Radhika pandit : ‘ಅತ್ತಿಗೆ, Yash19 ಅಪ್​ಡೇಟ್ ಕೊಡಿ, ಇಲ್ದಿದ್ರೆ ಸ್ಟ್ರೈಕ್ ಮಾಡ್ತೀವಿ’ – ನಟಿಗೆ ಅಭಿಮಾನಿಗಳ ಬೇಡಿಕೆ!!

radhika pandit : ರಾಕಿಂಗ್ ಸ್ಟಾರ್ ಯಶ್ (rocking star yash) ಅಭಿನಯದ ಕೆಜಿಎಫ್ ಚಿತ್ರ ಸಖತ್ ಸದ್ದು ಮಾಡಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಯಶ್ ಬ್ಲಾಕ್ ಬಸ್ಟರ್ ಮೂವಿ (block buster movie) ಕೆಜಿಎಫ್ 2(KGF 2) ಚಲನಚಿತ್ರದ ಮೂಲಕ ಜನಮನ ಗೆದ್ದು, ಜನಪ್ರೀಯತೆ ಗಳಿಸಿದ್ದು ಮಾತ್ರವಲ್ಲದೆ, ಕನ್ನಡ ಸಿನಿಮಾರಂಗವನ್ನು ಬೇರೆ ಲೆವೆಲ್ ಗೆ ಕೊಂಡೊಯ್ದರು. ಕನ್ನಡ ಚಿತ್ರರಂಗವನ್ನು ಎಲ್ಲರೂ ಒಂದು ಬಾರಿ ತಿರುಗಿ ನೋಡುವಂತೆ ಮಾಡಿದರು. ಅಲ್ಲದೆ, ಈ ಚಿತ್ರ ದಾಖಲೆಯನ್ನೇ ಸೃಷ್ಟಿಸಿತು. ಇನ್ನು ಎರಡು ವಾರ ಕಳೆದರೆ ನಟ ಯಶ್ ನಟನೆಯ ‘ಕೆಜಿಎಫ್ 2’ (KGF 2) ಸಿನಿಮಾ ತೆರೆಗೆ ಬಂದು ಬರೋಬ್ಬರಿ ಒಂದು ವರ್ಷ ಆಗಲಿದೆ. ಆದರೆ, ಒಂದು ವರ್ಷ ಕಳೆದರೂ ಈವರೆಗೆ ಯಶ್ 19ನೇ ಸಿನಿಮಾ (yash 19 film) ಯಾವುದು ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಇದರಿಂದ ಬೇಸತ್ತ ಅಭಿಮಾನಿಗಳು ನೇರವಾಗಿ ಯಶ್ ಪತ್ನಿ ರಾಧಿಕಾ ಪಂಡಿತ್ ರನ್ನು (radhika pandit) ಕೇಳಿದ್ದಾರೆ. ಹೌದು, ಅತ್ತಿಗೆ Yash19 ಅಪ್​ಡೇಟ್ ಕೊಡಿ, ಇಲ್ದಿದ್ರೆ ಧರಣಿ ಕೂರ್ತಿವಿ’ ಎಂದು ಹೇಳಿದ್ದಾರೆ.

 

ಯಶ್ ಕೆಜಿಎಫ್‌ – 2 ಸಿನಿಮಾ ನಂತರ ಬಿಗ್ ಬ್ರೇಕ್ ತೆಗೆದುಕೊಂಡಿದ್ದು, ಇದಂತು ರಾಕಿಭಾಯ್ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಇನ್ನು ಎರಡು ವಾರ ಕಳೆದರೆ ನಟ ಯಶ್ ನಟನೆಯ ‘ಕೆಜಿಎಫ್ 2’ (KGF 2) ಸಿನಿಮಾ ತೆರೆಗೆ ಬಂದು ಬರೋಬ್ಬರಿ ಒಂದು ವರ್ಷ ಆಗಲಿದೆ. ಆದರೆ, ಯಶ್ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಘೋಷಣೆಯಾಗಿಲ್ಲ. ಫ್ಯಾನ್ಸ್ ಈ ಹಿಂದೆಯೂ ರಾಕಿಂಗ್ ಸ್ಟಾರ್ ಗೆ ಪ್ರಶ್ನೆ ಕೇಳಿದ್ದು, ‘ಯಶ್‌19 ಅಪ್‌ಡೇಟ್ ಯಾವಾಗ’ ಎಂದು ಕೇಳಿದ್ದರು. ಪ್ರತಿಬಾರೀ ಯಶ್ ಗೆ ಅಭಿಮಾನಿಗಳ ಪ್ರಶ್ನೆ ಇದೇ ಆಗಿದೆ. ಕೊನೆಗೂ ಯಶ್ ಸಿನಿಮಾ (yash film) ಬಗ್ಗೆ ಮಾಹಿತಿಗಾಗಿ ಕಾದು ಕಾದು ಸುಸ್ತಾದ ಫ್ಯಾನ್ಸ್ ನಟಿ ರಾಧಿಕಾಳನ್ನೇ ಕೇಳಿಬಿಟ್ಟಿದ್ದಾರೆ. ನೀವಾದರೂ ಯಶ್ 19ನೇ ಸಿನಿಮಾ ಬಗ್ಗೆ ಅಪ್ಡೇಟ್ ನೀಡಿ ಇಲ್ಲದಿದ್ದರೆ ಧರಣಿ ಕೂರ್ತಿವಿ ಎಂದು ಪಟ್ಟು ಹಿಡಿದಿದ್ದಾರೆ.

ಇತ್ತೀಚೆಗೆ ರಾಧಿಕಾ ಪಂಡಿತ್ (radhika pandit)ಅವರು ತಮ್ಮ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಬರ್ತ್​ಡೇ ಸಂದರ್ಭದಲ್ಲಿ ತೆಗೆದದ್ದು ಎನ್ನಲಾಗಿದೆ. ಫೋಟೋಗಳಿಗೆ ಭರ್ಜರಿ ಲೈಕ್ಸ್ ಬಂದಿದ್ದು, ಎಲ್ಲರೂ ನಟಿಯ ಫೋಟೋ ಕಂಡು ಮೆಚ್ಚಿಕೊಂಡಿದ್ದಾರೆ. ಜೊತೆಗೆ ವಿಭಿನ್ನ ಕಾಮೆಂಟ್ ಕೂಡ ಬಂದಿದೆ. ಕಮೆಂಟ್ ಮಾಡಿರುವ ಅನೇಕರು ಯಶ್ ಸಿನಿಮಾ ಬಗ್ಗೆ ಮಾಹಿತಿ ಕೇಳಿದ್ದಾರೆ. ಒಬ್ಬರು, ‘ಅತ್ತಿಗೆ.. ಯಶ್19ನೇ ಸಿನಿಮಾ ಬಗ್ಗೆ ಅಪ್​ಡೇಟ್ ಕೊಡಿ. ಇಲ್ಲದಿದ್ದರೆ ಧರಣಿ ಕೂರ್ತ್ತೀವಿ’ ಎಂದು ಕಮೆಂಟ್ ಮಾಡಿದ್ದಾರೆ.

ಈ ಹಿಂದೆ ಯಶ್ ಅವರು ನರ್ತನ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಅದು ನಿಜವಾಗಿಲ್ಲ. ಬಳಿಕ ಶಂಕರ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತು ಕೇಳಿ ಬಂದವು. ಅದರ ಬಗ್ಗೆಯೂ ಯಾವುದೇ ಅಪ್​ಡೇಟ್ ಇಲ್ಲ. ಹಾಗಾಗಿ ಯಶ್ ಫ್ಯಾನ್ಸ್ ಬೇಸತ್ತು ರಾಧಿಕಾ ಅವರ ಬಳಿ ಕೇಳಿಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲದೆ, ಫ್ಯಾನ್ಸ್ ರಾಧಿಕಾ ಪಂಡಿತ್​ ಬಳಿ ಸಿನಿಮಾ ಮಾಡುವಂತೆ ಕೋರಿದ್ದಾರೆ. ಮತ್ತೆ ಸಿನಿರಂಗಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ. ಸದ್ಯ ರಾಧಿಕಾ ತಮ್ಮ ಕುಟುಂಬದ ಕಡೆ ಗಮನ ನೀಡುತ್ತಿದ್ದಾರೆ. ಆದರೆ, ಅವರು ನಟನೆಗೆ ಕಂಬ್ಯಾಕ್ ಮಾಡಲಿ ಅನ್ನೋದು ಅಭಿಮಾನಿಗಳ ಆಸೆ. ಈ ಬಗ್ಗೆ ನಟಿ ಏನು ಪ್ರತಿಕ್ರಿಯೆ ನೀಡೀಲ್ಲ.

ಇದನ್ನೂ ಓದಿ: Small Saving Scheme : ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಜನರಿಗೆ ಶುಭ ಸುದ್ದಿ ನೀಡಿದ ಸರಕಾರ!

Leave A Reply

Your email address will not be published.