Kitchen Tips : ಈ ಟಿಪ್ಸ್ ಫಾಲೋ ಮಾಡಿದಲ್ಲಿ ಗ್ಯಾಸ್‌ನಲ್ಲಿಟ್ಟ ಹಾಲು ಬಿಲ್ ಕುಲ್ ಉಕ್ಕಿ ಹರಿಯಲ್ಲ!!

Stop Milk Overflowing : ನಾವು ಒಂದು ದಿನ ಮನೆಯಲ್ಲಿ ಅಡುಗೆ ಮಾಡದೆ ಹೊರಗೆ ಊಟ ಮಾಡಬಹುದು. ಆದರೆ ಮನೆಯಲ್ಲಿ ದಿನಾ ಹಾಲಿನ ಉಪಯೋಗ ಇದ್ದೇ ಇದೆ. ಸದ್ಯ ಹಾಲನ್ನು ಬಿಸಿಮಾಡಲು ಒಲೆಯ ಅಥವಾ ಗ್ಯಾಸ್ ಮೇಲೆ ಇರಿಸಿದಾಗ, ಹಾಲು ಉಕ್ಕದಂತೆ ಎಷ್ಟು ಕಾಳಜಿ ವಹಿಸಿದರೂ ಹಾಲು ಉಕ್ಕಿ ಹೋಗುತ್ತದೆ. ಇನ್ನು ಹಠದಲ್ಲಿ ಸ್ಟವ್ ಎದುರಲ್ಲೇ ನಿಂತಿದ್ದರೂ ಹಾಲು ಕುದಿಯೋದೇ ಇಲ್ಲ. ಒಟ್ಟಿನಲ್ಲಿ ಒಲೆಯಲ್ಲಿ ಹಾಲು ಇಟ್ಟು ನೀವು ಒಂದು ಕ್ಷಣಕ್ಕೆ ಯಾಮಾರಿದರು ಸಾಕು ಹಾಲು ಉಕ್ಕಿ ಹರಿದಿರುತ್ತದೆ. ಇದೊಂದು ಮಹಿಳೆಯರಿಗೆ ದೊಡ್ಡ ಸವಾಲಿನ ಸಮಸ್ಯೆ ಅಂದರೂ ತಪ್ಪಾಗದು. ಈ ಕಾರಣಕ್ಕಾಗಿ ಹಾಲು ಕುದಿಯುವ ಮತ್ತು ಪಾತ್ರೆಯಿಂದ ಬೀಳದಂತೆ (Stop Milk Overflowing) ತಡೆಯಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

 

ಮಾಸ್ಟರ್ ಚೆಫ್ ಪಂಕಜ್ ಬದೌರಿಯಾ ಅವರು ತಮ್ಮ ಇನ್‌ಸ್ಟಾಗ್ರಾಮ್ ‘ಪಂಕಜ್ ಕೆ ನುಸ್ಖೆ’ ಯಲ್ಲಿ ಹಾಲು ಕುದಿಯುವುದನ್ನು ತಡೆಯುವ ಟಿಪ್ಸ್‌ನ್ನು ಹಂಚಿಕೊಂಡಿದ್ದು, ನೀವು ಸಹ ಈ ಸಲಹೆಯನ್ನು ಅನುಸರಿಸಬಹುದಾಗಿದೆ.

​ ಹಾಲು ಕುದಿದ ನಂತರ ಉಕ್ಕಿ ಹರಿಯದಂತೆ ತಡೆಯಲು ನೀವು ಮರದ ಚಮಚವನ್ನು ಸಹ ಬಳಸಬಹುದು. ಅದನ್ನು ಬಿಸಿ ಮಾಡುವಾಗ ಹಾಲು ಇರುವ ಪಾತ್ರೆಯ ಮೇಲೆ ಇರಿಸಿ. ಇದರಿಂದಾಗಿ ಹಾಲು ಪಾತ್ರೆಯ ಹೊರಗೆ ಬೀಳುವುದಿಲ್ಲ.

ಇನ್ನು ತುಪ್ಪ ಅಥವಾ ಎಣ್ಣೆಯನ್ನು ಲೇಪಿಸಿದ ನಂತರ ಪಾತ್ರೆಯಲ್ಲಿ ಹಾಲನ್ನು ಬಿಸಿಮಾಡಲು ಸಲಹೆ ನೀಡಲಾಗಿದೆ. ಹೀಗೆ ಮಾಡುವುದರಿಂದ ಹಾಲು ಉಕ್ಕಿ ಹೊರ ಬೀಳುವುದಿಲ್ಲ.

ಹಾಲು ಕುದಿಯುವ ಮತ್ತು ಪಾತ್ರೆಯಿಂದ ಬೀಳದಂತೆ ತಡೆಯಲು, ಮೇಲಿನ ಕ್ರಮಗಳ ಹೊರತಾಗಿ, ನೀವು ಅದಕ್ಕೆ ನೀರನ್ನು ಸೇರಿಸುವ ವಿಧಾನವನ್ನು ಸಹ ಪ್ರಯತ್ನಿಸಬಹುದು. ಇದಕ್ಕಾಗಿ, ಮೊದಲು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಬಿಸಿ ಮಾಡಿ, ನಂತರ ಅದರಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿ.

ಈ ಮೇಲಿನ ಕ್ರಮಗಳ ಮೂಲಕ ನೀವು ಹಾಲು ಉಕ್ಕುವುದನ್ನು ತಡೆಯಬಹುದಾಗಿದೆ.

 

Leave A Reply

Your email address will not be published.