲೇ ವಿಶೇಷ ದೇಶವಿದು! ಇಲ್ಲಿ ಮಗಳಿಗೆ ಆಸ್ತಿ, ಎಲ್ಲರಿಗೂ ವಸತಿ, ಊಟ ಎಲ್ಲ ಫ್ರೀ – ಫ್ರೀ!

Happiest Country : ಪ್ರತಿಯೊಂದು ದೇಶದಲ್ಲಿಯೂ ಅದರದ್ದೇ ಆದ ಸಂಪ್ರದಾಯ ಆಚರಣೆ ಇರುವುದು ಸಹಜ. ಅದೇ ರೀತಿ ಭೂತಾನ್(Bhutan)ದೇಶದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿನ ಜನರ ಜೀವನ ಶೈಲಿ ಎಲ್ಲವೂ ವಿಶೇಷ. ಇಲ್ಲಿ ಮಗನ ಬದಲಿಗೆ ಮಗಳಿಗೆ ಆಸ್ತಿ ನೀಡಲಾಗುತ್ತದೆ. ಭೂತಾನ್ ಜನಸಂಖ್ಯೆ (Bhutan Population)8 ಲಕ್ಷಕ್ಕಿಂತ ಕಡಿಮೆಯಂತೆ. ಹೀಗಿದ್ದರೂ ಕೂಡ ಈ ದೇಶದಲ್ಲಿ ಭಿಕ್ಷುಕರಾಗಲಿ(Begger), ನಿರಾಶ್ರಿತರಾಗಲಿ ಇಲ್ಲವಂತೆ. ಹಸಿವಿನಿಂದ( Hungry)ಸಾವನ್ನಪ್ಪಿದ ಪ್ರಮೇಯ ಕೂಡ ಇಲ್ಲಿಲ್ಲ.ಎಲ್ಲಕ್ಕಿಂತ ಹೆಚ್ಚಾಗಿ ಈ ದೇಶದ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.

 

ಭೂತಾನ್ ಮುಖ್ಯವಾಗಿ ವಿದ್ಯುತ್(Electricity) ಉತ್ಪಾದನೆಗೆ ಮಹತ್ವ ನೀಡಿದ್ದು, ಭಾರತಕ್ಕೆ ಜಲವಿದ್ಯುತ್ ಮಾರಾಟ ಮಾಡುತ್ತಿದೆ. ಸಿಮೆಂಟ್ (Cement), ಕೃಷಿ ಉತ್ಪನ್ನಗಳು, ಮರಗಳು ಉತ್ಪನ್ನಗಳನ್ನು ಹೆಚ್ಚಾಗಿ ಉತ್ಪಾದನೆ ಮಾಡಲಾಗುತ್ತದೆ. ಭೂತಾನ್ ಅಲ್ಲಿ, ಎಲ್ಲಾ ಕಡೆ ಭೂಮಿ ಇರುವುದರಿಂದ ನೌಕಾದಳದ ಅಗತ್ಯವಿಲ್ಲ. ಈ ರಾಷ್ಟ್ರಕ್ಕೆ ವಾಯುಪಡೆಯೂ ಇಲ್ಲವಂತೆ. ಭೂತಾನ್ನಲ್ಲಿ ಮಹಿಳೆಯರನ್ನು ವಿಶೇಷ ಗೌರವದಿಂದ ಕಾಣಲಾಗುತ್ತದೆ.

ಮಹಿಳೆಯರಿಗೆ(Women) ಪರಂಪರೆಯ ಹಕ್ಕುಗಳನ್ನು ಒದಗಿಸುವ ಸಂಪ್ರದಾಯ ಈ ದೇಶದಲ್ಲಿದ್ದು, ಇಲ್ಲಿ ಮನೆ (House), ಆಸ್ತಿ, ಭೂಮಿ, ವಸ್ತುಗಳು ದೊಡ್ಡ ಮಗಳಿಗೆ ನೀಡಲಾಗುತ್ತದೆ. ಮಗನಿಗೆ ಆಸ್ತಿ ನೀಡಲಾಗುವುದಿಲ್ಲ. ಭೂತಾನ್ನಲ್ಲಿ ಬೀದಿಗಳಲ್ಲಿ ಯಾರು ಕೂಡ ನಿರಾಶ್ರಿತರಂತೆ ವಾಸಿಸುದಿಲ್ಲವಂತೆ. ಒಂದು ವೇಳೆ, ಒಬ್ಬ ವ್ಯಕ್ತಿ ತನ್ನ ಮನೆಯನ್ನು ಕಳೆದುಕೊಂಡಲ್ಲಿ ಅವನು ರಾಜನ(King) ಬಳಿಗೆ ಹೋಗಬೇಕು. ರಾಜ ಅವನಿಗೆ ಮನೆ ಕಟ್ಟಲು, ಕೃಷಿಗಾಗಿ(Agriculture) ಇಂತಿಷ್ಟು ಎಂದು ಭೂಮಿಯನ್ನು(Land) ನೀಡುತ್ತಾರೆ. ಅಷ್ಟೇ ಅಲ್ಲದೆ, ಪ್ರತಿ ಭೂತಾನ್ ನಿವಾಸಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ(Free Medical Service)ಪಡೆಯುವ ಹಕ್ಕನ್ನು ಕೂಡ ಇಲ್ಲಿ ನೀಡಲಾಗಿದೆ. ಹೀಗಾಗಿ, ಭೂತಾನ್ ಜನರು ನೆಮ್ಮದಿಯಿಂದ(Peacefully) ಸಂತೋಷದಿಂದ(Happiest Country) ಜೀವಿಸುತ್ತಿದ್ದಾರೆ.

ಭಾರತ ಜನಸಂಖ್ಯೆಯನ್ನೂ ಹೋಲಿಕೆ ಮಾಡಿದರೆ, 140 ಕೋಟಿಯಾಗಿದ್ದು, ಆದರೆ ಭೂತಾನ್ ಜನಸಂಖ್ಯೆ 8 ಲಕ್ಷಕ್ಕಿಂತ ಕಡಿಮೆಯಿದ್ದು,ಇದು ಎಲ್ಲರನ್ನು ಆಕರ್ಷಿಸುವ ವಿಶೇಷತೆಯನ್ನು ಒಳಗೊಂಡಿದೆ. ಇಲ್ಲಿ ಸರ್ಕಾರ ಎಲ್ಲರಿಗೂ ಮನೆ ಸೌಕರ್ಯ ಒದಗಿಸುತ್ತದೆ. ಆ ದೇಶದಲ್ಲಿ ಹಸಿವಿನಿಂದ ಸಾವುಗಳಾಗುವುದಿಲ್ಲ. ಬಿಕ್ಷುಕರೂ ಇಲ್ಲ, ನಿರಾಶ್ರಿತರೂ ಇಲ್ಲ. ಎಲ್ಲರಿಗೂ ಸ್ವಂತ ಮನೆ ಇವೆ. ಜನರೆಲ್ಲರೂ ಸಂತೋಷಕರ ಜೀವನ ನಡೆಸುತ್ತಾರೆ. ಅಲ್ಲಿ ಎಲ್ಲಾ ರೀತಿಯ ವೈದ್ಯಕೀಯ ವೆಚ್ಚಗಳು ಉಚಿತ. ಔಷಧಿ ವೆಚ್ಚವನ್ನೂ (Medical Expenses)ಸರ್ಕಾರವೇ ಭರಿಸುತ್ತದೆ. ಏಷ್ಯಾದಲ್ಲಿ (Asia) ಯಾವುದೇ ದೇಶದಲ್ಲಿ ಈ ರೀತಿಯ ಸೌಲಭ್ಯವಿಲ್ಲ, ಹಾಗಾಗಿ ಈ ದೇಶ ತುಂಬಾ ವಿಶೇಷವಾಗಿದೆ. ಭೂತಾನ್ ಬಹಳ ಕಾಲದಿಂದಲೂ ಒಂಟಿ ದೇಶವಾಗಿದ್ದು, ಭೂತಾನ್ ದೇಶಕ್ಕೆ ಬೆಂಬಲವಾಗಿ ರಕ್ಷಣೆಯ ವಿಚಾರದಲ್ಲಿ ಸಾಥ್ ನೀಡುವ ಸಲುವಾಗಿ ಭಾರತ ನಿಂತಿದೆ.

ಭೂತಾನ್ನಲ್ಲಿ ವಿದೇಶಿಯರನ್ನು ಮದುವೆ (Marriage)ಮಾಡಿಕೊಳ್ಳುವುದು ನಿಷೇಧವಂತೆ. ಒಂದು ವೇಳೆ ಪ್ರೀತಿಸಿ ಮದುವೆಯಾದರೆ(Love Marriage) ಅಂತಹವರಿಗೆ ಭೂತಾನ್ನಲ್ಲಿ ವಾಸಿಸುವ ಹಕ್ಕು ಇಲ್ವಂತೆ. ಆದರೆ ಅಲ್ಲಿನ ರಾಜನಿಗೆ ಮಾತ್ರ ಈ ನಿಯಮ ಅನ್ವಯವಾಗುವುದಿಲ್ಲ. 2006 ರಲ್ಲಿ ಅಧಿಕಾರ ಪಡೆದ ಕಿಂಗ್ ಜಿಗ್ಮೆ ಖೇಸರ್ ನಾಮ್ಗೇಲ್ ವಾಂಗ್ಚುಕ್ ದೇಶದಲ್ಲಿ ಅನೇಕ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ದೇಶದ ರಾಜಪ್ರಭುತ್ವ, ಪ್ರಜಾಪ್ರಭುತ್ವದ ಸಮಿಶ್ರಣ ವಾಗಿದ್ದು, 1998 ರಲ್ಲಿ ವಾಂಗ್ ಚುಕ್ ತಂದೆ ತನ್ನ ನಿರಂಕುಶ ಅಧಿಕಾರವನ್ನು ತ್ಯಜಿಸಿದ ನಂತರ ಭೂತಾನ್ ಜನರಿಗೆ ಹೆಚ್ಚಿನ ಸ್ವಾತಂತ್ರ್ಯ ಲಭ್ಯವಾಯಿತು ಎನ್ನಲಾಗುತ್ತದೆ.

2008 ರಲ್ಲಿ ಈ ದೇಶದ ಜನರ ಆಂತರಿಕ ಶಾಂತಿಯನ್ನು ಕಾಪಾಡಲು ಸ್ಥೂಲ ರಾಷ್ಟ್ರೀಯ ಸಂತೋಷ ಸಮಿತಿಯನ್ನು ಸ್ಥಾಪನೆ ಮಾಡಲಾಗಿ, ಜನಸಂಖ್ಯೆ ಗಣತಿಯ ಪ್ರಶ್ನೆಪತ್ರಿಕೆಯಲ್ಲಿ ಪ್ರತಿಯೊಬ್ಬರನ್ನು ನಿಮ್ಮ ಜೀವನದಿಂದ ನೆಮ್ಮದಿ ತೃಪ್ತಿಯಿಂದ ಜೀವಿಸುತ್ತಿದ್ದಾರಾ ಎಂಬುದನ್ನು ಕೇಳಲಾಗುತ್ತದೆ. ಇಲ್ಲಿ ಜನರ ಆರ್ಥಿಕ, ಮಾನಸಿಕ ಮೌಲ್ಯಗಳನ್ನು ಲೆಕ್ಕಕ್ಕೆ ತೆಗೆದುಕೊಂಡ ಬಿಕ ಜೀವನಶೈಲಿಯ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದಂತೆ.

ಇನ್ನು ಭೂತಾನ್ ದೇಶದ ಜನರ ಜೀವನ ಶೈಲಿ(Lifestyle), ಆಚಾರ ವಿಚಾರ ದ ಬಗ್ಗೆ ತಿಳಿಯಹೊರಟರೆ, ಪರಿಸರದ ಸಂರಕ್ಷಣೆಯ(Environmental protection) ವಿಷಯದಲ್ಲಿ ಭೂತಾನ್ ವಿಶೇಷ ಗಮನ ವಹಿಸುತ್ತದೆ.ಈ ದೇಶದ ಜನರ ಮರಗಳನ್ನು ಬೆಳೆಸಲು ವಿಶೇಷ ಕಾಳಜಿ ವಹಿಸುವ ಹಿನ್ನೆಲೆ, ದೇಶದಲ್ಲಿ 60% ಕಾಡುಗಳು ಕಣ್ಮನ ಸೆಳೆಯುವ ಪ್ರಕೃತಿ, ಅದ್ಭುತ ಸಂಸ್ಕೃತಿಯ ನೋಟ ವಿದೇಶಿಗರನ್ನು ಹೆಚ್ಚು ಸೆಳೆಯಲು ಕಾರಣವಾಗಿದೆ.1999 ರಿಂದ ಇಲ್ಲಿ ಪ್ಲಾಸ್ಟಿಕ್​ಗಳನ್ನು ನಿಷೇಧ ಹೇರಲಾಗಿದೆ. ಸಿಗರೇಟ್ ಸೇರಿದಂತೆ ಧೂಮಪಾನ ಮಾಡುವುದು ಇಲ್ಲಿನ ಕಾನೂನಿನ ಅನುಸಾರ ವಿರುದ್ಧವಾಗಿದೆ. ಪ್ರವಾಸಿಗರನ್ನು ಹೆಚ್ಚಾಗಿ ಆಹ್ವಾನಿಸಲಾಗಿದೆ.

ಭೂತಾನ್ ಜೀವನ ಶೈಲಿ ಆಹಾರ ಕ್ರಮ ಹೇಗಿದೆ ಗೊತ್ತಾ?
ವಿದೇಶಿ ಸಂಸ್ಕೃತಿಯ ಜೊತೆಗೆ ಜನರ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ಭಾವಿಸಿದ ಹಿನ್ನೆಲೆ ಭೂತಾನ್ನಲ್ಲಿ ಟಿವಿ(TV) ಇಂಟರ್ನೆಟ್ (Internet) ಬಳಕೆಯನ್ನು ನಿಷೇಧ ಹೇರಲಾಗಿತ್ತು. 1999 ರಲ್ಲಿ ಭೂತಾನ್ ದಿನ ಈ ನಿಷೇಧವನ್ನು ತೆಗೆದುಹಾಕಲಾಗಿ, ಭೂತಾನ್ ವಿಶ್ವದಲ್ಲೇ ಟೆಲಿವಿಜನ್(Telivision) ಅನ್ನು ಪ್ರಾರಂಭಿಸಿದ ಕೊನೆಯ ದೇಶ ಎನ್ನಲಾಗಿದೆ. ಭೂತಾನ್ ನಲ್ಲಿ ವಾಸಿಸುವ ಹೆಚ್ಚಿನ ಮಂದಿ ಬೌದ್ಧರಾಗಿರುವ (Buddhism)ಹಿನ್ನೆಲೆ ಇಲ್ಲಿ ಸಸ್ಯಾಹಾರ (Vegitarian) ಕ್ರಮ ಅನುಸರಿಸಲಾಗುತ್ತದೆ. ಇಲ್ಲಿನ ಜನರು ಟೀ , ಉಪ್ಪು, ಮೆಣಸು, ಗ್ರೀನ್ ಟೀನಿ ಕುಡಿಯುತ್ತಾರೆ. ಅನ್ನವನ್ನು ಇಲ್ಲಿ ಪ್ರಾಥಮಿಕ ಅಡುಗೆಯಾಗಿ ಬಳಕೆ ಮಾಡಲಾಗುತ್ತದೆ. ಇಲ್ಲಿನ ಜನರು ಕೆಂಪು ಅಕ್ಕಿಯನ್ನು ಬೆಳೆಯುತ್ತಾರಂತೆ. ಇದು ಗಟ್ಟಿಯಾಗಿದ್ದು, ವಿಚಿತ್ರವಾದ ರುಚಿಯನ್ನು ಹೊಂದಿರುತ್ತದಂತೆ.

ಭೂತಾನ್ ಜನರ ಉಡುಗೆ ತೊಡುಗೆ (Dressing Style) ಬಗ್ಗೆ ನಿಗಾ ವಹಿಸಿದರೆ, ಸಂಪ್ರದಾಯ ಬಟ್ಟೆಗಳನ್ನು ತೊಡುತ್ತಾರೆ. ಶ್ರೇಷ್ಠ ವ್ಯಕ್ತಿಗಳು, ಋಷಿಗಳು ಹಳದಿ ಬಟ್ಟೆಗಳನ್ನು ತೊಡುತ್ತಾರೆ. ಪುರುಷರು ಭಾರವಿರುವ ಮೊಣಕಾಲುವರೆಗೆ ಬರುವ ಬಟ್ಟೆಗಳನ್ನು ತೊಟ್ಟರೆ, ಸ್ತ್ರೀಯರು ಉದ್ದನೆಯ ಧಿರಿಸುಗಳನ್ನು ಧರಿಸುತ್ತಾರಂತೆ. ಸಾಮಾನ್ಯ ಜನರು ಬಿಳಿ ಶಾಲು ಧರಿಸುತ್ತಾರೆ ಎನ್ನಲಾಗಿದೆ. ಸದ್ಯ, ಬದಲಾವಣೆಗೆ ತಕ್ಕಂತೆ ಈಗ ಭೂತಾನ್ನಲ್ಲಿನ ಪರಿಸ್ಥಿತಿಗಳು ಕೂಡ ಬದಲಾಗುತ್ತಿವೆ. ರಾಜಧಾನಿ ಥಿಂಪೂಲ್​ನಲ್ಲಿ ಈಗ ಸ್ಮಾರ್ಟ್ಫೋನ್ಗಳನ್ನೂ ಬಳಕೆ ಮಾಡುತ್ತಾರಂತೆ. ಭೂತಾನ್ನಲ್ಲಿ ಯುವಜನತೆಯ ಸಂಖ್ಯೆ ಹೆಚ್ಚಿದ್ದು, ಇವರು ಸಾಮಾಜಿಕ ಜಾಲತಾಣಗಳನ್ನ ಬಳಕೆ ಮಾಡುತ್ತಾರೆ.ಹೀಗಾಗಿ, ಸ್ಟ್ರೀಟ್ ಫ್ಯಾಶನ್ ಗಳಲ್ಲಿ ಬದಲಾವಣೆಗಳು ಉಂಟಾಗುತ್ತವೆ ಎನ್ನಲಾಗಿದೆ.

ಇದನ್ನೂ ಓದಿ: Talcum powder : ಬೇಸಿಗೆಯಲ್ಲಿ ನೀವು ಟಾಲ್ಕಂ ಪೌಡರ್ ಬಳಸುತ್ತೀರಾ? ಇದು ಅಪಾಯಕಾರಿಯೇ? ಇಲ್ಲಿದೆ ಮಾಹಿತಿ

Leave A Reply

Your email address will not be published.