LPG cylinder Price : ನಾಳೆಯಿಂದ LPG ದರ ಬದಲಾಗಲಿದೆ!

LPG Cylinder Price:  ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆ ಬಿಸಿ ಜನರನ್ನು ಹೈರಾಣಾಗಿಸಿದೆ. ತೈಲ ಮಾರುಕಟ್ಟೆ ಕಂಪನಿಗಳು (OMC) 2023ರ ಮಾರ್ಚ್ ನಲ್ಲಿ  ಎಲ್ಪಿಜಿ ಸಿಲಿಂಡರ್ನ(LPG Gas) ಬೆಲೆ ಏರಿಕೆ ಮಾಡಿದ್ದು, ಸಾಮಾನ್ಯ ಜನತೆಗೆ ಬಿಸಿ ತುಪ್ಪದಂತೆ ಪರಿಣಮಿಸಿದ್ದು, ಇದು ವಾಣಿಜ್ಯೋದ್ದೇಶದ ಗ್ರಾಹಕರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಡುವೆ, ಗೃಹಬಳಕೆಯ ಸಿಲಿಂಡರ್( LPG GAS) ದರ 50 ರೂಪಾಯಿ ಹೆಚ್ಚಳವಾಗಿದೆ.

 

ಹೊಸ ಹಣಕಾಸು ವರ್ಷ ಏಪ್ರಿಲ್ 1, 2023 ರಂದು ಶುರುವಾಗಲು, ಒಂದೇ ದಿನ ಅಷ್ಟೇ ಬಾಕಿ ಇದ್ದು, ಪ್ಯಾನ್-ಆಧಾರ್ ಲಿಂಕ್ ಮಾಡುವ, ಡಿಮ್ಯಾಟ್ ಖಾತೆಗಳಿಗೆ ನಾಮಿನಿಗಳನ್ನು ಸೇರಿಸುವುದು ಇತ್ಯಾದಿಗಳ ಕೊನೆಯ ದಿನಾಂಕವನ್ನು ವಿಸ್ತರಿಸುವ ಮೂಲಕ ಕೇಂದ್ರ ಸರಕಾರವು ಕೋಟಿಗಟ್ಟಲೆ ಜನರಿಗೆ ಪರಿಹಾರ ನೀಡುತ್ತಾ ಬಂದಿದೆ. ಅದರಲ್ಲಿಯೂ ಎಲ್ಪಿಜಿಯು ದೇಶದ ಜನತೆಯ ದಿನಬಳಕೆಯ ಅಗತ್ಯ ವಸ್ತುಗಳಲ್ಲಿ ಒಂದಾಗಿದ್ದು, ಗ್ರಾಹಕರು LPG ಬೆಲೆಯಲ್ಲಿ (LPG Cylinder prices today)  ಪಡೆಯಲು ಪರಿಹಾರ  ಸಿಗುವುದೇ ಎಂದು ಎದುರು ನೋಡುತ್ತಿದ್ದಾರೆ.

ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ(LPG Gas) ಹೆಚ್ಚಳವಾಗುವುದೋ(LPG cylinder price will change from tomorrow) ಇಲ್ಲವೇ ಕಡಿಮೆ ಆಗುವುದೋ? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡಿದೆ.  LPG ಸಿಲಿಂಡರ್ಗಳ ಬೆಲೆಗಳನ್ನು ಏಪ್ರಿಲ್ 1, 2023 ರಂದು ಪರಿಶೀಲನೆ  ಮಾಡಬಹುದಾಗಿದೆ. ಪೆಟ್ರೋಲಿಯಂ ಕಂಪನಿಗಳು ಹೊಸ ಹಣಕಾಸು ವರ್ಷದ ಮೊದಲ ದಿನದಂದು ದರಗಳನ್ನು ನವೀಕರಿಸುತ್ತಾ ಬರುತ್ತದೆ. ಈ ವರ್ಷ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ನ ಬೆಲೆ ರೂ. 103 ರಷ್ಟು ಹೆಚ್ಚಳವಾಗಿದ್ದು, ಆದರೆ ವಾಣಿಜ್ಯ ಸಿಲಿಂಡರ್ ಸುಮಾರು ರೂ. 134 ರಷ್ಟು ಅಗ್ಗವಾಗಿದೆ.

ಮಾರ್ಚ್ 31, 2023 ರಂದು ದೇಶೀಯ LPG ಸಿಲಿಂಡರ್ ಬೆಲೆಗಳ ವಿವರ :

ನಗರದ ಹೆಸರು ಬೆಲೆ (ರೂ)

ಶ್ರೀನಗರ ರೂ. 1,219

ದೆಹಲಿ ರೂ. 1,103

ಪಾಟ್ನಾ ರೂ. 1,201

ಲೇಹ್ ರೂ. 1,299

ಐಜ್ವಾಲ್ ರೂ. 1,260

ಅಂಡಮಾನ್ ರೂ.1,179

ರಾಂಚಿ ರೂ. 1,160.5

ಶಿಮ್ಲಾ ರೂ. 1,147.5

ಲಕ್ನೋ ರೂ. 1,140.5

ಕೋಲ್ಕತ್ತಾ ರೂ. 1,129

ಚೆನ್ನೈ ರೂ. 1,118.5

ಬೆಂಗಳೂರು ರೂ. 1,115.5

ಮುಂಬೈ ರೂ. 1,112.5

ಅಹಮದಾಬಾದ್ ರೂ. 1,110

ಚಂಡೀಗಢ ರೂ. 1,112.5

ಪ್ರತಿ ಕುಟುಂಬವು ಒಂದು ವರ್ಷದಲ್ಲಿ ಸಬ್ಸಿಡಿ ದರದಲ್ಲಿ ತಲಾ 14.2 ಕೆಜಿಯ 12 ಸಿಲಿಂಡರ್ ಗಳಿಗೆ ಅರ್ಹವಾಗಿದ್ದು, ಅದರ ಮೇಲೂ, ಗ್ರಾಹಕರು LPG ಸಿಲಿಂಡರ್ಗಳ ಯಾವುದೇ ಹೆಚ್ಚುವರಿ ಖರೀದಿ ಮಾಡಿದರೆ ಮಾರುಕಟ್ಟೆ ಬೆಲೆಗೆ ಮಾಡಬೇಕಾಗುತ್ತದೆ. ಪಹಲ್ (ಎಲ್ಪಿಜಿಯ ನೇರ ಲಾಭ ವರ್ಗಾವಣೆ) ಯೋಜನೆಯಡಿ, ಗ್ರಾಹಕರು ಸಬ್ಸಿಡಿ ದರದಲ್ಲಿ ಎಲ್ಪಿಜಿ ಸಿಲಿಂಡರ್ಗಳನ್ನು ಕಲ್ಪಿಸುತ್ತದೆ. ಸಬ್ಸಿಡಿಯು ವಿದೇಶಿ ವಿನಿಮಯ ದರಗಳು ಮತ್ತು ಕಚ್ಚಾ ತೈಲ ಬೆಲೆಗಳಂತಹ ಹಲವಾರು ಅಂಶಗಳನ್ನು ಅವಲಂಬಿತವಾಗಿರುತ್ತದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಹೆಚ್ಚಿನ ಬೆಲೆಗಳ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಸರಕಾರವು ಈ ತಿಂಗಳ ಆರಂಭದಲ್ಲಿ ಎಲ್ಪಿಜಿ ಸಿಲಿಂಡರ್ಗೆ ರೂ. 200 ಸಬ್ಸಿಡಿಯನ್ನು ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ.  ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು PMUY ಯ ಫಲಾನುಭವಿಗಳಿಗೆ ವರ್ಷಕ್ಕೆ 12 ರೀಫಿಲ್ಗಳಿಗೆ 14.2 ಕೆಜಿ ಸಿಲಿಂಡರ್ಗೆ ರೂ. 200 ಸಬ್ಸಿಡಿಯನ್ನು ನೀಡಲು ಅನುಮೋದಿಸಲಾಗಿದೆ  ಎಂದು I&B ಸಚಿವ ಅನುರಾಗ್ ಠಾಕೂರ್ (Anurag Thakur) ಮಾಹಿತಿ ನೀಡಿದ್ದಾರೆ. ಈ ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

Leave A Reply

Your email address will not be published.