SBI Credit Card : ಎಸ್‌ಬಿಐ ಕ್ರೆಡಿಟ್ ಕಾರ್ಡ್ 2023ರಲ್ಲಿ ಶುಲ್ಕ ಎಷ್ಟಿದೆ?

SBI Credit Card : ತಂತ್ರಜ್ಞಾನ ದಿನೇ ದಿನೇ ಬೆಳವಣಿಗೆ ಹೊಂದುತ್ತಿದ್ದು, ಜಾಗತಿಕ ಮಾರುಕಟ್ಟೆ ವ್ಯವಹಾರ ಅತ್ಯಂತ ವೇಗದಲ್ಲಿ ಸಾಗುತ್ತಿದೆ. ಪ್ರಸ್ತುತ ಜನರು ನಗದು ಬಳಕೆ ಮಾಡುವುದಕ್ಕಿಂತ ಹೆಚ್ಚಾಗಿ ನಗದುರಹಿತ ವಹಿವಾಟು ಮಾಡುವುದು ಹೆಚ್ಚಾಗಿದ್ದು, ಆನ್‌ಲೈನ್ (online ), ಯುಪಿಐ(UPI) ವಹಿವಾಟು ಹಾಗೂ ಎಟಿಎಂ ಕಾರ್ಡ್‌ಗಳ (ATM card ) ಬಳಕೆ ಹೆಚ್ಚಾಗಿ ಮಾಡಲಾಗುತ್ತದೆ. ಈ ಮಧ್ಯೆ ನಾವು ಎಟಿಎಂ ಕಾರ್ಡ್ ವಿಚಾರಕ್ಕೆ ಬಂದಾಗ, ಹೆಚ್ಚಿನ ಜನರು ಈಗ ಡೆಬಿಟ್ ಕಾರ್ಡ್‌ಗಿಂತ ಅಧಿಕವಾಗಿ ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಾರೆ. ಕ್ರೆಡಿಟ್ ಕಾರ್ಡ್ ನಮಗೆ ನಗದುರಹಿತ ವಹಿವಾಟು ನಡೆಸಲು ಸಾಧ್ಯ ಮಾಡಿಕೊಡುತ್ತದೆ.

 

ಜನರು ತಮ್ಮ ದಿನನಿತ್ಯದ ವಹಿವಾಟಿಗು ಕೂಡಾ ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಿದ್ದಾರೆ.
ಈ ನಡುವೆ ಎಸ್‌ಬಿಐನ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದಾದರೆ ಕ್ರೆಡಿಟ್ ಕಾರ್ಡ್‌ಗೆ ವಿಧಿಸುವ ಶುಲ್ಕದ ಬಗ್ಗೆ ತಿಳಿದಿರಬೇಕಾಗುತ್ತದೆ.

ನಿಯಮದ ಪ್ರಕಾರ ಒಬ್ಬ ಗ್ರಾಹಕನು ಎಸ್‌ಬಿಐನ (State Bank of India) ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಶುಲ್ಕ, ಇತರೆ ಮಾಹಿತಿಗಳ ಬಗ್ಗೆ ತಿಳಿದಿರಬೇಕಾಗುತ್ತದೆ.

ಮುಖ್ಯವಾಗಿ ಗ್ರಾಹಕರು ಯಾರು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಬಾಡಿಗೆಯನ್ನು ಪಾವತಿಸುತ್ತಾರೋ ಅವರಿಗೆ 199 ರೂಪಾಯಿ ಶುಲ್ಕ + ತೆರಿಗೆ ಅನ್ವಯವಾಗಲಿದೆ. 99 ರೂಪಾಯಿಗಿಂತ ಅಧಿಕ ತೆರಿಗೆ ಅನ್ವಯವಾಗಲಿದೆ.

ವಾರ್ಷಿಕ & ರಿನಿವಲ್ ಶುಲ್ಕ :
ಎಸ್‌ಬಿಐ ಕ್ರೆಡಿಡ್ ಕಾರ್ಡ್‌ಗೆ (SBI Credit Card)ವಾರ್ಷಿಕ ಹಾಗೂ ರಿನಿವಲ್ ಶುಲ್ಕ ಇರುತ್ತದೆ. ಕ್ರೆಡಿಟ್ ಕಾರ್ಡ್ ಅನ್ನು ಪಡೆಯುವ ಸಂದರ್ಭದಲ್ಲಿ ಇವರೆಡು ಶುಲ್ಕಗಳನ್ನು ಪಾವತಿ ಮಾಡಬೇಕಾಗುತ್ತದೆ. ಕಾರ್ಡ್‌ನ ವಿಧ ಹಾಗೂ ಕಾರ್ಡ್‌ದಾರರ ಆಧಾರದಲ್ಲಿ ಈ ಶುಲ್ಕವು ಬದಲಾವಣೆಯಾಗುತ್ತದೆ.

ನಗದು ಮುಂಗಡ ಶುಲ್ಕಗಳು :
ಎಸ್‌ಬಿಐ ಕಾರ್ಡ್‌ದಾರರು ಯಾವುದೇ ತುರ್ತು ಸಂದರ್ಭದಲ್ಲಿ ಹಣ ಬೇಕಾದಾಗ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಎಟಿಎಂಗಳಲ್ಲಿ ನಗದನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಇಂತಹ ಯಾವುದೇ ವಿತ್‌ಡ್ರಾಗೆ ವಹಿವಾಟು ಶುಲ್ಕವನ್ನು ವಿಧಿಸಲಾಗುತ್ತದೆ. ಅದು ಕಾರ್ಡ್‌ದಾರರ ಮುಂದಿನ ಸ್ಟೇಟ್‌ಮೆಂಟ್‌ನಲ್ಲಿ ಇರುತ್ತದೆ.

ದೇಶೀಯ ಎಟಿಎಂಗಳಲ್ಲಿ ಶೇಕಡ 2.5 ಅಥವಾ 500 ರೂಪಾಯಿ ವಹಿವಾಟು ಶುಲ್ಕ ಇರುತ್ತದೆ. ಅಂತಾರಾಷ್ಟ್ರೀಯ ಎಟಿಎಂಗಳಲ್ಲಿ ಶೇಕಡ 2.5 ಅಥವಾ 500 ರೂಪಾಯಿ ಈ ಪೈಕಿ ಯಾವುದು ಹೆಚ್ಚು ಆ ಶುಲ್ಕ ಇರುತ್ತದೆ.

ನಗದು ಪಾವತಿ ಶುಲ್ಕ :
ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರು ಕಾರ್ಡ್ ಬಳಕೆ ಮಾಡಿದ ಬಳಿಕ ನೀಡಬೇಕಾದ ಸಾಲದ ಮೊತ್ತವನ್ನು ಎಸ್‌ಬಿಐನ ಬ್ರಾಂಚ್‌ಗೆ ಭೇಟಿ ನೀಡಿಯು ಪಾವತಿಸಬಹುದಾಗಿದೆ. ಪೇ ಸ್ಲಿಪ್‌ನಲ್ಲಿ ಅಗತ್ಯ ಮಾಹಿತಿ ಮತ್ತು ಮೊತ್ತವನ್ನು ಬರೆದು, ಬ್ರಾಂಚ್‌ನ ಕೌಂಟರ್‌ನಲ್ಲಿ ನಗದು ನೀಡುವ ಮೂಲಕ ಕ್ರೆಡಿಟ್ ಕಾರ್ಡ್ ಸಾಲವನ್ನು ಮರುಪಾವತಿ ಮಾಡಬಹುದಾಗಿದೆ. ಆ ಪಾವತಿಗೆ ಕಾರ್ಡ್‌ದಾರರಿಗೆ ರಶೀದಿ ಲಭ್ಯವಾಗಲಿದೆ. ಆದರೆ ಇದಕ್ಕೆ ಶುಲ್ಕ ಇರುತ್ತದೆ. 250 ರೂಪಾಯಿ + ಇತರೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಬಡ್ಡಿ ರಹಿತ ಗ್ರೇಸ್ ಅವಧಿ: ವ್ಯಾಪಾರಿಯು ಕ್ಲೇಮ್ ಮಾಡುವವರೆಗೆ, ಬಡ್ಡಿ-ಮುಕ್ತ ಕ್ರೆಡಿಟ್ ಅವಧಿಯು 20 ಮತ್ತು 50 ದಿನಗಳ ನಡುವೆ ಇರಬಹುದು.

ಹಣಕಾಸು ಶುಲ್ಕಗಳು :
ವಹಿವಾಟಿನ ದಿನಾಂಕದಿಂದ ಬಾಕಿ ಉಳಿದಿರುವ ಇಎಂಐ ಪಾವತಿಗಳ ಸೇರಿ ಎಲ್ಲ ವಹಿವಾಟುಗಳ ಮೇಲಿನ ಮಾಸಿಕ ಬಡ್ಡಿದರದ ಮೇಲೆ ಹಣಕಾಸು ಶುಲ್ಕವನ್ನು ವಿಧಿಸಲಾಗುತ್ತದೆ. ಯಾವುದೇ ನಗದು ಮುಂಗಡಗಳ ಮೇಲೆ ಕಾರ್ಡ್‌ದಾರರು ತಮ್ಮ ಖಾತೆಯಲ್ಲಿ ಪೂರ್ಣ ಮೊತ್ತವನ್ನು ಪಾವತಿಸದಿರಲು ನಿರ್ಧರಿಸಿದರೆ ಮರುಪಾವತಿಯಾಗುವವರೆಗೆ ಶುಲ್ಕ ಅನ್ವಯವಾಗುತ್ತದೆ.

ಈ ರೀತಿಯಾಗಿ ಎಸ್‌ಬಿಐ ಹೊಸದಾಗಿ ಶುಲ್ಕವನ್ನು ಪರಿಷ್ಕರಣೆ ಮಾಡಿದೆ. ಈ ಹೊಸ ಶುಲ್ಕವು ಮಾರ್ಚ್ 17, 2023ರಿಂದ ಅನ್ವಯವಾಗುತ್ತದೆ. ಈಗಾಗಲೇ ಎಸ್‌ಬಿಐನ ಕ್ರೆಡಿಟ್ ಕಾರ್ಡ್‌ದಾರರಿಗೆ ಎಸ್ಎಂಎಸ್ ಹಾಗೂ ಇಮೇಲ್ ಮೂಲಕ ಈ
ನೂತನ ಶುಲ್ಕದ ಬಗ್ಗೆ ಮಾಹಿತಿ ನೀಡಲಾಗಿದೆ.

Leave A Reply

Your email address will not be published.