Weight Gain : ಮದುವೆ ನಂತರ ನವ ಜೋಡಿಗಳ ತೂಕ ಹೆಚ್ಚಾಗಲು ನಿಜವಾದ ಕಾರಣ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

Weight Gain  : ಮದುವೆ (marriage ) ಅಂದರೆ ವಧು ವರರಿಗೆ ಒಂದು ವಿಶೇಷ ಸಂಭ್ರಮ. ತಮ್ಮ ಜೀವನದಲ್ಲಿ ಪ್ರಮುಖ ಘಟ್ಟ ಎಂದರೂ ತಪ್ಪಾಗಲಾರದು. ಆದರೆ ಸಾಮಾನ್ಯವಾಗಿ ಮದುವೆಯ ನಂತರ ತೂಕ ಹೆಚ್ಚಾಗುವುದು ನವವಿವಾಹಿತರಿಗೆ ಒಂದು ರೀತಿಯ ಸಮಸ್ಯೆ ಆಗಿದೆ. ಆದರೆ ಮದುವೆ ನಂತರ ದಪ್ಪವಾಗಲು (Weight Gain)ನಿಜವಾದ ಕಾರಣ ಏನು ಎಂಬುದು ಬನ್ನಿ ತಿಳಿಯೋಣ.

ಮದುವೆಗೂ ಮುನ್ನ ಎಲ್ಲಾ ಹುಡುಗ ಹುಡುಗಿಯರು ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಆಹಾರದ ಮೇಲೆ ಸಂಪೂರ್ಣ ಗಮನ ಹರಿಸುತ್ತಾರೆ. ಆದರೆ ಮದುವೆಯ ಆಚರಣೆಗಳು ಪ್ರಾರಂಭವಾದ ನಂತರ ತಮ್ಮ ಬಗ್ಗೆ ತಾವು ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಇನ್ನು ಬ್ಯಾಚುಲರ್ ಪಾರ್ಟಿ, ನೆಂಟರ ಭೇಟಿ ಹೀಗೆ ನಾನಾ ಸಂಧರ್ಭದಲ್ಲಿ ಹೆಚ್ಚು ಆಹಾರ ಸೇವಿಸುತ್ತಾರೆ.

ಅದಲ್ಲದೆ ಮದುವೆಯ ಶಾಪಿಂಗ್‌ನಿಂದ ಸಿದ್ಧತೆಗಳವರೆಗೆ ಮತ್ತು ನಂತರ ಮದುವೆಯ ಕಾರ್ಯಕ್ರಮಗಳ ಸಮಯದಲ್ಲಿ ಹೊಸ ಜೋಡಿಗಳು ತುಂಬಾ ಸುಸ್ತಾಗುತ್ತಾರೆ. ಕೆಲವೊಮ್ಮೆ ಅವರು ಸಂಗೀತ ಸಮಾರಂಭಗಳು, ಮೆಹೆಂದಿ ಮತ್ತು ಅರಿಶಿನ ಶಾಸ್ತ್ರ ಆಚರಣೆಗಳಿಂದ ತಡರಾತ್ರಿಯವರೆಗೆ ಎಚ್ಚರಗೊಂಡಿರುತ್ತಾರೆ, ಇದರಿಂದಾಗಿ ಅವರಿಗೆ ನಿದ್ರೆ ಸಾಧ್ಯವಾಗುವುದಿಲ್ಲ ಮತ್ತು ನಿದ್ರೆ ಪೂರ್ಣವಾಗದಿದ್ದಾಗ, ದೇಹವು ಉಬ್ಬುವುದು ಪ್ರಾರಂಭವಾಗುತ್ತದೆ, ಇದರಿಂದಾಗಿ ದಂಪತಿ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ.

ಇನ್ನು ಮದುವೆಯ ಸಂಪ್ರದಾಯ ಆಚರಣೆ ಸಮಯದಲ್ಲಿ, ವಿಭಿನ್ನ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ, ಅದಕ್ಕಾಗಿ ಬಹಳಷ್ಟು ತುಪ್ಪ, ಎಣ್ಣೆ ಮತ್ತು ಸಕ್ಕರೆಯನ್ನು ಬಳಸಲಾಗುತ್ತದೆ. ಈ ಎಲ್ಲಾ ಆಹಾರಗಳು ಕೊಬ್ಬು ವರ್ಧಕಗಳಾಗಿರುತ್ತವೆ. ಬೇಡ ಎಂದರು ತಿನ್ನಲೇ ಬೇಕಾಗುತ್ತದೆ.

ಇನ್ನು ಮದುವೆಯ ನಂತರ ನೆಂಟರಿಷ್ಟರ ಮನೆಗೆ ತೆರಳುವುದು, ಇನ್ನು ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಆಪ್ತರು ನವವಿವಾಹಿತ ದಂಪತಿಗಳನ್ನು ತಮ್ಮ ಮನೆಗೆ ಆಹ್ವಾನಿಸುತ್ತಾರೆ. ಈ ಸಮಯದಲ್ಲಿ, ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ತಿನ್ನುವ ಭಕ್ಷ ಆಹಾರದ ಪ್ರಕಾರವೂ ಕೊಬ್ಬು ಹೆಚ್ಚಿಸುತ್ತದೆ.

ಮದುವೆ ನಂತರ ಹನಿಮೂನ್ ಟ್ರಿಪ್ ಸಮಯದಲ್ಲಿಯೂ ಪ್ರಯಾಣ, ಜೊತೆಗೆ ಹೋಟೆಲ್ ಮತ್ತು ರೆಸ್ಟೋರೆಂಟ್ ಆಹಾರಗಳಿಂದ ಹಾರ್ಮೋನುಗಳಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಇವೆಲ್ಲವೂ ದೇಹದ ತೂಕವನ್ನು ತ್ವರಿತವಾಗಿ ಹೆಚ್ಚಿಸಲು ಕಾರಣಗಳಾಗಿವೆ.

ಇನ್ನು ನವ ವಿವಾಹಿತೆಯರು ತಮ್ಮ ಕುಟುಂಬಕ್ಕಾಗಿ ಅಡುಗೆ ಮಾಡುವುದು ಸಾಮಾನ್ಯ ವಿಚಾರ. ವಿವಾಹಕ್ಕೆ ಮೊದಲು ನೀವು ಸೇವನೆ ಮಾಡುತ್ತಿದ್ದ ಆಹಾರ ಮತ್ತು ವಿವಾಹದ ಬಳಿಕ ನೀವು ಸೇವನೆ ಮಾಡುವಂತಹ ಆಹಾರದಲ್ಲಿ ತುಂಬಾ ವ್ಯತ್ಯಾಸವಿರಬಹುದು. ರುಚಿ, ಖಾರ ಇತ್ಯಾದಿಗಳು ಬದಲಾಗಬಹುದು. ಇದರಿಂದ ವರನಿಗೂ ಆಹಾರ ರುಚಿಯಲ್ಲಿ ಬದಲಾವಣೆಯಾಗುವುದು ಸಹಜ.

ವಿವಾಹಕ್ಕೆ ಮೊದಲು ದೇಹದ ಬಗ್ಗೆ ತುಂಬಾ ಕಾಳಜಿ ವಹಿಸಿ ಅದರ ಆರೈಕೆ ಮಾಡುತ್ತಲಿದ್ದೀರಿ. ಆದರೆ ವಿವಾಹದ ಬಳಿಕ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುವ ಕಾರಣದಿಂದಾಗಿ ದೇಹದ ಆರೈಕೆಗೆ ಹೆಚ್ಚು ಗಮನ ನೀಡಲು ಆಗಲ್ಲ. ಹೀಗಾಗಿ ವ್ಯಾಯಾಮ ಕೂಡ ಮಾಡದೆ ಇರುವರು. ಜಿಮ್ ನ ಬದಲಾಗಿ ಅವರು ಮನೆಯಲ್ಲೇ ಇರಲು ಬಯಸುವರು. ಹೀಗಾಗಿ ವಿವಾಹದ ಬಳಿಕ ದೇಹದ ತೂಕವು ಹೆಚ್ಚಾಗುವ ಸಾಧ್ಯತೆ ಹೆಚ್ಚು.

ಈ ಎಲ್ಲಾ ಕಾರಣದಿಂದ ನವಜೋಡಿಗಳು ದಪ್ಪ ಶರೀರವನ್ನು ಹೊಂದುತ್ತಾರೆ

Leave A Reply

Your email address will not be published.